ಕಬ್ಬು ಬೆಳೆಗೆ ಸಮರ್ಪಕ ಬೆಂಬಲ ಬೆಲೆ ಸೇರಿದಂತೆ ಇನ್ನಿತರ ರೈತರ ಬೇಡಿಕೆ ಈಡೆರಿಕೆಗಾಗಿ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೀದರ್‌- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಶಹಾಪುರ ರಸ್ತೆಯ ಲಕ್ಷ್ಮೀ ದೇವಸ್ಥಾನ ಹತ್ತಿರ ರಸ್ತೆಯ ಮೇಲೆ ಟೆಂಟ್ ಹಾಕಿ ರಸ್ತೆತಡೆ ನಡೆಸಲಾಯಿತು.

-ಶಹಾಪುರ ರಸ್ತೆಯಲ್ಲೇ ಟೆಂಟ್ ಹಾಕಿ ರೈತರ ಪ್ರತಿಭಟನೆಕನ್ನಡಪ್ರಭ ವಾರ್ತೆ ಜೇವರ್ಗಿ

ಕಬ್ಬು ಬೆಳೆಗೆ ಸಮರ್ಪಕ ಬೆಂಬಲ ಬೆಲೆ ಸೇರಿದಂತೆ ಇನ್ನಿತರ ರೈತರ ಬೇಡಿಕೆ ಈಡೆರಿಕೆಗಾಗಿ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೀದರ್‌- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಶಹಾಪುರ ರಸ್ತೆಯ ಲಕ್ಷ್ಮೀ ದೇವಸ್ಥಾನ ಹತ್ತಿರ ರಸ್ತೆಯ ಮೇಲೆ ಟೆಂಟ್ ಹಾಕಿ ರಸ್ತೆತಡೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಮಾತನಾಡಿ, ಸರ್ಕಾರಗಳು ರೈತರ ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವವರೆಗೆ ಪ್ರತಿಭಟನೆ ನಿಲ್ಲದು. ಕಬ್ಬಿಗೆ ಪ್ರತಿ ಟನ್‌ಗೆ 5500 ರು. ನಿಗದಿ ಪಡಿಸಬೇಕು. ಎಸ್‌ಎಪಿ ಮೂಲಕ ಕಾನೂನುಬದ್ಧ ಬೆಲೆ ಖಾತರಿ ಪಡಿಸಬೇಕು. ಪ್ರತಿ ಕ್ವಿಟಾಲ್ ತೊಗರಿಗೆ 12500 ರು. ನಿಗದಿ ಪಡಿಸಬೇಕು. ಹತ್ತಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಕಲಬುರಗಿ ಜಿಲ್ಲೆಯ ಭೀಮಾನದಿಗೆ ಬಜಾಪತ್ ಆಯೋಗದ ಪ್ರಕಾರ 15 ಟಿಎಂಸಿ ನೀರು ಬಿಡುಗಡೆಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ ಬರ ಆವರಿಸಿ ರೈತರು ಗುಳೆ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ವಿಬಿಜಿ ರಾಮಜಿ ಯೋಜನೆಯಡಿ ರೈತರಿಗೆ ಉದ್ಯೋಗ ಖಾತ್ರಿ ಕೆಲಸ ನೀಡಿ ಗುಳೆ ಹೋಗುವುದು ತಪ್ಪಿಸಬೇಕು. ಮಲ್ಲಾಬಾದ ಏತ ನೀರಾವರಿ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳನ್ನು ಕೂಡಲೆ ಅಮಾನತ್ತುಗೊಳಿಸಬೇಕು. ಜೇವರ್ಗಿ ಯಡ್ರಾಮಿ ರೈತರಿಗೆ ಬೆಳೆವಿಮೆ ಹಣ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ, ಮಂಜುಳಾ ಬಂಜತ್ರಿ, ಸುಶೀಲಾ ಆಲೂರ, ಈರಣ್ಣಗೌಡ ಗುಳ್ಯಾಳ, ಸಿದ್ದಣ್ಣಗೌಡ ರಾಜವಾಳ, ಭೀಮಾಶಂಕರ ಬಿಲ್ಲಾಡ ಜನೀವಾರ, ಪರಮೇಶ್ವರ ಬೀರಾಳ, ಬಿಎಚ್.ಮಾಲಿಪಾಟೀಲ, ದೇವಕ್ಕಿ ಎಳವರ್, ಸಿದ್ರಾಮ ಕಟ್ಟಿ, ವಿನೋದ ಪಾಟೀಲ, ಸಾಹೇಬಗೌಡ ದೇಸಾಯಿ, ಸಾಂಬಶಿವ ಹಿರೇಮಠ, ಯಲ್ಲಾಲಿಂಗ ಹರನಾಳ, ಸಿದ್ದು ಸಾಹುಕಾರ ಹರವಾಳ, ಇಬ್ರಾಹಿಂ ಪಟೇಲ್ ಯಾಳವಾರ ಸೇರಿದಂತೆ ರೈತರು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.