ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪತ್ರಕರ್ತರು ವಿರೋಧ ಪಕ್ಷದವರಂತೆ ಕೆಲಸ ಮಾಡಿದರೆ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ಸಮಾಜ ಮತ್ತು ದೇಶ ಸುಧಾರಣೆಯಲ್ಲಿ ಪತ್ರಕರ್ತರ ಕೊಡುಗೆ ಅಪಾರ ಎಂದು ಬೀದರ್‌ ಸಂಸದ ಸಾಗರ್ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪತ್ರಕರ್ತರು ವಿರೋಧ ಪಕ್ಷದವರಂತೆ ಕೆಲಸ ಮಾಡಿದರೆ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ಸಮಾಜ ಮತ್ತು ದೇಶ ಸುಧಾರಣೆಯಲ್ಲಿ ಪತ್ರಕರ್ತರ ಕೊಡುಗೆ ಅಪಾರ ಎಂದು ಬೀದರ್‌ ಸಂಸದ ಸಾಗರ್ ಖಂಡ್ರೆ ಹೇಳಿದರು.

ತಾಲೂಕಿನ ಸುಲೇಪೇಟ ಗ್ರಾಮದ ಮಹಾಂತೇಶ್ವರ್ ಕಲ್ಯಾಣ ಮಂಟಪದಲ್ಲಿ ಸ್ನೇಹ ಬಂಧು ಸಂಸ್ಥೆ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಗಣ್ಯ ಸೇವೆ ಸಲ್ಲಿಸಿದ ಮಹಾನೀಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಲ್ಲಿ ಆತಿ ದೊಡ್ಡ ಶಕ್ತಿ ಇದ್ದು, ಅದನ್ನು ಸಮಾಜಕ್ಕಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬರೂ ಪ್ರತಿನಿತ್ಯ ದಿನಪತ್ರಿಕೆ ಓದಬೇಕು. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ದಿನಪತ್ರಿಕೆಗಳು ಬಹಳಷ್ಟು ಅನುಕೂಲವಾಗಲಿದೆ. ನೈಜ ಘಟನೆಗಳನ್ನು ಸುದ್ದಿ ಪ್ರಚಾರ ಮಾಡಿದರೆ ಪತ್ರಿಕೆಗಳಿಗೆ ಒಳ್ಳೆಯ ಸ್ಥಾನ ಗೌರವ ಘನತೆ ಸಿಗಲಿದೆ. ಇಂದಿನ ಕೆಟ್ಟ ದಿನಗಳಲ್ಲಿ ಪತ್ರಕರ್ತರು ಅತ್ಯಂತ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ತಿಳಿಸಿದರು.

ಕಲಬುರಗಿ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ಪತ್ರಕರ್ತರು ಯಾವುದೇ ಪಕ್ಷಪಾತವಿಲ್ಲದೆ ಹಳ್ಳಿಗಳಿಗೆ ಹೋಗಿ ಸುದ್ದಿ ಮಾಡುತ್ತಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಚಿಂಚೋಳಿ ಪತ್ರಕರ್ತರು ಧೈರ್ಯವಾಗಿ ಸುದ್ದಿಗಳನ್ನು ಪ್ರಕಟಿಸುತ್ತಾರೆ. ತಾಲೂಕಿನ ಅಭಿವೃದ್ಧಿಯಲ್ಲಿ ಚಿಂಚೋಳಿ ಪತ್ರಕರ್ತರ ಪಾತ್ರ ಅತಿ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಕೆಪಿಸಿಸಿ ಉಪಾಧ್ಯಕ್ಷ ಸುಭಾಸ್ ರಾಠೋಡ, ಬಸವರಾಜ್ ಪಾಟೀಲ್ ಊಡುಗಿ, ಮಾತನಾಡಿದರು. ಚಿಂಚೋಳಿ ತಾಲೂಕಿನ ಸಾಧಕರಾದ ಜಗನ್ನಾಥ್ ಸೇರಿಕಾರ್, ಮಲ್ಲಿಕಾರ್ಜುನ್ ದೇಸಾಯಿ, ಡಾ.ಶಶಿಕಾಂತ್ ಶೆಳಗಿ, ಸಂಗಪ್ಪಶೆಟ್ಟಿ, ಎನ್.ಬಿ.ಹೀರೇಕುರುಬರ್ ಅವರನ್ನು ಸನ್ಮಾನಿಸಲಾಯಿತು. ಸೂಗುರ(ಕೆ)ಪೂಜ್ಯ ಡಾ. ಚನ್ನರುದ್ರಮನಿ ಶಿವಾಚಾರ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಾಬುರಾವ್ ಪಾಟೀಲ್, ಅನಿಲ್ ಕುಮಾರ್ ಜಮಾದಾರ್, ಬಸವರಾಜ್ ಮಲಿ, ಗೋಪಾಲರಾವ ಕಟ್ಟಿಮನಿ, ಮೇಘರಾಜ್ ರಾಥೋಡ್, ಮಹಾರುದ್ರಪ್ಪ ದೇಸಾಯಿ ಅತೀಶ ಪವಾರ್, ತಾಹೇರ್ ಪಟೇಲ್, ಮಸ್ತಾನ ಅಲಿ ಪಟ್ಟೆದಾರ್, ಶರಣು ಪಾಟೀಲ್, ಮಹೇಶ್ ಬೇಮಳಗಿ, ರವಿಶಂಕರ್ ರೆಡ್ಡಿ ಮುತ್ತಂಗಿ, ಅಬ್ದುಲ್ ಬಾಸಿದ್, ನಾಸಿರ್ ಮದರಗಿ, ಆನಂದ ಟೈಗರ್, ಶರಣು ಸ್ವಂತ ಮಾಣಿಕರಾವ್ ಗುಲಗುಂಜಿ, ರುದ್ರಮುನಿ ರಾಮತೀರ್ಥಕರ್, ಸುನಿಲ್ ಕೋರಿ ಇನ್ನಿತರ ಇದ್ದರು. ಮೋಯೀಜ ಪಟೇಲ್ ಸ್ವಾಗತಿಸಿದರು ಅಶೋಕ್ ಹೂವಿನಬಾವಿ ನಿರೂಪಣೆ ಮಾಡಿದರು ಲಿಂಗರಾಜ್ ಸ್ವಾಮಿ ವಂದಿಸಿದರು.