ಸಾರಾಂಶ
ಕೊಪ್ಪಳ:
ಮತಾಂತರವಾಗಲು ಪ್ರತಿಯೊಬ್ಬರಿಗೆ ಕಾನೂನಿನಲ್ಲಿಯೇ ಅವಕಾಶವಿದೆ. ಹೀಗಿರುವಾಗ ಆಸಕ್ತರು ಏಕೆ ಮತಾಂತರವಾಗಬಾರದು ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಾಯ ಪೂರ್ವಕ, ಆಮಿಷವೊಡ್ಡಿ ಮತಾಂತರ ಆಗುವುದು ತಪ್ಪು. ಅದಕ್ಕೆ ನಮ್ಮ ವಿರೋಧವಿದೆ. ಆದರೆ, ಸ್ವಯಂಪ್ರೇರಣೆಯಿಂದ ಮತಾಂತರವಾದರೆ ತಪ್ಪೇನು ಎಂದರು.
ಪ್ರಜಾಪ್ರಭುತ್ವ ದೇಶದಲ್ಲಿ ಕಾನೂನಿನಡಿ ಮತಾಂತರವಾಗಲು ಅಡ್ಡಿಪಡಿಸುವಂತಿಲ್ಲ ಎಂದ ಸಚಿವರು, ಬಿಜೆಪಿಗರು ಆಡಳಿತ ಮಾಡಿದಂತೆ ನಾವು ಮಾಡಲು ಆಗುವುದಿಲ್ಲ. ಬೆಳಗ್ಗೆ ಇದನ್ನೇ ಉಪಾಹಾರ ತಿನ್ನಬೇಕು, ಮಧ್ಯಾಹ್ನ ಇದೇ ಊಟ ಮಾಡಬೇಕೆಂದು ಹೇಳಲು ಆಗದು. ನಮ್ಮ ಸರ್ಕಾರದಲ್ಲಿ ಸರ್ವರು ಸ್ವತಂತ್ರರು. ಹೀಗಾಗಿ ಸೆ.22ರಿಂದ ನಡೆಯುವ ಸಮೀಕ್ಷೆಯಲ್ಲಿ ಜನರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಬರೆಸುವುದು ಅವರಿಗೆ ಬಿಟ್ಟ ವಿಚಾರ. ಅವರು ಹೇಳಿದಂತೆ ಎಲ್ಲವೂ ದಾಖಲಾಗುತ್ತದೆ. ಮತಾಂತರಗೊಂಡಿದ್ದರೆ ದಾಖಲೆ ಆಗಲಿ. ಇದಕ್ಕೆ ಸೋನಿಯಾ ಗಾಂಧಿ ಹೆಸರು ಎಳೆದು ತರೆಯುವ ಸಣ್ಣತನ ಮಾಡಬಾರದೆಂದು ಬಿಜೆಪಿಗೆ ತಿಳಿ ಹೇಳಿದರು.ಕೆಲವರು ಎಸ್ಸಿ ಕ್ರಿಶ್ಚಿಯನ್, ಲಿಂಗಾಯತ ಕ್ರಿಯಶ್ಚಿನ್, ಕುರುಬ ಕ್ರಿಶ್ಚಿಯನ್ ಬರೆಸಿದರೆ ಪ್ರತ್ಯೇಕ ಗುಂಪು ಮಾಡುತ್ತೇವೆ. ಅವರು ಏನೇನು ಬರೆಸುತ್ತಾರೋ ಬರೆಯಿಸಲಿ, ನಂತರ ಈ ಬಗ್ಗೆ ಆಯೋಗ ತೀರ್ಮಾನಿಸುತ್ತದೆ ಎಂದ ಸಚಿವರು, ಬಿಜೆಪಿಗರು ನರೇಂದ್ರ ಮೋದಿ ಓಲೈಸಲು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಆದರೆ, ನಾವು ಸೋನಿಯಾ ಗಾಂಧಿ ಅವರನ್ನು ಮನವೊಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಮತಾಂತರಗೊಂಡವರಿಗೆ ಮೂಲ ಜಾತಿಯ ಸೌಲಭ್ಯ ದೊರೆಯುತ್ತದೆಯೇ ಎನ್ನುವ ಪ್ರಶ್ನೆಗೆ, ಈ ಕುರಿತು ಇನ್ನೂ ಚರ್ಚೆಯಾಗಿಲ್ಲ. ಯಾರು ಕ್ರಿಶ್ಚಿಯನ್ ಎಂದು ಬರೆಸುತ್ತಾರೆ ಅವರನ್ನು ಕ್ರಿಶ್ಚಿಯನ್ ಎಂದೇ ಭಾವಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಅವರಿಗೆ ಸೌಲಭ್ಯ ಕೊಡಬೇಕು, ಬೇಡವೇ ಎನ್ನುವುದನ್ನು ವರದಿಯ ನಂತರ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.ಈ ಸಮೀಕ್ಷೆ ಬಳಿಕ ಬಿಜೆಪಿಗರಿಗೆ ಅಡ್ರೆಸ್ ಇರುವುದಿಲ್ಲ. ಹೀಗಾಗಿ ಅವರು ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದರೆ, ಬಡವರ ಮಕ್ಕಳು ಹಣೇಶ, ಧರ್ಮದ ಹೆಸರಿನಲ್ಲಿ ಬೀದಿಯಲ್ಲಿ ಸಾಯುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಅವರು ರಾಜಕೀಯ ಮಾಡುತ್ತಾರೆ. ಅವರ ಮಕ್ಕಳು ಏಕೆ ಬರುವುದಿಲ್ಲ? ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಇದ್ದರು.ನೈತಿಕತೆ ಇಲ್ಲ:
ಸಂಸದ ಗೋವಿಂದ ಕಾರಜೋಳ, ನಾರಾಯಣ ಸ್ವಾಮಿ ಅವರಿಗೆ ಒಳಮೀಸಲಾತಿ ಕುರಿತು ಮಾತನಾಡುವ ನೈತಿಕತೆಯೇ ಇಲ್ಲ. ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಇವರು ಏನು ಮಾಡುತ್ತಿದ್ದರು ಎಂದು ಕಿಡಿಕಾರಿದರು.ಇದೀಗ ಸಮೀಕ್ಷೆ ನಡೆಯುತ್ತಿರುವುದರಿಂದ ತುಳಿತಕ್ಕೆ ಒಳಗಾದವರನ್ನು ಗುರುತಿಸಲು, ಅವರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ ನೀಡಿ ಮೇಲೆತ್ತುವ ಕಾರ್ಯ ಮಾಡಲಾಗುತ್ತದೆ ಎಂದರು.ಗೇಟ್ ಬದಲಿಸಲು ಸಿದ್ಧತೆ:
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಬದಲಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನವೆಂಬರ್ ತಿಂಗಳಲ್ಲಿ ಗೇಟ್ ಬದಲಾಯಿಸುವ ಕಾರ್ಯ ನಡೆಯುತ್ತದೆ. 6 ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ 2ನೇ ಬೆಳೆಗೆ ನೀರು ಬಿಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))