ಸರ್ಕಾರಿ ಶಾಲೆಗಳ ಪ್ರಗತಿಗೆ ಸಹಕರಿಸಿ

| Published : Mar 12 2025, 12:49 AM IST

ಸಾರಾಂಶ

ಸೂಲಿಬೆಲೆ: ಸರ್ಕಾರಿ ಶಾಲೆಗಳ ಅಭಿವೃದ್ದಿ ಕಾಣಬೇಕಾದರೆ ಸಂಘ ಸಂಸ್ಥೆಗಳು ಹಾಗೂ ಕಂಪನಿಗಳ ಸಹಕಾರ ಅವಶ್ಯ ಎಂದು ಯುರಿಕಾ ಪೋರ್‍ಬಸ್ ಲಿಮಿಟೆಡ್ ಉಪಾಧ್ಯಕ್ಷ ಅಭಿಷೇಕ್ ಆನಂದ್ ಹೇಳಿದರು.

ಸೂಲಿಬೆಲೆ: ಸರ್ಕಾರಿ ಶಾಲೆಗಳ ಅಭಿವೃದ್ದಿ ಕಾಣಬೇಕಾದರೆ ಸಂಘ ಸಂಸ್ಥೆಗಳು ಹಾಗೂ ಕಂಪನಿಗಳ ಸಹಕಾರ ಅವಶ್ಯ ಎಂದು ಯುರಿಕಾ ಪೋರ್‍ಬಸ್ ಲಿಮಿಟೆಡ್ ಉಪಾಧ್ಯಕ್ಷ ಅಭಿಷೇಕ್ ಆನಂದ್ ಹೇಳಿದರು.

ದೊಡ್ಡಹುಲ್ಲೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನವೀಕರಣಗೊಂಡ ಶೌಚಾಲಯ ಉದ್ಘಾಟನೆ ಹಾಗೂ ಕುಡಿಯುವ ನೀರಿನ ಘಟಕದ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪುತ್ತಿವೆ. ಗುಣಮಟ್ಟದ ಶಿಕ್ಷಕರಿದ್ದು ಮೂಲ ಸೌಲಭ್ಯಗಳು ಕಡಿಮೆ ಇರುವ ಕಾರಣ ಪೋಷಕರಲ್ಲಿನ ಆಂಗ್ಲ ವ್ಯಾಮೋಹದಿಂದ ಕನ್ನಡ ಶಾಲೆಗಳ ಬಗ್ಗೆ ಅಸಡ್ಡೆ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.

ಅಪ್ಸಾ ಸಂಸ್ಥೆ ಸಂಚಾಲಕ ದೇವರಾಜ್ ಮಾತನಾಡಿ, ಎಕೋ ಸ್ಕೂಲ್ ಪ್ರಾಜೆಕ್ಟ್ ೨೦೨೪-೨೪ನೇ ಸಾಲಿನ ಕಾರ್ಯಕ್ರಮದಡಿ ಯುರಿಕಾ ಪೋರ್‍ಬಸ್ ಕಂಪನಿ, ಸಿಜಿಎಫ್ ಅಂಡ್ ಸಮ್ಮಿತ ಸಂಸ್ಥೆ ಹಾಗೂ ಅಪ್ಸಾ ಸಂಸ್ಥೆಯ ಸಹಯೋಗದಲ್ಲಿ ಶೌಚಾಲಯ ನವೀಕರಣ ಹಾಗೂ ಶುದ್ಧ ಕುಡಿಯುವ ನೀರು ಘಟಕಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಹೊಸಕೋಟೆ ತಾಲೂಕಿನ ದೇವಲಾಪುರ ಪ್ರೌಢಶಾಲೆ, ದೊಡ್ಡಹುಲ್ಲೂರು ಪ್ರೌಢಶಾಲೆ, ಹೊಸಕೋಟೆ ಟೌನ್ ಟಿ.ಜಿ.ಬಡಾವಣೆಗಳಲ್ಲೂ ಶೌಚಾಲಯ ನವೀಕರಣ ಮಾಡಿ ಶಾಲೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಯುರಿಕಾ ಪೋರ್‍ಬಸ್ ಕಂಪನಿಯ ಜನರಲ್ ಮ್ಯಾನೇಜರ್ ವಾಸುದೇವನ್,ಹೆಚ್.ಆರ್.ಮ್ಯಾನೇಜರ್ ಸಾಧಿಕ್ ಪಾಷ, ಸೆಲ್ಸ್ ಹೆಡ್ ಮಹೇಶ್ ಹಂಡೆ, ಸಮ್ಮಿತ ಸಂಸ್ಥೆಯ ವ್ಯವಸ್ಥಾಪಕ ಪ್ರವೀಣ್, ಅಪ್ಸಾ ಸಂಸ್ಥೆಯ ದೇವರಾಜ್, ಭಾಗ್ಯ, ತುಳಸೀಬಾಯಿ, ದೇವಲಾಪುರ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಂದ್ಯಾ, ಎಂ.ವಿ.ಬಡಾವಣೆ ಶಾಲೆ ಮುಖ್ಯಶಿಕ್ಷಕಿ ಲಕ್ಷ್ಮೀ, ದೊಡ್ಡಹುಲ್ಲೂರು ಪ್ರೌಢಶಾಲೆ ಮುಖ್ಯಶಿಕ್ಷಕ ಮಹೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಗೋಪಾಲ್ ಇತರರಿದ್ದರು.