ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ, ಅಪಾರ ನಷ್ಟ

| Published : Jul 27 2024, 12:45 AM IST

ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ, ಅಪಾರ ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಲವು ಕೃಷಿಕರ ತೋಟಗಳಲ್ಲಿ ಭಾರೀ ಗಾಳಿಮಳೆಯಿಂದ ಅಡಕೆ ಮರಗಳಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವದಿದ್ದು, ವ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸುತ್ತಿದೆ. ಗುರವಾರ ರಾತ್ರಿಯ ಬಳಿಕ ಬೀಸಿದ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖಾಧಿಕಾರಿಗಳು ಪರಿಹಾರ ಕ್ರಮ ಕೈಗೊಂಡಿದ್ದಾರೆ. ನರಿಕೊಂಬು ಗ್ರಾಮದ ಮಿತ್ತಿಲಕೋಡಿ ನಾರಾಯಣ ಸಪಲ್ಯ ಅವರ ಮನೆಗೆ ಮರಬಿದ್ದು ಭಾಗಶಃ ಹಾನಿಯಾದ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ಸದಸ್ಯ ರಾದ ರಂಜಿತ್ ಕೆದ್ದೆಲ್, ರವಿ ಅಂಚನ್, ಅಬೆರೊಟ್ಟು, ಗ್ರಾಮ ಸಹಾಯಕ ಲಕ್ಷ್ಮಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿ. ಮೂಡ ಗ್ರಾಮದ ಲಯನ್ಸ್‌ ಹಾಲ್‌ ಮುಂಭಾಗ ಮರವೊಂದು ಬೆಳ್ಳಂಬೆಳಿಗ್ಗೆ ರಸ್ತೆಗೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಅಗ್ನಿಶಾಮಕ ದಳ ತೆರವುಗೊಳಿಸಿತು.

ಇನ್ನು ಅನೇಕ ಮನೆಗಳಿಗೆ ಹಾನಿಯಾಗಿದ್ದು, ಬಾಳ್ತಿಲ ಗ್ರಾಮದ ದಾಸಕೋಡಿ ನಿವಾಸಿ ದಾಮೋದರ ಪೂಜಾರಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಜುಮಾದಿಗುಡ್ಡೆ ಎಂಬಲ್ಲಿ ಸೆಲಿಂ ಅವರ ಮನಗೆ ಮರಬಿದ್ದು ಹಾನಿಯಾಗಿದೆ. ತುಂಬೆ ಗ್ರಾಮದ ಸಾರಮ್ಮ ಎಂಬವರ ಮನೆಗೆ ಪಕ್ಕದ ಮನೆಯ ಶೀಟ್ ಬಿದ್ದು ಹಂಚು ಪುಡಿಯಾಗಿ ರಿಯಾಜ್ ಎಂಬವರಿಗೆ ಗಾಯವಾಗಿದೆ.

ಪುದು ಗ್ರಾಮದ ಹಸನಬ್ಬ ಅವರ ಮನೆಯ ಹಂಚು ಗಾಳಿಗೆ ಹಾರಿಹೋಗಿದೆ, ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ಇಬ್ರಾಹಿಂ ಅವರ ಮನೆಗೆ ಹಾಗೂ ಗೋಡೆಗೆ ಹಾನಿಯಾಗಿದೆ. ಪುದು ಗ್ರಾಮದ ಮಾರಿಪಳ್ಳ ಚಂದ್ರಕಲಾ ಅವರ ಮನೆಯ ಹಂಚು ಗಾಳಿಗೆ ಹಾರಿಹೋಗಿದೆ. ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ಮೊಯಿದ್ದೀನ್ ಅವರ ಮನೆಯ ಹಂಚು ಹಾಗೂ ಗೋಡೆಗೆ ಹಾನಿಯಾಗಿದೆ. ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ಚೆನ್ನಮ್ಮ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ತಾಲೂಕಿನ ಹಲವು ಕೃಷಿಕರ ತೋಟಗಳಲ್ಲಿ ಭಾರೀ ಗಾಳಿಮಳೆಯಿಂದ ಅಡಕೆ ಮರಗಳಿಗೆ ಹಾನಿಯಾಗಿದೆ.