ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಸಾವು

| Published : Dec 15 2024, 02:02 AM IST

ಸಾರಾಂಶ

ರಾಮನಗರ: ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ನಗರದ ರಾಮನಗರ-ಕನಪುರ ರಸ್ತೆ ಮಾರ್ಗದ ರೈಲ್ವೆ ಸೇತುವೆ ಬಳಿ ಸಂಭವಿಸಿದೆ. ಚಾಮರಾಜನಗರ ಜಿಲ್ಲೆಯ ಕೆಂಪನಪುರ ಗ್ರಾಮದ ವಾಸಿ ಚಿನ್ನಸ್ವಾಮಿ (45) ಮೃತರು. ಈತ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.

66/11ಕೆವಿ ರಾಮನಗರ ವಿದ್ಯುತ್ ಉಪಕೇಂದ್ರ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಹುಣಸನಹಳ್ಳಿ, ತುಂಬೇನಹಳ್ಳಿ, ಅಚ್ಚಲು, ವಡೇರಹಳ್ಳಿ, ಅರ್ಚಕರಹಳ್ಳಿ, ಜಾನಪದ ಲೋಕ, ಬಿಳಗುಂಬ, ಬಸವನಪುರ, ಕೆ.ಪಿ.ದೊಡ್ಡಿ, ರಾಮನಗರ ಟೌನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ರಾಮನಗರ - ಕನಕಪುರ ರಸ್ತೆ ಮಾರ್ಗದ ರೈಲ್ವೆ ಸೇತುವೆ ಬಳಿ ವಿದ್ಯುತ್ ಕಂಬದಲ್ಲಿ ಕಾಮಗಾರಿ ನಿರ್ವಹಿಸಲು ಲೈನ್‌ಮ್ಯಾನ್‌ವೊಬ್ಬರು ಗುತ್ತಿಗೆ ಕಾರ್ಮಿಕ ಚಿನ್ನಸ್ವಾಮಿ ಅವರನ್ನು ಕಂಬ ಹತ್ತಿಸಿದ್ದಾರೆ. ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ದೇಹವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಸಂಜೆಯಾದರೂ ಬೆಸ್ಕಾಂ ಜೆಇ, ಎಇಇ ಪೈಕಿ ಯಾರೊಬ್ಬರು ಭೇಟಿ ನೀಡಿಲ್ಲ. ಠಾಣೆಯಲ್ಲಿ ದೂರು ಕೂಡ ದಾಖಲಾಗಿಲ್ಲ.