ಪುಟ...2ಕ್ಕೆಮುಂದುವರಿದ ಅಹೋರಾತ್ರಿ ಧರಣಿ ಸತ್ಯಾಗ್ರಹ

| Published : Jan 26 2025, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆದಿದೆ. ಹೊರಗುತ್ತಿಗೆ ನೌಕರರು ಕಡಿಮೆ ಸಂಬಳದಲ್ಲಿ ಜೀವನ ನಡೆಸುತ್ತಿದ್ದಾರೆ, ದೊರಕುತ್ತಿರುವ ವೇತನ ಅತ್ಯಲ್ಪವಾಗಿದೆ, ಇನ್ನೂ ಅನೇಕ ನೌಕರರು ಅನೇಕ ದಶಕಗಳಿಂದ ಸೇವೆ ಸಲ್ಲಿಸಿದರೂ ಸೇವಾ ಭದ್ರತೆ ಇಲ್ಲ, ಹೊರಗುತ್ತಿಗೆ ನೌಕರರ ಜಾಗಕ್ಕೆ ಖಾಯಂ ನೌಕರರು ವರ್ಗಾವಣೆಯಾದರೆ ಇವರ ಕೆಲಸಕ್ಕೆ ಕತ್ತರಿ ಬೀಳುವ ಅನೇಕ ಪ್ರಸಂಗಗಳು ನಡೆದಿವೆ ಎಂದು ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಅನೇಕ ಮುಖಂಡರು ತಮ್ಮ ವಿಚಾರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆದಿದೆ. ಹೊರಗುತ್ತಿಗೆ ನೌಕರರು ಕಡಿಮೆ ಸಂಬಳದಲ್ಲಿ ಜೀವನ ನಡೆಸುತ್ತಿದ್ದಾರೆ, ದೊರಕುತ್ತಿರುವ ವೇತನ ಅತ್ಯಲ್ಪವಾಗಿದೆ, ಇನ್ನೂ ಅನೇಕ ನೌಕರರು ಅನೇಕ ದಶಕಗಳಿಂದ ಸೇವೆ ಸಲ್ಲಿಸಿದರೂ ಸೇವಾ ಭದ್ರತೆ ಇಲ್ಲ, ಹೊರಗುತ್ತಿಗೆ ನೌಕರರ ಜಾಗಕ್ಕೆ ಖಾಯಂ ನೌಕರರು ವರ್ಗಾವಣೆಯಾದರೆ ಇವರ ಕೆಲಸಕ್ಕೆ ಕತ್ತರಿ ಬೀಳುವ ಅನೇಕ ಪ್ರಸಂಗಗಳು ನಡೆದಿವೆ ಎಂದು ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಅನೇಕ ಮುಖಂಡರು ತಮ್ಮ ವಿಚಾರ ವ್ಯಕ್ತಪಡಿಸಿದರು. ಹೀಗಾಗಿ ಕೂಡಲೇ ಹೊರಗುತ್ತಿಗೆ ನೌಕರರನ್ನು ಯಾವುದೇ ಕಾರಣದಿಂದ ಕೆಲಸದಿಂದ ತೆಗೆಯಬಾರದು, ನ್ಯಾಯಯುತವಾದ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಪ್ರಗತಿಪರ ಚಿಂತಕ ಕರೆಪ್ಪ ಗುಡಿಮನಿ, ಪ್ರಭುಗೌಡ ಪಾಟೀಲ, ಅಕ್ಷಯ ಅಜಿಮನಿ, ಬಿಎಸ್‌ಪಿ ಮುಖಂಡ ಕಲ್ಲಪ್ಪ ತೊರವಿ, ಸಿಪಿಐ ಮುಖಂಡ ಅಣ್ಣಾರಾಯ ಈಳಗೇರ, ಭೀಮರಾಯ ಪೂಜಾರಿ ಇನ್ನಿತರರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಹುಲಗಪ್ಪ ಚಲವಾದಿ, ಲಕ್ಷ್ಮಣ ಮಸಳಿ, ಯಮನಪ್ಪ ಭಜಂತ್ರಿ, ರಾಮಚಂದ್ರ ಕೋಳಿ, ಗೋಪಾಲ ಅವದಿ, ಮೀನಾಕ್ಷಿ ತಳವಾರ, ಶಾಂತಾ ಕ್ವಾಟಿ ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ಗೌರಕ್ಕ ಬೀಳೂರ, ವೈಶಾಲಿ ಸಮಗೊಂಡ, ಅರವಿಂದ ಲಮಾಣಿ, ಮರೆಪ್ಪ ಚಲವಾದಿ, ಕಮಲಾಕ್ಷಿ ದೊಡಮನಿ, ನಿಂಗಪ್ಪ ವಾಲಿಕಾರ, ಸಂಗಮ್ಮ ಹಂಜಗಿ ಮುಂತಾದವರು ಇದ್ದರು.