ಸಾರಾಂಶ
ಕಡೂರು: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಸಹಕಾರ ನೀಡುವುದು ಒಂದು ಸೇವಾ ಕಾರ್ಯ ಎಂದು ನಿವಾಸ್ ಕನ್ಸ್ ಟ್ರಕ್ಷನ್ ನ ಇಂಜಿನಿಯರ್ ಸಾಗರ್ ಜಗದೀಶ್ ಹೇಳಿದರು.
ಕಡೂರು: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಸಹಕಾರ ನೀಡುವುದು ಒಂದು ಸೇವಾ ಕಾರ್ಯ ಎಂದು ನಿವಾಸ್ ಕನ್ಸ್ ಟ್ರಕ್ಷನ್ ನ ಇಂಜಿನಿಯರ್ ಸಾಗರ್ ಜಗದೀಶ್ ಹೇಳಿದರು.
ಸೋಮವಾರ ಪಟ್ಟಣದ ಹಳೇಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿವಾಸ್ ಕನ್ಸ್ ಟ್ರಕ್ಷನ್ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸಂಸ್ಥೆ ಕಳೆದ ಒಂದು ವರ್ಷದಿಂದ ನಿರ್ಮಾಣ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಿದೆ. ಅದರ ಜೊತೆ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಆಶಯದಿಂದ ಕಡೂರಿನ 30 ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಠ್ಯ ಪರಿಕರ ನೀಡಿ ಅವರಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ. ಮುಂದೆ ಒಂದಿಷ್ಟು ಬಡ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನೂ ಭರಿಸುವ ಚಿಂತನೆ ನಡೆಸಲಾಗಿದೆ ಎಂದರು.ಮುಖ್ಯ ಶಿಕ್ಷಕ ಹಕ್ಕಿಯವರ್, ಶಿಕ್ಷಕಿ ಪುಷ್ಪಲತಾ, ಭರತ್ ಡಿ.ರಾಜ್, ವಕೀಲ ಸಿ.ಎಲ್.ದೇವರಾಜು, ಯೋಗ ಶಿಕ್ಷಕ ನವೀನ್ ಮತ್ತಿತರರು ಇದ್ದರು.
26ಕೆೆಕೆಡಿಯು2.ಕಡೂರು ಪಟ್ಟಣದ ಹಳೇಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿವಾಸ್ ಕನ್ಸ್ ಟ್ರಕ್ಷನ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.