ಶೈಕ್ಷಣಿಕ ಕ್ರಾಂತಿಗೆ ಮಠಗಳ ಕೊಡುಗೆ ಅಪಾರ: ಶಿವಾನಂದ ಶ್ರೀ

| Published : Dec 27 2023, 01:30 AM IST

ಶೈಕ್ಷಣಿಕ ಕ್ರಾಂತಿಗೆ ಮಠಗಳ ಕೊಡುಗೆ ಅಪಾರ: ಶಿವಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕಳ್ಳಿ ಮಠ ಶಿಕ್ಷಣ ಸಂಸ್ಥೆಯ ಅವರ ಕುಟುಂಬಕ್ಕೋಸ್ಕರ ಮಾಡಿಲ್ಲ ಮಹಾಗಾಂವದ ಸುತ್ತಮುತ್ತಲಿನ ಬಡ ಜನರ ಅನುಕೂಲಕ್ಕಾಗಿ ಈ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಲಾಗಿದೆ ಎಂದ ಶಿವಾನಂದ ಶ್ರೀಗಳು

ಕನ್ನಡಪ್ರಭ ವಾರ್ತೆ ಕಮಲಾಪುರ

ಅಂದಿನ ಗುರುಲಿಂಗ ಸ್ವಾಮೀಜಿಗಳು ಕಳ್ಳಿ ಮಠವನ್ನು ಈ ಸ್ಥಾನಕ್ಕೆ ತರಲು ಅವರು ಪರಿಶ್ರಮ ತುಂಬಾ ದೊಡ್ಡದು. ಅದರ ಜೊತೆಗೆ ಕಳ್ಳಿ ಮಠ ಶಿಕ್ಷಣ ಸಂಸ್ಥೆಯ ಅವರ ಕುಟುಂಬಕ್ಕೋಸ್ಕರ ಮಾಡಿಲ್ಲ ಮಹಾಗಾಂವದ ಸುತ್ತಮುತ್ತಲಿನ ಬಡ ಜನರ ಅನುಕೂಲಕ್ಕಾಗಿ ಈ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದು ನಾದ ಅಮಿನಗಡ ಶಿವಾನಂದ ಸ್ವಾಮೀಜಿ ಹೇಳಿದರು.

ಮಹಾಗಾಂವ ಕಳ್ಳಿ ಮಠದ ವಿರೂಪಾಕ್ಷ ಸ್ವಾಮೀಜಿ 44ನೇ ಪುಣ್ಯ ಸ್ಮರಣೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯುವಲ್ಲಿ ಮಠಗಳ ಕೊಡುಗೆ ಆ ವಿಸ್ಮರಣೀಯ. ಸಂಸ್ಥೆಯ ಬೆಳವಣಿಗೆಯಲ್ಲಿ ಧಾನ್ಯಗಳು, ಸರಕಾರ ಹಾಗೂ ಪಾಲಕರ ಪಾತ್ರ ಪ್ರಮುಖವಾಗಿದೆ ಎಂದರು.

ಮಕ್ಕಳನ್ನು ಶಾಲೆಗೆ ಕಳಿಸುವುದು ಮಾತ್ರ ಪಾಲಕರ ಕೆಲಸವಲ್ಲ, ಅವರ ನಿತ್ಯದ ಚಟುವಟಿಕೆ ಮೇಲೆ ಗಮನ ಹರಿಸಬೇಕು. ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ರೇವುನಾಯಕ್ ಬೆಳಮಗಿ ಮಾತನಾಡಿ ನಾನು ನಾಲ್ಕು ಬಾರಿ ಶಾಸಕನಾಗಿ ಎರಡು ಬಾರಿ ಮಂತ್ರಿಯನ್ನಾಗಿ ಮಹಾಗಾಂವ ಗ್ರಾಮದಲ್ಲಿ ಗುರುಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹೈನುಗಾರಿಕೆ ಕಾಲೇಜ್, ಪಿಯುಸಿ ಕಾಲೇಜ್ ಹಾಗೂ ಸಿಸಿ ರಸ್ತೆ ಸಾಕಷ್ಟು ಅಭಿವೃದ್ಧಿ ಕೆಲಸಮಾಡಿದೆನೆ ಎಂದರು.

ವಿರುಪಾಕ್ಷ ದೇವರು ಕಳ್ಳಿಮಠ, ಗುರುಮೂರ್ತಿ ಸ್ವಾಮೀಜಿ, ಮುರುಳಿಸಿದ್ದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಿವಪ್ರಭು ಪಾಟೀಲ್ ಮಾಜಿ ಜಿಪಂ ಅಧ್ಯಕ್ಷ, ಸಾವಿತ್ರಿ ಸಲಗರ್ ತಹಸಿಲ್ದಾರರು, ಗುರುರಾಜ್ ಮತ್ತಿಮೂಡು,ಶಿವಕುಮಾರ್ ಪಸಾರ್, ಮಲ್ಲಿಕಾರ್ಜುನ್ ಮರತುರ, ಗುಂಡಪ್ಪ ಶಿರಡೋಣ, ನರೇಶ್ ಹರಸುರಕರ್, ಶಿವಾನಂದ್ ಮಠಪತಿ, ನಾಗರಾಜ್ ಮಲ್ಲಪ್ಪ ಕರಪೂರ್,ಅಂಬಾರಾಯ ಮಡ್ಡೆ, ರೇವಣಸಿದ್ಧ, ಮತ್ತೆ ಇತರರು ಇದ್ದರು.