ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಾಗತಿಕ ತಾಪಮಾನದ ಬಗ್ಗೆ ಎಚ್ಚೆತ್ತುಕೊಂಡು ಜಿಲ್ಲೆಯನ್ನು ಹಸಿರು ಹೊದಿಕೆಯಂತಾಗಿಸಲು ಸಾರ್ವಜನಿಕರು ಸಹಕಾರಿಸಬೇಕಾಗಿದೆ. ಪರಿಸರದ ರಕ್ಷಣೆ ಮಾಡಿದಾಗ ಮಾಡಿದಾಗ ಮಾತ್ರ ಮನುಕುಲ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅಭಿಪ್ರಾಯಪಟ್ಟರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕದಂಬ ಸೇವಾ ಫೌಂಡೇಷನ್‌ನಿಂದ ಪ್ರತಿ ದಿನ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಕದಂಬ ಸೇವಾ ಫೌಂಡೇಷನ್‌ನಿಂದ ಪ್ರತಿ ದಿನ ಕನಿಷ್ಠ ಒಂದು ಗಿಡ ನೆಡುವ ಸಂಕಲ್ಪದೊಂದಿಗೆ ದಿನಕ್ಕೊಂದು ಗಿಡ ನೆಡುವ ಅಭಿಯಾನ ಆರಂಭಿಸಿದೆ. ಪ್ರಮುಖವಾಗಿ ಸರ್ಕಾರಿ ಕಚೇರಿಗಳು, ವಸತಿ ಶಾಲೆಗಳು ಮತ್ತು ಶಾಲೆಗಳ ಬಳಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ ಎಂದರು.
ಸೇವಾ ಸಂಸ್ಥೆಗಳು ಸಹಕರಿಸಲಿಜಿಲ್ಲೆಯಲ್ಲಿನ ಸೇವಾ ಸಂಸ್ಥೆಗಳು ಸಹಾ ಇದೇ ರೀತಿಯಲ್ಲಿ ಜಿಲ್ಲಾಡಳಿತದ ಜೊತೆಗೂಡಿದರೆ ಉತ್ತಮ ಪರಿಸರ ನಿರ್ಮಾಣ ಮಾಡಬಹುದು. ಇತ್ತೀಚಿಗೆ ಜಾಗತಿಕ ತಾಪಮಾನ ಬಹಳಷ್ಟು ಏರಿಕೆಯಾಗಿದ್ದು, ಅದನ್ನು ನಿಯಂತ್ರಿಸಲು ಕದಂಬ ಸೇವಾ ಫೌಂಡೇಷನ್ ಸಂಸ್ಥೆ ಮಾಡಿರುವ ಈ ಕಾರ್ಯ ತುಂಬಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.ಜಿಲ್ಲೆಯ ಬೇರೆ ಬೇರೆ ಸಂಘ ಸಂಸ್ಥೆಗಳನ್ನು ತೊಡಗಿಸಿಕೊಂಡು ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನಗಳ ಬಗ್ಗೆ ಎಚ್ಚೆತ್ತುಕೊಳ್ಳುವುದರ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಹೆಚ್ಚೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಮೂಲಕ ಕೋಲಾರ ಜಿಲ್ಲೆಯನ್ನು ಹಸಿರು ಹೊದಿಕೆಯಂತಾಗಿಸಬೇಕು ಎಂದರು.ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ನಾಗವೇಣಿ.ಬಿ, ಜೆಎಚ್.ಎಂ ಚಂದ್ರಪ್ಪ, ಶ್ರೀನಿವಾಸಪುರ ತಹಸೀಲ್ದಾರ್ ಸುದೀಂದ್ರ, ಡಿಡಿಪಿಯು ರಾಮಚಂದ್ರಪ್ಪ, ಕದಂಬ ಸೇವಾ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷೆ ನಂದಿನಿ.ಆರ್, ಸಂಘಟನಾ ಕಾರ್ಯದರ್ಶಿಗಳಾದ ಆಕಾಶ್, ಲಕ್ಷ್ಮೀ.ಎಸ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ನಳಿನಿಗೌಡ, ಗಿರೀಶ್, ಯಾರಂಗಟ್ಟ ಮುನಿರಾಜು ಇದ್ದರು.