ಸಾರಾಂಶ
30 ಅಡಿ ಉದ್ದದ ಫೈಬರ್ ಫ್ಲೋರ್ ಮ್ಯಾಟ್ (ನೆಲ ಹಾಸು), ದಿನ ಬಳಕೆ ಸಾಮಗ್ರಿಗಳಾದ ಸಾಬೂನು, ಡಿಟರ್ಜಂಟ್, ಟೂತ್ ಪೇಸ್ಟ್, ಫಿನಾಯಿಲ್, ಜೊತೆಗೆ ದಿನಸಿ ಸಾಮಗ್ರಿಗಳು, ಹಣ್ಣು ಹಂಪಲು, ತಿಂಡಿ, ತಿನಿಸುಗಳು ಇತ್ಯಾದಿ ಸುಮಾರು ಮೂವತ್ತು ಸಾವಿರ ರು. ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಪರ್ಕಳ
ಇಲ್ಲಿನ ಮಂಗಳ ಕಲಾ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ಉಪ್ಪೂರಿನ ಸಾಲ್ಮರದಲ್ಲಿರುವ ಸ್ಪಂದನ ವಿಶೇಷ ಮಕ್ಕಳ ವಸತಿ ಶಾಲೆಗೆ 30 ಅಡಿ ಉದ್ದದ ಫೈಬರ್ ಫ್ಲೋರ್ ಮ್ಯಾಟ್ (ನೆಲ ಹಾಸು), ದಿನ ಬಳಕೆ ಸಾಮಗ್ರಿಗಳಾದ ಸಾಬೂನು, ಡಿಟರ್ಜಂಟ್, ಟೂತ್ ಪೇಸ್ಟ್, ಫಿನಾಯಿಲ್, ಜೊತೆಗೆ ದಿನಸಿ ಸಾಮಗ್ರಿಗಳು, ಹಣ್ಣು ಹಂಪಲು, ತಿಂಡಿ, ತಿನಿಸುಗಳು ಇತ್ಯಾದಿ ಸುಮಾರು ಮೂವತ್ತು ಸಾವಿರ ರು. ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭ ಉಪಸ್ಥಿತರಿದ್ದ ವೇದಿಕೆಯ ಪೋಷಕರಲ್ಲೊಬ್ಬರಾದ ಪ್ರಕಾಶ್ ಶೆಣೈ, ಅಲ್ಲಿನ ಮಕ್ಕಳಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಿ ಶುಭ ಹಾರೈಸಿದರು.
ವೇದಿಕೆಯ ಅಧ್ಯಕ್ಷ ಸಂದೀಪ್ ನಾಯ್ಕ್ ಕಬ್ಯಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ಪಂದನ ವಸತಿಶಾಲೆಯ ಸ್ಥಾಪಕರು, ಮುಖ್ಯಸ್ಥರೂ ಆಗಿರುವ ಜನಾರ್ದನ, ವೇದಿಕೆಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಅವರನ್ನು ವೇದಿಕೆ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.ನಿವೃತ್ತ ಯೋಧ ಕೃಷ್ಣಪ್ಪ ಪರ್ಕಳ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಶೋಕ್ ಸಣ್ಣಕ್ಕಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಚಕ್ರತೀರ್ಥ, ಸದಸ್ಯರಾದ ಗಣೇಶ್ ಸಣ್ಣಕ್ಕಿಬೆಟ್ಟು, ಗೋಪಿ ಹಿರೇಬೆಟ್ಟು, ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು, ಸಂತೋಷ್ ಪ್ರಭು ಕಬ್ಯಾಡಿ, ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ಸಂತೋಷ್ ಕುಮಾರ್ ಸಣ್ಣಕ್ಕಿಬೆಟ್ಟು, ಸುಧಾಕರ ನಾಯಕ್ ಕಬ್ಯಾಡಿ, ಉದಯಕುಮಾರ್ ಆಲಂಬಿ, ಪಿ.ರವಿರಾಜ್ ಆಚಾರ್ಯ, ಪರ್ಕಳ ಸತೀಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.