ಸಾರಾಂಶ
ಕೊಪ್ಪಳ:ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 104 ಗ್ರಾಮಗಳ ಪ್ರತಿ ಮನೆಗೂ ದಿನದ 24 ಗಂಟೆಗಳ ಕಾಲವೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.ಗಿಣಗೇರಿ, ಗೊಂಡಬಾಳ ಜಿಪಂ ಕ್ಷೇತ್ರದ ಹಳೇ ಕನಕಾಪುರ, ಕನಕಾಪುರ ತಾಂಡಾ, ಹೊಸ ಕನಕಾಪುರ, ಗಿಣಗೇರಿ, ಬಸಾಪುರ, ಕಿಡದಾಳ, ಬೆಳವಿನಾಳ ಗ್ರಾಮದಲ್ಲಿ ಜನಸಂಪರ್ಕ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಈಗಾಗಲೇ ಪ್ರತಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಪ್ರತಿ ಮನೆ ಮನೆಗೂ ನಳ ಸಂಪರ್ಕ ಕಾಮಗಾರಿ ನಡೆದಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ₹260 ಕೋಟಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿಸಲಾಗಿದೆ. ಟೆಂಡರ್ ಹಂತದಲ್ಲಿದ್ದು ಶೀಘ್ರದಲ್ಲಿ ಕಾಮಗಾರಿಯ ಭೂಮಿಪೂಜೆ ಮಾಡಿ, ಕಾಮಗಾರಿ ಆರಂಭಿಸಲಾಗುವುದು. ತುಂಗಭದ್ರಾ ಡ್ಯಾಂನ ಹಿನ್ನೀರನ್ನು ಉಪಯೋಗಿಸಿಕೊಂಡು ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ ಎಂದರು.ಗಿಣಗೇರಿ ಕೆರೆ ತುಂಬಿಸಲಾಗುವುದು: ಅಭಿನವ ಗವಿಸಿದ್ದೇಶ್ವರ ಶ್ರೀಗಳ ಕನಸಿನ ಕೂಸು ಗಿಣಗೇರಿ ಕೆರೆಯನ್ನು ₹290 ಕೋಟಿ ಅನುದಾನದ ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯಡಿ ಸೇರಿಸಿದ್ದು, ಈ ಯೋಜನೆಯಡಿ ಕೆರೆ ತುಂಬಿಸಿ ವರ್ಷಪೂರ್ತಿ ನೀರು ನಿಲ್ಲುವಂತೆ ಮಾಡಲಾಗುವುದು ಎಂದರು.100 ಸ್ಮಾರ್ಟ್ ಕ್ಲಾಸ್ ನಿರ್ಮಾಣ: ಈ ಬಾರಿ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಹೆಚ್ಚಿನ ಅನುದಾನವನ್ನು ನಮ್ಮ ಸರ್ಕಾರ ನೀಡುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ 100 ಸ್ಮಾರ್ಟ್ ಕ್ಲಾಸ್‌ಗಳನ್ನು ತೆರೆಯಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.ಈ ಸಂಧರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಗಿಣಗೇರಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ನೀಲಪ್ಪ ಮೂರಮಣಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲ್ಬಿ, ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಗಾಳೆಪ್ಪ ಪೂಜಾರ್ ದದೇಗಲ್, ಮುಖಂಡರಾದ ಸುಬ್ಬಣ್ಣ ಆಚಾರ್, ಹನಮಂತ ಜಲವರ್ಧನಿ, ನಾಗರಾಜ ಚಳ್ಳೊಳ್ಳಿ, ಹನಮೇಶ ಹೊಸಳ್ಳಿ, ಗ್ಯಾನಪ್ಪ ಬಸಾಪುರ, ಭರಮಪ್ಪ ಹಾಲವರ್ತಿ, ಆನಂದ ಕಿನ್ನಾಳ, ಲಕ್ಷ್ಮಣ ಡೊಳ್ಳಿನ, ನಾಗರಾಜ ಕಿಡದಾಳ, ಗವಿಸಿದ್ದಪ್ಪ ಹುಳ್ಳಿ, ಗವಿಸಿದ್ದನಗೌಡ ಮುದ್ದಾಬಳ್ಳಿ, ನಿಂಗಜ್ಜ ಶಹಾಪುರ, ಮಲ್ಲು ಪೂಜಾರ್, ಸೌಭಾಗ್ಯ ಲಕ್ಷ್ಮಿ, ಕಾವೇರಿ ಭಾಗ್ಯನಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.