ಕಾಂಗ್ರೆಸ್‌ನಿಂದ ಭೋವಿ ಸಮಾಜಕ್ಕೆ ನಿರಂತರ ಅನ್ಯಾಯ

| Published : Apr 03 2024, 01:32 AM IST

ಕಾಂಗ್ರೆಸ್‌ನಿಂದ ಭೋವಿ ಸಮಾಜಕ್ಕೆ ನಿರಂತರ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ಟಿಕೆಟ್ ಹಂಚಿಕೆ ಬಗ್ಗೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಭೋವಿ ಸಮುದಾಯ ಇದೀಗ ಕಾಂಗ್ರೆಸ್ ಬಗ್ಗೆಯೂ ತೀವ್ರ ಅಸಮಧಾನ ಹೊರಹಾಕಿದೆ. ಟಿಕೆಟ್ ಹಂಚಿಕೆ ಬಗ್ಗೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಭೋವಿ ಸಮುದಾಯ ಇದೀಗ ಕಾಂಗ್ರೆಸ್ ಬಗ್ಗೆಯೂ ತೀವ್ರ ಅಸಮಧಾನ ಹೊರಹಾಕಿದೆ. ಟಿಕೆಟ್ ಹಂಚಿಕೆ ಬಗ್ಗೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಭೋವಿ ಸಮುದಾಯ ಇದೀಗ ಕಾಂಗ್ರೆಸ್ ಬಗ್ಗೆಯೂ ತೀವ್ರ ಅಸಮಧಾನ ಹೊರಹಾಕಿದೆ. ಟಿಕೆಟ್ ಹಂಚಿಕೆ ಬಗ್ಗೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಭೋವಿ ಸಮುದಾಯ ಇದೀಗ ಕಾಂಗ್ರೆಸ್ ಬಗ್ಗೆಯೂ ತೀವ್ರ ಅಸಮಧಾನ ಹೊರಹಾಕಿದೆ. ಟಿಕೆಟ್ ಹಂಚಿಕೆ ಬಗ್ಗೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಭೋವಿ ಸಮುದಾಯ ಇದೀಗ ಕಾಂಗ್ರೆಸ್ ಬಗ್ಗೆಯೂ ತೀವ್ರ ಅಸಮಧಾನ ಹೊರಹಾಕಿದೆ.

ಚಿತ್ರದುರ್ಗ: ಟಿಕೆಟ್ ಹಂಚಿಕೆ ಬಗ್ಗೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಭೋವಿ ಸಮುದಾಯ ಇದೀಗ ಕಾಂಗ್ರೆಸ್ ಬಗ್ಗೆಯೂ ತೀವ್ರ ಅಸಮಧಾನ ಹೊರಹಾಕಿದೆ. ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದುರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ, ಕಾಂಗ್ರೆಸ್ ಪಕ್ಷ ಭೋವಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ ಎಂದೂ ಗಂಭೀರ ಆರೋಪ ಮಾಡಿದರು.

ರಾಜ್ಯದ 5 ಮೀಸಲು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಭೋವಿ ಸಮುದಾಯಕ್ಕೆ ನೀಡಲು ಹಲವು ಬಾರಿ ಸಮಾಜದ ಸ್ವಾಮೀಜಿಯೊಂದಿಗೆ ಮುಖಂಡರು ಸೇರಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೆವು. ಆದರೂ ಕಾಂಗ್ರೆಸ್ ಸಮಾಜಕ್ಕೆ ಟಿಕೆಟ್ ನೀಡದೆ ಉದಾಸೀನ ತೋರಿದೆ. ರಾಜ್ಯಸಭೆ, ವಿಧಾನಪರಿಷತ್ ಮತ್ತು 70 ನಿಗಮ ಮಂಡಳಿಗಳಿಗೂ ಅವಕಾಶ ನೀಡಿಲ್ಲ. 1984ರಿಂದಲೂ ಲೋಕಸಭೆಗೆ ಕಾಂಗ್ರೆಸ್ ಭೋವಿ ಸಮಾಜಕ್ಕೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಈ ಬಗ್ಗೆ ಚರ್ಚಿಸಿ ನಿರ್ಣಯಕೈಗೊಳ್ಳಲು ಬೆಂಗಳೂರಿನಲ್ಲಿ ಅತೀ ಶೀಘ್ರ ಸಮಾಜದ ಮುಖಂಡರ ಸಭೆ ಕರೆಯಲಾಗುವುದು ಎಂದರು.

ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಕಾಂಗ್ರೆಸ್ ಭೋವಿ ಸಮಾಜಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಪಕ್ಷದ ಮೇಲೆ ಭೋವಿ ಸಮಾಜ ಅಸಮಾಧಾನಗೊಂಡಿದೆ. ಟಿಕೆಟ್ ನೀಡುವುದಾಗಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದಿಲ್ಲ. ಟಿಕೆಟ್ ನೀಡುವ ಪ್ರಶ್ನೆ ಎದುರಾದಾಗಲೆಲ್ಲ ಎಡ, ಬಲ ಎಂದೇ ಚರ್ಚಿಸಲಾಗುತ್ತಿದೆ. ಭೋವಿ ಸಮಾಜವನ್ನು ಪರಿಗಣಿಸುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು. ಆದರೆ ಕಾಂಗ್ರೆಸ್ ವಿರುದ್ಧ ಬಂಡಾಯವಿಲ್ಲ ಎಂದರು.

ಮುಖಂಡ ನೇರ್ಲಗುಂಟೆ ರಾಮಪ್ಪ ಮಾತನಾಡಿ, ಭೋವಿ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷ ಚಿತ್ರದುರ್ಗದಲ್ಲಿ ಭೋವಿ ಸಮಾಜಕ್ಕೆ ಟಿಕೆಟ್ ನೀಡಬಹುದಿತ್ತು. ರಾಜ್ಯದ ಐದು ಮೀಸಲು ಕ್ಷೇತ್ರದಲ್ಲಿ ಮೂರು ಬಲ ಮತ್ತು ಎರಡು ಎಡಗೈಗೆ ನೀಡಿದ್ದಾರೆ. ಸಾಮಾಜಿಕ ನ್ಯಾಯದಡಿ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಈಗಲೂ ಅವಕಾಶವಿದ್ದು, ಭೋವಿ ಸಮಾಜಕ್ಕೆ ಟಿಕೆಟ್ ನೀಡುವ ವಿಶ್ವಾಸವಿದೆ. ಹಲವು ಸಮಯದಲ್ಲಿ ಬಿ ಫಾರಂ ಬದಲಾಯಿಸಿದ ಉದಾಹರಣೆಗಳಿವೆ. ಇದೇ ರೀತಿ ಆಗಬಹುದು ಎಂಬ ನಂಬಿಕೆ ಎಂದರು.

ಭೋವಿ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿ.ತಿಪ್ಪೇಸ್ವಾಮಿ, ಪ್ರಕಾಶ್ ಮತ್ತು ಕುಮಾರ್ ಇದ್ದರು.