ಸಾರಾಂಶ
ಪ್ರಾಚೀನ ವಿಜ್ಞಾನಿಗಳಾದ ಭಾಸ್ಕರಾಚಾರ್ಯ, ಆರ್ಯಭಟ ಅವರನ್ನೊಳಗೊಂಡ ಅನೇಕ ವಿಜ್ಞಾನಿಗಳು ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಹಾಗೂ ಕೊಡುಗೆ ಅಪಾರವಾಗಿದೆ. ವಿಜ್ಞಾನದಿಂದ ಅಜ್ಞಾನದ ಪತನವಾಗುತ್ತದೆ ಎಂದು ಸ್ಥಳೀಯ ವಸ್ತ್ರದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಎಸ್.ಎಸ್. ಹೆಗಡಿ ಹೇಳಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪ್ರಾಚೀನ ವಿಜ್ಞಾನಿಗಳಾದ ಭಾಸ್ಕರಾಚಾರ್ಯ, ಆರ್ಯಭಟ ಅವರನ್ನೊಳಗೊಂಡ ಅನೇಕ ವಿಜ್ಞಾನಿಗಳು ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಹಾಗೂ ಕೊಡುಗೆ ಅಪಾರವಾಗಿದೆ. ವಿಜ್ಞಾನದಿಂದ ಅಜ್ಞಾನದ ಪತನವಾಗುತ್ತದೆ ಎಂದು ಸ್ಥಳೀಯ ವಸ್ತ್ರದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಎಸ್.ಎಸ್. ಹೆಗಡಿ ಹೇಳಿದರು.ಸ್ಥಳೀಯ ಪಿ.ಇ. ಟ್ರಸ್ಟ್ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನಿಗಳು ಮತ್ತು ವಿಜ್ಞಾನ ಜಗತ್ತಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಪ್ರಾಚೀನ ಕಾಲದಿಂದ ಅನೇಕ ಆವಿಷ್ಕಾರಗಳಿಂದ ಜಗತ್ತನ್ನು ಅರಿಯುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ನಿಸರ್ಗದೊಂದಿಗಿನ ಮಾನವನ ಹೋರಾಟದ ಬದುಕಿಗೆ ವಿಜ್ಞಾನ ಮಾರ್ಗಸೂಚಿಯಾಗಿದೆ ಎಂದರು.
ವಸ್ತ್ರದ ಪಾಲಿಟೆಕ್ನಿಕ್ ಕಾಲೇಜಿನ ವಿಶ್ರಾಂತ ಉಪನ್ಯಾಸಕಿ ಐ.ಎಂ. ಮಕಾನದಾರ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಜ್ಞಾನ ವಿಷಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ನಮ್ಮ ಜೀವನದಲ್ಲಿ ವಿಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.ಶಾಲೆಯ ಚೇರ್ಮನ್ ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸದಸ್ಯರಾದ ವಿಠಲ ಕಾವಡೆ, ಎಸ್.ಎನ್. ಮಾಲಪಾನಿ, ಶಾಲೆಯ ಮುಖ್ಯಶಿಕ್ಷಕ ಜೆ.ಜೆ. ಲೋಬೋ, ವೀಣಾ ಹಳ್ಳೂರ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ವಸ್ತು ಪ್ರದರ್ಶನ ಎಲ್ಲರ ಮನಸೂರೆಗೊಂಡವು.
ಅಕ್ಷತಾ ಅರಸುಣಗಿ, ವಿಜ್ಞಾನ ಶಿಕ್ಷಕ ಗೀತಾ ಬನ್ನಿ, ಬಿ.ಐ. ಯಳಮೇಲಿ, ಸರ್.ಸಿ.ವಿ. ರಾಮನ್ ಬೆಳಕಿನ ಚದುರುವಿಕೆಯ ಕುರಿತು ಮಾತನಾಡಿದರು. ಶಿಕ್ಷಕಿ ಭಾಗ್ಯಾಶ್ರೀ ಶೆಟ್ಟರ ಸ್ವಾಗತಿಸಿದರು. ಶಮೀಮ ಮಕಾನದಾರ ನಿರೂಪಿಸಿದರು. ನಸೀಮ್ ಕಲೆಗಾರ ವಂದಿಸಿದರು.