ಚಿಕ್ಕಮಗಳೂರುಕನ್ನಡ ಭಾಷೆಯ ಬಗ್ಗೆ ಕೇವಲ ಅಭಿಮಾನ ವ್ಯಕ್ತಪಡಿಸಿದರೆ ಸಾಲದು. ಅದನ್ನು ನಿತ್ಯದ ಬದುಕಿನಲ್ಲಿ ನಿರಂತರವಾಗಿ ಬಳಸಿದಾಗ ಮಾತ್ರ ಭಾಷೆಯ ಬೆಳವಣಿಗೆ ಮತ್ತು ಉಳಿವು ಸಾಧ್ಯ. ಅನ್ಯ ಭಾಷೆಗಳನ್ನು ದ್ವೇಷಿಸದೆ ಮಾತೃಭಾಷೆಯ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.
- 71ನೇ ಕನ್ನಡ ರಾಜ್ಯೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ಭಾಷೆಯ ಬಗ್ಗೆ ಕೇವಲ ಅಭಿಮಾನ ವ್ಯಕ್ತಪಡಿಸಿದರೆ ಸಾಲದು. ಅದನ್ನು ನಿತ್ಯದ ಬದುಕಿನಲ್ಲಿ ನಿರಂತರವಾಗಿ ಬಳಸಿದಾಗ ಮಾತ್ರ ಭಾಷೆಯ ಬೆಳವಣಿಗೆ ಮತ್ತು ಉಳಿವು ಸಾಧ್ಯ. ಅನ್ಯ ಭಾಷೆಗಳನ್ನು ದ್ವೇಷಿಸದೆ ಮಾತೃಭಾಷೆಯ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಸರ್ಕಲ್ನಲ್ಲಿ ಅಮ್ಮನ ಮಡಿಲು ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವೈಜ್ಞಾನಿಕ ಭಾಷೆ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಇಂತಹ ಭಾಷೆ ಬಗ್ಗೆ ಹೆಮ್ಮೆಪಡುವ ನಾವು ನಿತ್ಯದ ಬದುಕಿನಲ್ಲಿ ಕನ್ನಡದ ಬಳಕೆಗೆ ಎಷ್ಟು ಆದ್ಯತೆ ನೀಡುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯದ ಹಲವು ಗ್ರಾಮಗಳ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಬೆರಳೆ ಣಿಕೆಯಷ್ಟಿದ್ದು, ಮಕ್ಕಳಿದ್ದರೂ ಕನ್ನಡ ಶಾಲೆಗಳಿಗೆ ದಾಖಲಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿಯೂ ಆಯಾ ಭಾಷೆಯ ಶಾಲೆಗಳ ಸ್ಥಿತಿ ಚಿಂತಾ ಜನಕವಾಗಿದೆ. ಕರ್ನಾಟಕದಲ್ಲೂ ಕನ್ನಡ ಶಾಲೆಗಳು ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿದ್ದು, ಭಾಷೆ ಕಳೆದುಕೊಂಡರೆ ಸಂಸ್ಕೃತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಭಾಷೆಯ ಉಳಿವಿನ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವುದಕ್ಕಿಂತ ಜನಜೀವನದಲ್ಲಿ ಅದರ ಬಳಕೆ ಹೆಚ್ಚಿಸುವುದು ಮುಖ್ಯ. ಬೇರು ಗಟ್ಟಿ ಯಾಗಿದ್ದರೆ ಮಾತ್ರ ಚಿಗುರು, ಹೂವು ಮತ್ತು ಹಣ್ಣುಗಳನ್ನು ನಿರೀಕ್ಷಿಸಲು ಸಾಧ್ಯ. ಕನ್ನಡದ ತಾಯಿ ಬೇರನ್ನು ಉಳಿಸಿ ಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯಬೇಕು. ಆದರೆ, ಆ ಪ್ರಕ್ರಿಯೆಯಲ್ಲಿ ಕನ್ನಡವನ್ನು ಮರೆಯಬಾರದು. ಎಷ್ಟೇ ಚೆನ್ನಾಗಿ ಇಂಗ್ಲಿಷ್ ಮಾತನಾಡಿದರೂ ನಮ್ಮ ಅಸ್ಮಿತೆ ಕನ್ನಡಿಗರು ಎಂಬುದನ್ನು ಮರೆಯಬಾರದು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ಜನಪದ ಬರಹಗಾರ ಸಿ.ಬಿ.ಮಹೇಶ್ವರಪ್ಪ ಚಟ್ನಳ್ಳಿ ಹಾಗೂ ವಕೀಲ, ಗಾಯಕ ಮತ್ತು ಯೋಗ ಸಾಧಕ ವಿ.ಕೆ.ರಘು ಅವರಿಗೆ ರಾಜ್ಯಮಟ್ಟದ ''''''''ಲಕ್ಷ್ಮೀಶ ಕವಿ ಪ್ರಶಸ್ತಿ'''''''' ಪ್ರದಾನ ಮಾಡಿ ಗೌರವಿಸಲಾಯಿತು.