ಸೈಬರ್ ಅಪರಾಧಗಳ ನಿಯಂತ್ರಣ, ಸಂಶೋಧನೆಗೆ ಒತ್ತು

| Published : Aug 10 2025, 01:30 AM IST

ಸೈಬರ್ ಅಪರಾಧಗಳ ನಿಯಂತ್ರಣ, ಸಂಶೋಧನೆಗೆ ಒತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಇಂಟರ್ ನೆಟ್ ಬಳಸಿ ನಡೆಸಲಾಗುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸಂಶೋಧನೆಗಳನ್ನು ನಡೆಸಿ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರು ಇಂಟರ್ ನೆಟ್ ಬಳಸಿ ನಡೆಸಲಾಗುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸಂಶೋಧನೆಗಳನ್ನು ನಡೆಸಿ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟಿನಲ್ಲಿ ತುಮಕೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ರಾಜ್ಯದಲ್ಲಿಯೇ ಆಧುನಿಕ ತಂತ್ರಜ್ಞಾನ ಆಧರಿತ ಪರಂ ಸೈಬರ್ ಆರ್ಕ್ ಸೈಬರ್ ಸೆಕ್ಯೂರಿಟಿ ಸಂಶೋಧನಾ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು.ಇದೇ ವೇಳೆ ಚಾಣುಕ್ಯ ಬ್ಲಾಕ್‌ನ ಎಸ್ಎಸ್ ಐಬಿಎಂನ ವಿಸ್ತರಣಾ ಕಟ್ಟಡದ ಕೊಠಡಿಗಳ ಸಂಕೀರ್ಣವನ್ನು ಚಾಲನೆಗೊಳಿಸಿದರು. ಕ್ಯಾಂಪಸ್‌ನಲ್ಲಿ ಆರಂಭಗೊಂಡಿರುವ ಪರಂ ಸೈಬರ್ ಆರ್ಕ್ ಸೈಬರ್ ಸೆಕ್ಯೂರಿಟಿ ಕೇಂದ್ರವನ್ನು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಜಿ ಪರಮೇಶ್ವರ್ ಉದ್ಘಾಟಿಸಿದರು. ನಂತರ ಸೈಬರ್ ತಜ್ಞರೊಂದಿಗೆ ಕೇಂದ್ರವನ್ನು ವೀಕ್ಷಣ ಮಾಡಿ, ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡರು.

