ಸಾರಾಂಶ
ಪ್ರತಿಯೊಬ್ಬ ವ್ಯಕ್ತಿಯು ಪ್ರವಾಸೋದ್ಯಮದ ಗ್ರಾಹಕ. ಕಳೆದ 500 ವರ್ಷಗಳಿಂದ ಪ್ರವಾಸೋದ್ಯಮ ಹಂತ-ಹಂತವಾಗಿ ಬೆಳೆಯಿತು. ಇದು ಆರ್ಥಿಕ ಬೆಳವಣಿಗೆಗೆ ಸಹಾಯಕವಾಯಿತು.
ಧಾರವಾಡ:
ಪ್ರವಾಸೋದ್ಯಮ ಕ್ಷೇತ್ರ ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದ್ದು, ಇದು ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ದೆಹಲಿಯ ಜಾಮಿಯಾ ಮಿಲಿಯಾ ಇಸ್ಮಾಯಿಲ್ ಕೇಂದ್ರೀಯ ವಿವಿ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ನಿಮೀತ ಚೌಧರಿ ಹೇಳಿದರು.ಇಲ್ಲಿಯ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಕವಿವಿ ಡೈಮಂಡ್ ಜುಬ್ಲಿ ಸ್ಮಾರಕ ದತ್ತಿ ಉದ್ಘಾಟಿಸಿದ ಅವರು "ಉದ್ಯಮಶೀಲತೆಯಲ್ಲಿ ಸ್ಥಳೀಯ ಪ್ರವಾಸದ ಮಾರ್ಗದರ್ಶಿಯ ವ್ಯಾಖ್ಯಾನ ಮತ್ತು ಅನ್ವೇಷಣೆ " ಕುರಿತು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯು ಪ್ರವಾಸೋದ್ಯಮದ ಗ್ರಾಹಕ. ಕಳೆದ 500 ವರ್ಷಗಳಿಂದ ಪ್ರವಾಸೋದ್ಯಮ ಹಂತ-ಹಂತವಾಗಿ ಬೆಳೆಯಿತು. ಇದು ಆರ್ಥಿಕ ಬೆಳವಣಿಗೆಗೆ ಸಹಾಯಕವಾಯಿತು. ಆರ್ಥಿಕ ಸುಸ್ಥಿರತೆಯಿಂದ ಸಮಾಜದ ಉತ್ತಮ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದ ಅವರು, ದೇಶದ ಅನೇಕ ಸಣ್ಣ ಮತ್ತು ದೊಡ್ಡ ನಗರಗಳು ಪ್ರವಾಸೋದ್ಯಮ ತಾಣಗಳಾಗಿ ಮಾರ್ಪಟ್ಟಿರುವುದು ಆರ್ಥಿಕತೆ ಬೆಳವಣಿಗೆಗೆ ಸಹಾಯಕ ಎಂದರು.ಕಳೆದ 50 ವರ್ಷಗಳ ಹಿಂದೆ ಪ್ರವಾಸೋದ್ಯಮ ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗಿತ್ತು. ಇಂದು ಪ್ರವಾಸೋದ್ಯಮ ಉದ್ಯಮವಾಗಿ ಬೆಳೆದಿದ್ದು ಜಾಗತಿಕ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡುತ್ತದೆ ಎಂದರು.
ಪ್ರಾಚಾರ್ಯ ಡಾ. ಎಂ.ಎಸ್. ಸಾಳುಂಕೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಫುಲವಾದ ಉದ್ಯೋಗ ಅವಕಾಶಗಳಿದ್ದು, ಪ್ರಸ್ತುತ ವಿದ್ಯಾರ್ಥಿಗಳು ವೃತ್ತಿಪರ ಕೊರ್ಸ್ ಅಧ್ಯಯನಕ್ಕೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ನಿಖಾಯದ ಡೀನ್ ಜಯಶ್ರೀ ಎಸ್. ಮಾತನಾಡಿದರು. ವಿಭಾಗದ ಸಂಯೋಜಕ ಡಾ. ಜಗದೀಶ ಕಿವುಡನವರ, ಡಾ. ಐ.ಸಿ. ಮುಳಗುಂದ, ಡಾ. ಸುಷ್ಮಾ ಮಳಗಿ, ಡಾ. ರಾಣಿ ರವಿಶಂಕರ, ಡಾ. ಸಂದೀಪ್ ಘೋರ್ಪಡೆ, ಡಾ. ಮಹೇಶ ಪಾಟೀಲ, ರಾಜು ಚಿಟಗುಪ್ಪಿ. ಡಾ. ಸರ್ವಮಂಗಳಾ ಇದ್ದರು.