ಸಾರಾಂಶ
ಎಸ್. ಕೋಡಿ ಕುಲಾಲ ಸಂಘದಲ್ಲಿ ನಡೆದ ಕುಲಾಲ ಸಮಾಜ ಸೇವಾ ಸಂಘ ತೋಕೂರುನ ಕುಲಾಲ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಸಮಾಜ ಮುಖಿ ಚಿಂತನೆಯ ಮೂಲಕ ಸಮಾಜ ಬೆಳೆಯಬೇಕಾದರೆ ಯುವಕರ ಕೊಡುಗೆ ಅತಿ ಅಗತ್ಯ ಎಂದು ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಗಂಗಾಧರ ಬಂಜನ್ ಹೇಳಿದರು.ಎಸ್. ಕೋಡಿ ಕುಲಾಲ ಸಂಘದಲ್ಲಿ ನಡೆದ ಕುಲಾಲ ಸಮಾಜ ಸೇವಾ ಸಂಘ ತೋಕೂರುನ ಕುಲಾಲ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಶ್ರೀಧರ ಬಂಗೇರ ಅಧ್ಯಕ್ಷತೆ ವಹಿಸಿದ್ದು ಈ ಸಂದರ್ಭ ಪ್ರತಿಭಾ ಪುರಸ್ಕಾರ ದಡಿಯಲ್ಲಿ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಚೈತ್ರಾ , ರಜತ್ ಎಮ್ ಬಂಗೇರ, ಪ್ರತೀಕ್ಷಾ ಆರ್ ಗುಜರನ್, ತನಿಷ್ಕ್ ಮೂಲ್ಯ ಹಾಗೂ ಎಸ್‌ಎಸ್‌ಎಲ್ ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸೃಜನ್ ಜಿ. ಮೂಲ್ಯ, ವಿಶಾನ್ ಎಲ್ ಕುಲಾಲ್, ಮಾಸನ ರನ್ನು ಗೌರವಿಸಲಾಯಿತು.
ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ತನ್ಮಯಿ ಅವರನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷ ಸಮಾಜದ ಹಿರಿಯ ಮುಂದಾಳು ಸುಂದರ ಸಾಲ್ಯಾನ್, ಚಂದು ಮೂಲ್ಯ, ಗೋಪಾಲ ಬಂಜನ್ ಕೊಡೆತ್ತೂರು, ಗೋಪಾಲ ಶಿಮಂತೂರು, ಶಿವಾನಂದ ಆಶಾ ಗಿರಿಯಪ್ಪ, ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯ ಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಲಕ್ಷಣ್ ಬಿ. ಬಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.