ಸಾರಾಂಶ
ಮನುಕುಲದ ಒಳಿತಿಗಾಗಿ, ಸಮಾಜದ ಜಾಗೃತಿಗಾಗಿ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಯಳನೋಡು ಸಂಸ್ಥಾನಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಅರಸೀಕೆರೆಯಲ್ಲಿ ರಾಜಶೇಖರ ಮಹಾಸ್ವಾಮಿಗಳ ಪುಣ್ಯ ಸ್ಮರಣಾರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಣ್ಯ ಸ್ಮರಣಾರಾಧನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಸೀಕೆರೆಮನುಕುಲದ ಒಳಿತಿಗಾಗಿ, ಸಮಾಜದ ಜಾಗೃತಿಗಾಗಿ ಮಠಗಳ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ದೊಡ್ಡಮೇಟಿಕುರ್ಕೆ ಬೂದಿಹಾಳ್ ಮಠದ ಲಿಂಗೈಕ್ಯ ಸಿದ್ದಬಸವ ಶಿವಯೋಗಿಗಳು ಧಾರ್ಮಿಕ ಕ್ಷೇತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿದರು ಎಂದು ಯಳನೋಡು ಸಂಸ್ಥಾನಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಹೇಳಿದರು
ತಾಲೂಕಿನ ದೊಡ್ಡ ಮೇಟಿಕುರ್ಕೆ ಬೂದಿಹಾಳ್ ವಿರಕ್ತಮಠದಲ್ಲಿ ಶ್ರೀ ಸಿದ್ದಬಸವ ಶಿವಯೋಗಿಗಳ ೬೬ನೇ ಹಾಗೂ ಶಾಂತವೀರ ಮಹಾಸ್ವಾಮಿಗಳು ಶ್ರೀ ರಾಜಶೇಖರ ಮಹಾಸ್ವಾಮಿಗಳ ಪುಣ್ಯ ಸ್ಮರಣಾರಾಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀವರ್ಚನ ನೀಡಿ, ಕುಪ್ಪೂರು ಮರುಳ ಸಿದ್ದೇಶ್ವರ ಅವರ ಜೀವನ ಚರಿತ್ರೆ ಹಾಗೂ ಅವರು ತೋರಿದ ಪವಾಡಗಳನ್ನು ಸಂಗ್ರಹಿಸಿ ಮರುಳಸಿದ್ದ ಪುರಾಣವನ್ನು ರಚಿಸಿದರು. ಇವತ್ತಿಗೂ ಭಕ್ತರ ಮನದಲ್ಲಿ ಅದು ಅಚ್ಚಳಿಯದೇ ಉಳಿದಿದೆ. ಹಾಗೆಯೇ ಎರಡನೇ ಗುರುಗಳಾದ ಲಿಂಗೈಕ್ಯ ಶಾಂತವೀರ ಮಹಾಸ್ವಾಮಿಗಳು ಸದಾ ಮೌನಿಗಳಾಗಿದ್ದು ಭಕ್ತರಲ್ಲಿ ಸಹಾನು ಮೂರ್ತಿಯಾಗಿ ವರ್ತಿಸುತ್ತ ಸರಳ ಸಜ್ಜನಿಕೆಗೆ ಹೆಸರು ವಾಸಿಯಾದ ಇವರು ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಲಿಂಗೈಕ್ಯ ಮೂರನೇ ರಾಜಶೇಖರ ಮಹಾಸ್ವಾಮಿಗಳು ಭಕ್ತರ ಏಳಿಗೆಗಾಗಿ ಸದಾಸಕ್ರಿಯರಾಗಿ ಮಠದ ಉದ್ದಾರಕ್ಕೋಸ್ಕರ ಶ್ರಮಿಸಿದರು. ಲಿಂಗೈಕ್ಯರಾದ ಮೂರು ಶ್ರೀಗಳವರ ಕೃಪಾಶೀರ್ವಾದದಿಂದ ಈಗಿನ ಶ್ರೀಗಳಾದ ಶಶಿಶೇಖರ ಸಿದ್ದಬಸವ ಮಹಾಸ್ವಾಮಿಗಳು ಆಧುನಿಕ ಪ್ರಪಂಚಕ್ಕೆ ಹೊಂದಿಕೊಂಡು ಮಠಗಳಿಗೆ ಹೊಸ ಹೊಸ ಕಟ್ಟಡಗಳ ನಿರ್ಮಾಣ, ಮಠದ ಅಭಿವೃದ್ದಿ, ಮಠದಿಂದ ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಡುತ್ತಾರೆ ಎಂದು ಶಾಘಿಸಿದರುಶ್ರೀ ಮಠವು ಆರ್ಥಿಕವಾಗಿ ಸದೃಢತೆ ಅಲ್ಲದಿದ್ದರೂ ಅಪಾರ ಭಕ್ತವೃಂದವನ್ನು ಹೊಂದಿದೆ. ಮಠದ ಏಳಿಗೆಗಾಗಿ ಗ್ರಾಮಸ್ಥರು ಅನೇಕ ಮುಖಂಡರು ಸಕ್ರಿಯವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು
ಜೆ.ಡಿ.ಎಸ್ ಮುಖಂಡರಾದ ಎನ್.ಆರ್.ಸಂತೋಷ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ. ಮಠದ ವತಿಯಿಂದ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಅರವಿಂದ ಶಾಲೆಯಲ್ಲಿ ಪ್ರತಿವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಮಕ್ಕಳ ಪೋಷಕರು ಕೂಡ ಮಠದ ಅಭಿವೃದ್ದಿಗೆ ಶ್ರಮಿಸಬೇಕು. ಮಕ್ಕಳು ಕೂಡ ಗುರುಗಳ ಮಾರ್ಗದರ್ಶನ, ತಾಯಿಯ ಮಮತೆ, ತಂದೆಯ ಪ್ರೀತಿ, ಯೋಧನ ಶಿಸ್ತು, ರೈತನ ಶ್ರಮ, ಇವುಗಳೆಲ್ಲವನ್ನು ಮೈಗೂಡಿಸಿಕೊಂಡು ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ತಿಳಿಸಿದರು.ಶಾಲಾ ಶಿಕ್ಷಕವೃಂದ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕರ್ತರಾದ ಹೊಸಳ್ಳಿ ಮಲ್ಲಿಕಾರ್ಜುನಪ್ಪ, ಡಿ.ಎಂ.ಕುರ್ಕೆ ಸ್ವಾಮಿ, ಗ್ರಾಮದ ಮುಖಂಡರು, ಗ್ರಾಮಸ್ಥರು, ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.