ದೇಶದ ಅನ್ನದಾತರು, ಬಡವರು, ಮಹಿಳೆರು, ಯುವಕರ ಸಬಲೀಕರಣವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಅಭಿವೃದ್ಧಿಯಲ್ಲಿ ನಿರಂತರೆ ಕಾಪಾಡಿ, ಅಭಿವೃದ್ಧಿ ಹೊಂದಿದ ಭಾರತವಾಗಿಸಲು ಹಣಕಾಸು ಸಚಿವರು ಮಂಡಿಸಿದ ಮಧ್ಯಂತರ ಬಜೆಟ್ ಭದ್ರ ಅಡಿಪಾಯ ಹಾಕಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ ಸರ್ಕಾರದ ಬಜೆಟ್ ಅಭಿವೃದ್ಧಿಯಲ್ಲಿ ನಿರಂತರತೆಯೇ ನಮ್ಮ ಸರ್ಕಾರದ ಮೂಲಮಂತ್ರ ಎಂಬುದು ಸಾರಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.ದೇಶದ ಅನ್ನದಾತರು, ಬಡವರು, ಮಹಿಳೆರು, ಯುವಕರ ಸಬಲೀಕರಣವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಅಭಿವೃದ್ಧಿಯಲ್ಲಿ ನಿರಂತರೆ ಕಾಪಾಡಿ, ಅಭಿವೃದ್ಧಿ ಹೊಂದಿದ ಭಾರತವಾಗಿಸಲು ಹಣಕಾಸು ಸಚಿವರು ಮಂಡಿಸಿದ ಮಧ್ಯಂತರ ಬಜೆಟ್ ಭದ್ರ ಅಡಿಪಾಯ ಹಾಕಿದೆ ಎಂದು ತಿಳಿಸಿದ್ದಾರೆ.
ಭಾರತವು 2047ರ ಹೊತ್ತಿಗೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಲಿದೆ. ಅದಕ್ಕೆ ಬೇಕಾದ ಬುನಾದಿಯನ್ನು ಈ ಮೂಲಕ ಹಾಕಲಾಗಿದೆ. ಒಟ್ಟಾರೆ, ಬಡವರು, ಮಧ್ಯಮ ವರ್ಗದವರನ್ನೇ ಪ್ರಥಮ ಆದ್ಯತೆಯನ್ನಾಗಿಸಿಕೊಂಡಿರುವ ಕೇಂದ್ರ ಸರ್ಕಾರ ಮುಂದಿನ ಒಂದು ವರ್ಷದ ಒಳಗಾಗಿ ಮೂರು ಕೋಟಿ ಮನೆಗಳ ನಿರ್ಮಾಣ ಹಾಗೂ 1 ಕೋಟಿ ಮನೆಗಳ ಮೇಲೆ ಸೌರ ಘಟಕಗಳ ನಿರ್ಮಾಣದ ಉದ್ದೇಶ ಹೊಂದಿದೆ. ಮೂಲ ಸೌಲಭ್ಯ, ಪ್ರವಾಸೋದ್ಯಮ, ಸಂಶೋಧನಾ ಕ್ಷೇತ್ರದಲ್ಲಿ ನವೋದ್ಯಮಗಳಿಗೆ ಉತ್ತೇಜನ ನೀಡುವ ಮೂಲಕ ಸರ್ಕಾರ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ಮಾಡಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಬಜೆಟ್‌ನ್ನು ಶ್ಲಾಘಿಸಿದ್ದಾರೆ.