ತಂದೆ ಗಂಗಾಧರಯ್ಯನವರು ಕಟ್ಟಿದ ಶಿಕ್ಷಣ ಸಂಸ್ಥೆ ಇಂದು ವಿದೇಶಿ ಮಟ್ಟದಲ್ಲಿ ಗುಣಮಟ್ಟ ಉನ್ನತ ಶಿಕ್ಷಣ ನೀಡಲು ಮುಂದಾಗಿದೆ. ತಂದೆಯಂತೆ ನನಗೆ ಶೈಕ್ಷಣಿಕವಾಗಿ ಅನೇಕ ಕನಸುಗಳಿವೆ. ಈ ನಿಟ್ಟನಿಲ್ಲಿ ಇಂದು ದೇಶ-ವಿದೇಶಗಳಲ್ಲಿ ನಮ್ಮ ಸಂಸ್ಥೆಯನ್ನ ಗುರ್ತಿಸುವಂತಹ ಕೆಲಸಗಳಾಗುತ್ತಿವೆ ಎಂದರು. ಇತ್ತೀಚಿಗೆ ಅಹಮ್ಮದ್‌ಬಾದ್‌ನ ಸೈಬರ್ ಸೆಕ್ಯೂರಿಟಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ತಾಂತ್ರಿಕತೆ ಮತ್ತು ಅಳವಡಿಕೆಯನ್ನು ಗಮನಿಸಿದೆ. ಆ ಸೈಬರ್ ಸಂಶೋಧನಾ ಕೇಂದ್ರದಿಂದ ಪ್ರೇರೇಪಿತನಾಗಿ ರಾಜ್ಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ಹೆಬ್ಬಾಕೆಯಾಗಿತ್ತು. ಇದನ್ನು ಸಿಎಂ ಜೊತೆ ಚರ್ಚಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೂ ಅವಕಾಶವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿತವಾದ ಸಂಶೋಧನಾ ಕೇಂದ್ರವಾಗಿದೆ ಎಂದು ಡಾ. ಜಿ ಪರಮೇಶ್ವರ್ ಅವರು ನುಡಿದರು.ಇಂದು ಜಗತ್ತಿನನಾದ್ಯಾಂತ ಸಮಸ್ಯೆಯಾಗಿರುವ ಸೈಬರ್ ಸೆಕ್ಯೂರಿಟಿ ಅನೇಕ ಸಮಸ್ಯೆಗಳನ್ನು ಪ್ರತಿದಿನ ನೋಡುತ್ತಿದ್ದೇನೆ. ಬ್ಯಾಂಕ್ ವಂಚನ, ಸೈಬರ್ ಮತ್ತು ಡಿಜಿಟಲ್ ಅರೆಸ್ಟ್, ಸರ್ಕಾರಿ ಮಾಹಿ, ಗೌಪ್ಯ ಮಾಹಿತಿ ಕಳುವಾಗುತ್ತಿವೆ. ದೇಶದ ಭದ್ರತಾ ವ್ಯವಸ್ಥೆಯನ್ನು ಸೈಬರ್ ದಾಳಿಯಿಂದ ಹಾಳುಮಾಡುವ ಕೆಲಸಗಳಾಗುತ್ತಿವೆ. ನಾವು ಇದಕ್ಕೆ ಪರಿಹಾರ ಕಂಡಕೊಳ್ಳಬೇಕಿದೆ. ಸರ್ಕಾರ ಇದಕ್ಕೆ ಪೂರಕವಾದ ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆಗಳನ್ನ ಮಾಡುತ್ತಿದೆ. ಇದಕ್ಕೆ ಇಂತಹ ಸಂಶೋಧನಾ ಕೇಂದ್ರಗಳ ಸ್ಥಾಪನೆ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಡಾ. ಜಿ ಪರಮೇಶ್ವರ್ ಹೇಳಿದರು.ಚೆನ್ನೈನ ಸ್ಕಿಲ್ಸಾಂಡ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಕೊಟ್ಟ ರಾಮ್ ರಮೇಶ್ ಮಾತನಾಡಿ, ಜಗತ್ತಿನೆಲ್ಲೆಡೆ ಸೈಬರ್ ಹಾವಳಿಯಿದ್ದು, ಇದಕ್ಕೆ ಸೂಕ್ತ ಪರಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಸ್‌ಎಸ್‌ಐಟಿ ಯಲ್ಲಿ ಸೈಬರ್ ಸಂಶೋಧನಾ ಕೇಂದ್ರ ತೆರದಿದ್ದು, ವಂಚನೆ, ಕಳ್ಳತನ ಮತ್ತು ದುರುದ್ದೇಶಪೂರಿತ ದಾಳಿಗಳನ್ನು ಆರ್ಥಿಕ ವ್ಯವಹಾರಗಳ ವಂಚನೆ ಮತ್ತು ದುರುಪಯೋಗ ಪತ್ತೆ ಹಚ್ಚುವುದು, ಸೈಬರ್ ಅಪರಾಧಿಗಳ ಪತ್ತೆ ಮಾಡಿ, ಅವರ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವ ‘ಪರಂ ಸೈಬರ್ ಆರ್ಕ್’ ಕೇಂದ್ರವನ್ನು ಕೇವಲ 42 ದಿನಗಳಲ್ಲಿ ಕಾರ್ಯಾರಂಭಕ್ಕೆ ಸಜ್ಜುಗೊಳಿಸಲಾಗಿದೆ. ಈ ಸಂಶೋಧನಾ ಕೇಂದ್ರವು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಅಧ್ಯಯನ ನಡೆಸುವವರಿಗೆ ಉತ್ತಮ ವೇದಿಕೆ. ಇದೊಂದು ಜಾಗತಿಕ ಮಟ್ಟದಲ್ಲಿನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು.ಅಮೇರಿಕಾದ ಪ್ಲೋರಿಡಾ ಇಂಟರ್ ನ್ಯಾಷಿನಲ್ ಯುನಿವರ್ಸಿಟಿಯ ಪ್ರಾಧ್ಯಾಪಕ ಡಾ. ಎಸ್.ಎಸ್. ಆಯ್ಯಂಗಾರ್ ಮಾತನಾಡಿ, ಸೈಬರ್ ಕ್ಷೇತ್ರದ ಅಪಾಯಗಳನ್ನು ತಪ್ಪಿಸಲು ಡಾ. ಪರಮೇಶ್ವರ ಅವರ ಇಚ್ಛಾಶಕ್ತಿಯಿಂದ ತೆರೆದಿರುವ ಸಂಶೋಧನಾ ಕೇಂದ್ರ ಮುಂದಿನ ಸಂಶೋಧನೆಗಳಿಗೆ ದಿಕ್ಸೂಚಿಯಾಗಲಿದೆ. ತಂತ್ರಜ್ಞಾನ ಬೆಳೆದಂತೆ ಸಮಸ್ಯೆ ಹೆಚ್ಚುತ್ತಿದ್ದು ಇದಕ್ಕೆ ಸಂಶೋಧನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲು ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಇದೇ ವೇಳೆ ಕ್ಯಾಂಪಸ್‌ನ ಪಿಜಿ ಬ್ಲಾಕ್‌ನಲ್ಲಿ ನೂತನವಾಗಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಚಾಣುಕ್ಯ ಬ್ಲಾಕ್‌ನ ವಿಸ್ತರಣಾ ಕಟ್ಟಡದ ಉದ್ಘಾಟನೆ ಸಹ ನೆರವೇರಿಸಲಾಯಿತು. ಎಸ್‌ಎಸ್‌ಐಬಿಎಂನ ಪದವಿ ತರಗತಿ ಕೊಠಡಿಗಳಲ್ಲಿ ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಿರಿಯ ಸಂಯೋಜಕ ಕೈಲಾಸ್ ಶಿವನಾಗಿ, ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವ ಡಾ.ಅಶೋಕ್ ಮೆಹ್ತಾ, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವಿರಯ್ಯ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂಎಸ್ ರವಿಪ್ರಕಾಶ್, ಡಿನ್ ಡಾ. ರೇಣುಕಲತಾ, ಎಸ್ಟೇಟ್ ಅಧಿಕಾರಿ ಡಾ.ಶಿವರಾಜು, ಎಸ್‌ಎಸ್‌ಐಬಿಎಂನ ಪ್ರಾಂಶುಪಾಲರಾದ ಡಾ.ಮಮತಾ ಸೇರಿದಂತೆ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.