ಭವಿಷ್ಯದ ಭದ್ರ ಭುನಾದಿಗಾಗಿ ನಿರಂತರ ಅಧ್ಯಯನ ಮುಖ್ಯ: ಮಹೇಶ ಕೆರೂರ

| Published : Jun 20 2024, 01:04 AM IST

ಭವಿಷ್ಯದ ಭದ್ರ ಭುನಾದಿಗಾಗಿ ನಿರಂತರ ಅಧ್ಯಯನ ಮುಖ್ಯ: ಮಹೇಶ ಕೆರೂರ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ನಿರ್ಮಾಣದ ಮೊದಲ ಘಟ್ಟ ತಲುಪಿದ ನಂತರ ವಿರಮಿಸದೇ ತಮ್ಮ ಭವಿಷ್ಯದ ಭದ್ರ ಬುನಾದಿಗಾಗಿ ನಿರಂತರ ಅಧ್ಯಯನದಲ್ಲಿ ತೊಡಗುವುದು ಮುಖ್ಯ ಎಂದು ಶಿಕ್ಷಕ ಮಹೇಶ ಕೆರೂರ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ನಿರ್ಮಾಣದ ಮೊದಲ ಘಟ್ಟ ತಲುಪಿದ ನಂತರ ವಿರಮಿಸದೇ ತಮ್ಮ ಭವಿಷ್ಯದ ಭದ್ರ ಬುನಾದಿಗಾಗಿ ನಿರಂತರ ಅಧ್ಯಯನದಲ್ಲಿ ತೊಡಗುವುದು ಮುಖ್ಯ ಎಂದು ಶಿಕ್ಷಕ ಮಹೇಶ ಕೆರೂರ ಅಭಿಪ್ರಾಯ ವ್ಯಕ್ತ ಪಡಿಸಿದರು.

ತಾಲೂಕಿನ ಕಡೂರ ಸರಕಾರಿ ಪ್ರೌಢಶಾಲೆ ಹಾಗೂ 1989-90ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಸ್ನೇಹ ಪ್ರಕಾಶನ ಸಂಸ್ಥೆಯ ಸಹಯೋಗದಲ್ಲಿ 2023-24ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ನಿರ್ಮಾಣ ಹಂತದಲ್ಲಿ ದುಶ್ಚಟಗಳಿಗೆ ದಾಸರಾಗದೆ, ಕಲಿಕಾ ಹಂತದಲ್ಲಿ ಸನ್ಮಾರ್ಗದತ್ತ ನಡೆದು ಗುರು ಹಿರಿಯರನ್ನು ಗೌರವಿಸಬೇಕು. ನಿರಂತರ ಅಧ್ಯಯನ ಮಾಡಿದರೆ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿನಿ ಗಗನಾ ಹಲಗೇರಿ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಮನನ ಮಾಡಿಕೊಂಡು ಅಂದಿನ ದಿನದ ಅಧ್ಯಯನವನ್ನು ಮನನ ಮಾಡಿಕೊಂಡು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿದ ಪರಿಣಾಮ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮಧ್ಯ ಅವಿನಾಭಾವ ಸಂಬಂದ ಇಟ್ಟುಕೊಂಡರೆ ಶಿಕ್ಷಣದಲ್ಲಿ ಏನನ್ನಾದರೂ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಕಡೂರ ಸರಕಾರಿ ಪ್ರೌಢ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗಗನಾ ಹಲಗೇರಿ (ಪ್ರಥಮ) ಕಾವ್ಯ ಲಕ್ಕನಗೌಡ್ರ (ದ್ವಿತೀಯ), ಮೇಘಾ ತಳಗಟ್ಟಿ, ರಮ್ಯ ಸಾಹುಕಾರ (ತೃತೀಯ) ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಭಾರಿ ಮುಖ್ಯ ಶಿಕ್ಷಕ ಎಂ.ಸಿ. ತುಮ್ಮಿನಕಟ್ಟಿ, ಗಂಗಾಧರ ಹಲಗೇರಿ, ಜೆ.ಸಿ. ಹೊಸರಾಯಪ್ಪನವರ, ಬಿ.ಡಿ. ಪಾಟೀಲ್, ಹರಿನಾರಾಯಣ ಎಸ್., ಪ್ರಕಾಶ ಬಾರ್ಕಿ, ಚಂದ್ರು ತುಮ್ಮಿನಕಟ್ಟಿ, ಗಣೇಶ ಮೆಗಳಮನಿ, ಶೋಭಾ ಲಕ್ಕನಗೌಡ್ರ, ಮಲ್ಲನಗೌಡ್ರ, ಭರಮಗೌಡ ಕರೆಗೌಡ್ರ, ಭಾರತಿ ಅಂಗಡಿ, ಹನಮವ್ವ ಆನ್ವೇರಿ, ಸುಜಾತ ಹಾವೇರಿ, ಜಯಮ್ಮ ಕುಂಬಾರ, ರೇಣುಕಾ ಲಕ್ಕನಗೌಡ್ರ, ಹನುಮಂತಪ್ಪ ಬಾರ್ಕಿ, ವೇದಾವತಿ ಕಮತಳ್ಳಿ, ವೈ.ಎನ್. ಬೆನಕನಕೊಂಡ ಮುಂತಾದವರು ಇದ್ದರು.