ಅಭಿವೃದ್ಧಿ ದೃಷ್ಟಿಯಿಂದ ಯೋಜನಾಧಿಕಾರಿಯನ್ನು ಇಲ್ಲೆ ಮುಂದುವರಿಸಿ: ನಗರಸಭಾಧ್ಯಕ್ಷೆ ರೇಖಾ ರಮೇಶ್

| Published : Dec 17 2024, 12:45 AM IST

ಅಭಿವೃದ್ಧಿ ದೃಷ್ಟಿಯಿಂದ ಯೋಜನಾಧಿಕಾರಿಯನ್ನು ಇಲ್ಲೆ ಮುಂದುವರಿಸಿ: ನಗರಸಭಾಧ್ಯಕ್ಷೆ ರೇಖಾ ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜಿಲ್ಲಾ ನಗರಸಭಾಭಿವೖದ್ದಿ ಕೋಶದ ಯೋಜನಾಧಿಕಾರಿಗಳನ್ನು ಅಭಿವೃದ್ಧಿ ದೃಷ್ಟಿಯಿಂದ ಇಲ್ಲೆ ಮುಂದುವರೆಸಿ ಎಂದು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೆವೆ ಎಂದು ನಗರಸಭಾಧ್ಯಕ್ಷೆ ರೇಖಾ ರಮೇಶ್ ತಿಳಿಸಿದರು. ಕೊಳ್ಳೇಗಾಲದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಜಿಲ್ಲಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಚಾಮರಾಜನಗರ ಜಿಲ್ಲಾ ನಗರಸಭಾಭಿವೖದ್ದಿ ಕೋಶದ ಯೋಜನಾಧಿಕಾರಿಗಳನ್ನು ಅಭಿವೃದ್ಧಿ ದೃಷ್ಟಿಯಿಂದ ಇಲ್ಲೆ ಮುಂದುವರೆಸಿ ಎಂದು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೆವೆ ಎಂದು ನಗರಸಭಾಧ್ಯಕ್ಷೆ ರೇಖಾ ರಮೇಶ್ ತಿಳಿಸಿದರು.

ರಸ್ತೆ ಅಗಲೀಕರಣಕ್ಕೆ ನಕ್ಷೆ ಗುರುತಿಸುವ ಸಂಬಂಧ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ನಗರಸಭೆಯ ಪ್ರದೀಪ್, ಪ್ರಭಾಕರ್, ನಮಿಯಾ ಅವರನ್ನು ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ, ಇವರ ನಂತರ ಬರುವ ಅಧಿಕಾರಿಗಳು ಅಭಿವೃದ್ಧಿ, ನಗರಸಭೆ ಆಸ್ತಿ ರಕ್ಷಣೆ, ನ್ಯಾಯಾಲಯದಲ್ಲಿ ಪ್ರಕರಣಗಳಿಗೆ ಹೊಂದಿಕೊಳ್ಳಲು ವಿಳಂಬವಾಗಬಹುದು, ಹಾಗಾಗಿ ಇವರನ್ನೆ ಕೆಲ ತಿಂಗಳ ಕಾಲ ಮುಂದುವರಿಸಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸ್ಪಂದಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಅದೇ ರೀತಿ ಯೋಜನಾಧಿಕಾರಿಗಳಾದ ಸುಧಾ ಅವರಿಗೂ ಮನವಿ ಸಲ್ಲಿಸಿ ಅವರನ್ನು ಉಳಿಸಲು ಸಹಕರಿಸಿ ಎಂದು ಕೋರಿಕೆ ಸಲ್ಲಿಸಲಾಯಿತು. ಆದರೆ ಅವರು ಸ್ಪಂದಿಸದೆ ನಮ್ಮೊಡನೆ ನಿಮ್ಮ ತಂದೆ ಹುಷಾರಿಲ್ಲದಿದ್ದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ ಎಂದರು.

ಅವರ ತಂದೆಗೆ ಅನಾರೋಗ್ಯವಾಗಿದ್ದರೆ ಆಸ್ಪತ್ರೆಗೆ ತೆರಳಿ ಆರೋಗ್ಯ ನೋಡಿಕೊಳ್ಳಲಿ, ಅದನ್ನು ಬಿಟ್ಟು ಅಧಿಕಾರಿಗಳ ಬಳಿ ಅಭಿವೃದ್ಧಿಗಾಗಿ ಅವರನ್ನು ಮುಂದುವರಿಸಲು ಸಹಕರಿಸಿ ಎಂದರೆ ನಮಗೆ ನಿಮ್ಮ ತಂದೆ ಹುಷಾರಿಲ್ಲದಿದ್ದರೆ ಏನು ಮಾಡುವಿರಿ ಎಂದು ಪ್ರಶ್ನೆ ಕೇಳಿ ನೋವುಂಟು ಮಾಡಿದರು. ಆದರೂ ಸಹ ನಾವು ಮಾತನಾಡದೆ ವಾಪಸ್ಸಾಗಿದ್ದೇವೆ. ಜಿಲ್ಲಾಧಿಕಾರಿಗಳು ಅಭಿವೃದ್ಧಿ ದೃಷ್ಟಿಯಿಂದ ವರ್ಗಾವಣೆಗೊಂಡ 3 ಮಂದಿಯನ್ನು ಮತ್ತೆ ಮುಂದುವರಿಸುವ ವಿಶ್ವಾಸವಿದೆ. ಯೋಜನಾಧಿಕಾರಿಗಳು ಸಹ ಸಹಕರಿಸುತ್ತಾರೆ ಎಂದು ತಿಳಿಸಿದರು.