ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳ ಶಿಸ್ತಿನ ಅಭ್ಯಾಸ, ತಂಡ ಭಾವ ಮತ್ತು ನಿರಂತರ ಶ್ರಮವೇ ಯಶಸ್ಸಿಗೆ ಕಾರಣವಾಗಿದೆ ಎಂದು ವೇದ ಅಕಾಡೆಮಿ ಸಂಸ್ಥೆಯ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಹೇಳಿದರು.ತಾಲೂಕಿನ ಇಟಂಗಿಹಾಳದ ವೇದ ಅಕಾಡೆಮಿ ಪ್ರಾಥಮಿಕ ಶಾಲೆಯ ಅಂಡರ್-14 4x100 ಮೀ ರಿಲೇ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಂಡವನ್ನು ಅಭಿನಂದಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳ ಪ್ರತಿಭೆ ಇಂದು ಜಿಲ್ಲಾಮಟ್ಟವನ್ನು ದಾಟಿ ರಾಜ್ಯಮಟ್ಟದ ವೇದಿಕೆಗೆ ತಲುಪಿದೆ. ವೇದ ಅಕಾಡೆಮಿ ಮಕ್ಕಳ ಸಾಮರ್ಥ್ಯವನ್ನು ಬೆಳಗಿಸುವ ವಿಶ್ವಾಸಾರ್ಹ ವೇದಿಕೆಯಾಗಿದೆ. ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದರು.ಪ್ರಾಂಶುಪಾಲ ಮಧ್ವಪ್ರಸಾದ.ಜಿ.ಕೆ ಮಾತನಾಡಿ, ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಬೆಂಬಲದಿಂದಲೇ ಈ ಸಾಧನೆ ಸಾಧ್ಯವಾಗಿದೆ. ರಾಜ್ಯಮಟ್ಟದಲ್ಲೂ ನಮ್ಮ ಮಕ್ಕಳು ಹೆಮ್ಮೆಗುರಿಯಾದ ಪ್ರದರ್ಶನ ನೀಡುವರೆಂಬ ವಿಶ್ವಾಸ ನಮಗಿದೆ ಎಂದರು.ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಂ.ಪಾಟೀಲ, ಸುನೀಲ ವಾಲಿ ತರಬೇತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ನಿರ್ದೇಶಕರಾದ ಶಿವಲೀಲಾ ಕೆಲೂರ, ಡಾ.ಕ್ಷಮಾ ಕೆಲೂರ, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.ಮುಂದಿನ ವಾರ ಹಾಸನದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ
ವಿಜಯಪುರ ತಾಲೂಕಿನ ಇಟಂಗಿಹಾಳದ ವೇದ ಅಕಾಡೆಮಿ ಪ್ರಾಥಮಿಕ ಶಾಲೆಯ ಅಂಡರ್-14 4x100 ಮೀ ರಿಲೇ ತಂಡವು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಮುಂದಿನ ವಾರ ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಥ್ಲೆಟಿಕ್ ಮೀಟ್‌ನಲ್ಲಿ ಈ ತಂಡ ಭಾಗವಹಿಸಲಿದೆ. 4x100 ರಿಲೇ ತಂಡದಲ್ಲಿ ವಿದ್ಯಾರ್ಥಿಗಳಾದ ರಚಿತ ರಥೋಡ, ನಿಶಾಲ ಬಡಗಿ, ರಂಜಿತ ಜಾನಗೊಂಡ, ಭಾಗೇಶ ಪಾಟೀಲ, ಸಂಗನಗೌಡ, ವಿಶಾಲ ನಾವಿ ಇದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))