ಪ್ರಜಾಪಿತ ಈಶ್ವರಿ ವಿದ್ಯಾಲಯದ ಕೊಡುಗೆ ಅಪಾರ: ಡಾ.ಕಾಂತರಾಜು

| Published : Oct 27 2024, 02:25 AM IST

ಸಾರಾಂಶ

ಅಜ್ಜಂಪುರ, ಇಂದಿನ ಒತ್ತಡ ಜೀವನದಲ್ಲಿ ಏಕಾಗ್ರತೆಗೆ ಒಂದು ಸೂಕ್ತವಾದ ವೇದಿಕೆಯನ್ನು ಪ್ರಜಾಪಿತ ಈಶ್ವರಿ ವಿದ್ಯಾಲಯದ ಕೊಡುಗೆ ಅಪಾರವಾಗಿದೆ ಎಂದು ತರೀಕೆರೆ ಉಪವಿಭಾಗ ಅಧಿಕಾರಿ ಡಾ.ಕಾಂತರಾಜು ಹೇಳಿದರು.

ಆತ್ಮ ದರ್ಶನ ಭವನದ 40ನೇ ವಾರ್ಷಿಕೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ಅಜ್ಜಂಪುರಇಂದಿನ ಒತ್ತಡ ಜೀವನದಲ್ಲಿ ಏಕಾಗ್ರತೆಗೆ ಒಂದು ಸೂಕ್ತವಾದ ವೇದಿಕೆಯನ್ನು ಪ್ರಜಾಪಿತ ಈಶ್ವರಿ ವಿದ್ಯಾಲಯದ ಕೊಡುಗೆ ಅಪಾರವಾಗಿದೆ ಎಂದು ತರೀಕೆರೆ ಉಪವಿಭಾಗ ಅಧಿಕಾರಿ ಡಾ.ಕಾಂತರಾಜು ಹೇಳಿದರು.

ಅಜ್ಜಂಪುರ ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಸಂಸ್ಥೆ ಆತ್ಮ ದರ್ಶನ ಭವನದ 40ನೇ ವಾರ್ಷೀಕೋತ್ಸವದಲ್ಲಿ ಮಾತನಾಡಿದರು. ರಾಷ್ಟ್ರಾದ್ಯಂತ ಇವರ ಕೇಂದ್ರಗಳಿದ್ದು ಇಲ್ಲಿ ಮನುಕುಲ ಉದ್ಧಾರಕ್ಕೆ ತಮ್ಮನ್ನು ತಾವೇ ಅರ್ಪಣೆ ಮಾಡಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಜ್ಞಾನ ಪ್ರಾರ್ಥನೆಗಳಿಂದ ಮನಸ್ಸಿನ ಏಕಾಗ್ರತೆ ಸಾಧಿಸಬಹುದು ಎಂದು ತಿಳಿಸಿದರು.

ಪತಂಜಲಿ ಯೋಗ ಕೇಂದ್ರದ ಎ.ಟಿ ಶ್ರೀನಿವಾಸ್ ಮಾತನಾಡುತ್ತಾ ಮನುಷ್ಯನದು ಒಂದು ಹಂತದಲ್ಲಿ ಹುಡುಗಾಟದ ಬದುಕು. ನಂತರ ಹಣ ಗಳಿಕೆ ಯಲ್ಲಿ ತೊಡಗುತ್ತಾನೆ ಆದರೆ ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಇಲ್ಲಿಯ ಈಶ್ವರಿ ವಿದ್ಯಾಲಯದಲ್ಲಿ ಯೋಗ ಜ್ಞಾನ ಆದ್ಯಾತ್ಮಿಕ ಚಿಂತನೆ ಹೇಳಿಕೊಡ ಲಾಗುತ್ತದೆ. ಅಜ್ಜಂಪುರ ಪ್ರಸಿದ್ಧಿಯಾಗಿರಲು ಹಿರಿಯರ ಚಿಂತನೆ ಇಂತಹ ಕೇಂದ್ರಗಳ ಸೇವೆ ಕಾರಣ ಎಂದು ಹೇಳಿದರು.

ಮಲೆಬೆನ್ನೂರಿನ ಎಚ್.ಎಸ್ ರುದ್ರಯ್ಯನವರು ರಾಜಯೋಗ ಶಿಕ್ಷಣದ ಪರಿಚಯ ಮಾಡಿದರು. ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ನೂತನ ಕಟ್ಟಡದ ಓಂ ಶಾಂತಿ ಧ್ವಜಾರೋಹಣನ್ನು ಉಸದ್ಘಾಟಿಸಿದರು. ಈ ಸಮಾರಂಭದಲ್ಲಿ ಮಹಿಳಾ ಸಬ್ ಇನ್ ಸ್ಪೆಕ್ಟರ್, ಗುತ್ತಿಗೆದಾರ ಆರ್ . ಕೃಷ್ಣಪ್ಪ , ನಿರ್ದೇಶಕ ಸಂಜೀವ ಗೌಡ, ರಂಗ ಸಂಘಟಕ ಎ.ಸಿ ಚಂದ್ರಪ್ಪ, ನಿವೇಶನ ದಾನಿ ಕಾಶಿನಾಥ‍್, ರಾಜಯೋಗಿನಿ ಜಯಂತಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾದ ಬಾಗ್ಯಕ್ಕನವರು ಕಾರ್ಯಕ್ರಮದ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕರಾದ ಶೀಲಕ್ಕ, ಕಾರ್ಯ ಕ್ರಮದ ಆರಂಭಕ್ಕೂ ಮುಂಚೆ ನಗರದ ಮ್ರಮುಖ ರಸ್ತೆಗಳಲ್ಲಿ ಶಾಂತಿ ಸಂದೇಶ ಮೆರವಣಿಗೆ ನಡೆಸಿದರು.