ನಾಗಮಲೆ ಗ್ರಾಮದಲ್ಲಿ ಜಾನುವಾರುಗಳಿಗೆ ಹುಲ್ಲು ಕುಯ್ಯಲು ಹಾಗೂ ಮೇಕೆಗೆ ಸೊಪ್ಪು ತರಲು ತೆರಳಿದ್ದ ಈರಣ್ಣ, ಮಾದಯ್ಯ ಅವರ ಮೇಲೆ ಬೆಳಗ್ಗೆ ಚಿರತೆ ದಾಳಿ ಮಾಡಲು ಮುಂದಾಗಿದೆ.

ನಾಗಮಲೆಯಲ್ಲಿ ಒಂದೇ ದಿನ ಮೂರು ಕಡೆ ದಾಳಿ । ಚಿರತೆಯನ್ನು ಸೆರೆಹಿಡಿದು ಬೇರಡೆ ಬಿಡುವಂತೆ ಸ್ಥಳೀಯರ ಆಗ್ರಹ

ಕನ್ನಡಪ್ರಭ ವಾರ್ತೆ ಹನೂರು

ಮಹದೇಶ್ವರ ಬೆಟ್ಟದ ನಾಗಮಲೆ ಗ್ರಾಮದಲ್ಲಿ ಒಂದೇ ದಿನ ಮೂರು ಕಡೆ ಚಿರತೆ ದಾಳಿ ಮಾಡಿದ್ದು, ಗ್ರಾಮಸ್ಧರು ಭಯಭೀತರಾಗಿದ್ದಾರೆ.

ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ವನ್ಯಜೀವಿ ಹಾಗೂ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನಾಗಮಲೆ ಗ್ರಾಮದಲ್ಲಿ ಜಾನುವಾರುಗಳಿಗೆ ಹುಲ್ಲು ಕುಯ್ಯಲು ಹಾಗೂ ಮೇಕೆಗೆ ಸೊಪ್ಪು ತರಲು ತೆರಳಿದ್ದ ಈರಣ್ಣ, ಮಾದಯ್ಯ ಅವರ ಮೇಲೆ ಬೆಳಗ್ಗೆ ಚಿರತೆ ದಾಳಿ ಮಾಡಲು ಮುಂದಾಗಿದೆ. ಆಗ ಕೂಗಿಕೊಂಡಾಗ ಅಕ್ಕಪಕ್ಕದಲ್ಲಿದ್ದ ನಿವಾಸಿಗಳನ್ನು ಕಂಡು ಓಡಿ ಹೋದ ಚಿರತೆ ಮತ್ತೆ 8.30 ನಾಗಮಲೆ ಗ್ರಾಮದ ಅಣ್ಣಯ್ಯ ಜಮೀನಿನ ಬಳಿ ಚಿರತೆ ಕಾಣಿಸಿಕೊಂಡಿತು.

ರೈತರೆಲ್ಲ ಕೂಗಾಡುತ್ತಿದ್ದಂತೆ ಅರಣ್ಯ ಪ್ರದೇಶಕ್ಕೆ ಓಡಿಹೋಗಿದೆ. ನಂತರ ರಾತ್ರಿ 7.30ರಲ್ಲಿ ರೈತ ಪುಟ್ಟೇಗೌಡ ಅವರಿಗೆ ಸೇರಿದ ಮೇಕೆಯ ಮೇಲೆ ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಮೇಕೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.ಅರಣ್ಯಾಧಿಕಾರಿಗಳ ದೌಡು:

ಚಿರತೆ ದಾಳಿ ಮಾಡಿ ಮೇಕೆ ಬಲಿ ಪಡೆದಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಚಿರತೆ ಬಲಿಯಾಗಿರುವ ಬಗ್ಗೆ ಪರಿಶೀಲಿಸಿದ್ದಾರೆ.

ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಮನವಿ:

ಭಾನುವಾರ ಇಂಡಿಗನತ್ತ ಗ್ರಾಮದ ಬಳಿ ಹೆಣ್ಣು ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದಾರೆ. ಸ್ಥಳಕ್ಕೆ ನಾಗಮಲೆ ಗ್ರಾಮದ ಕೆಲವು ರೈತ ಮುಖಂಡರು ಭೇಟಿ ನೀಡಿ ಚಿರತೆ ಉಪಟಳ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೂ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಗ್ರಾಮದಲ್ಲಿ ಸಂಜೆ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ ಎಂದು ಗ್ರಾಮಸ್ಥರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಅರಣ್ಯ ಅಧಿಕಾರಿಗಳ ಸಭೆ:

ನಾಗಮಲೆ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಭೆ ನಡೆಸಿದರು. ಸಂಜೆ 4ರ ಒಳಗೆ ಅಡುಗೆ ಮಾಡಿ ಊಟ ಮಾಡಿ ಮನೆ ಒಳಗಡೆ ಇರಿ ಅನಾವಶ್ಯಕವಾಗಿ ಹೊರಗಡೆ ಓಡಾಡಲು ಬರಬೇಡಿ. ನಿಮ್ಮ ಸಾಕುಪ್ರಾಣಿಗಳನ್ನು ಸಹ ರಕ್ಷಣೆ ಇರುವ ಸ್ಥಳಗಳಲ್ಲಿ ರಕ್ಷಣೆ ಮಾಡುವಂತೆ ಸೂಚನೆ ನೀಡಿ ಹೋಗಿರುವುದು ಬಿಟ್ಟರೆ ಗ್ರಾಮದಲ್ಲಿ ಭಯದ ವಾತಾವರಣ ಇದೆ. ಚಿರತೆ ಉಪಟಳದಿಂದ ಗ್ರಾಮದಲ್ಲಿ ಜೀವ ಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮದ ಮುಖಂಡರಾದ ಮಾದೇಶ್, ರವಿ, ಈರಣ್ಣ, ಮಾದಯ್ಯ, ಅಣ್ಣಯ್ಯ ಇನ್ನಿತರರು ಒತ್ತಾಯ ಮಾಡಿದ್ದಾರೆ.

-------ಮೇ 10ರಂದು ಇಂಡಿಗನತ್ತ ಗ್ರಾಮದಲ್ಲಿ ಚಿರತೆಗೆ ಬೆಂಗಳೂರು ಮೂಲದ ಯುವಕ ಬಲಿಯಾಗಿರುವ ಘಟನೆ ಬೆನ್ನಲ್ಲೇ ನಾಗಮಲೆ ಗ್ರಾಮದಲ್ಲೂ ಸಹ ಚಿರತೆ ಕಳೆದ ಹಲವಾರು ದಿನಗಳಿಂದ ದಾಳಿ ನಡೆಸಿ ಜನರಲ್ಲಿ ಭೀತಿ ಹುಟ್ಟಿಸಿದೆ. ಹೀಗಾಗಿ ಕಳೆದ 15 ದಿನಗಳಿಂದ ಗ್ರಾಮಕ್ಕೂ ಸಹ ನಾನು ಹೋಗದೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಉಳಿದುಕೊಂಡಿದ್ದೇನೆ. ಗ್ರಾಮದಲ್ಲಿ ವಯಸ್ಸಾದವರು ಸಣ್ಣ ಮಕ್ಕಳು ಇದ್ದಾರೆ. ಜೀವ ಹಾನಿ ಸಂಭವಿಸುವ ಮುನ್ನ ಸಂಬಂಧ ಪಟ್ಟ ಇಲಾಖೆ ಅರಣ್ಯಾಧಿಕಾರಿಗಳು ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿದು ಬೇರೆ ಬಿಡಬೇಕು ಇಲ್ಲದಿದ್ದರೆ ಸಂಘ-ಸಂಸ್ಥೆಗಳ ಜೊತೆಗೂಡಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ಮಾದೇಶ್, ನಾಗಮಲೆ ನಿವಾಸಿ.

Hnr,4news,2 ಹನೂರು ತಾಲೂಕಿನ ನಾಗಮಲೆ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಮೇಕೆ ಬಲಿ ಪಡೆದ ಹಿನ್ನಲೆ ಚಿರತೆ ಸೆರೆ ಹಿಡಿಯುವಂತೆ ಅಗ್ರಹಿಸಿ ಗ್ರಾಮಸ್ಧರು ಪ್ರತಿಭಟನೆ ನಡೆಸಿದರು.Hnr 5news 2 ಹನೂರು ತಾಲೂಕಿನ ನಾಗಮಲೆ ಗ್ರಾಮದಲ್ಲಿ ಮುಂದುವರೆದ ಚಿರತೆ ದಾಳಿಯಿಂದ ಮೇಕೆ ಬಲಿ ಆಗಿರುವ ಘಟನೆ ಭಾನುವಾರ ಸಂಜೆ ಜರುಗಿದೆ.

-----