ಕೇಂದ್ರದ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡಿ: ಲಲಿತಾ

| Published : Feb 03 2024, 01:47 AM IST

ಸಾರಾಂಶ

ಕೇಂದ್ರ ಸರ್ಕಾರವು ದೇಶದ ಪ್ರಗತಿಗೆ, ಬಡವರು, ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು

ಕೊಪ್ಪಳ: ಕೇಂದ್ರ ಸರ್ಕಾರವು ದೇಶದ ಪ್ರಗತಿಗೆ, ಬಡವರು, ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು ಎಂದು ರಾಜ್ಯ ಕಾರ್ಯದರ್ಶಿ ಲಲಿತಾ ಅನಾಪುರ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾ ವಿಶೇಷ ಕಾರ್ಯಾಕಾರಿಣಿ ಸಬೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪಕ್ಷ ಕೊಟ್ಟಿರುವ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು. ‌ಅಂದಾಗಲೇ ಪಕ್ಷ ಬಲಹಲಗೊಳ್ಳುತ್ತದೆ. ರಾಷ್ಟ್ರೀಯ ಪಕ್ಷ ಅಂದಾಗ ವ್ಯತ್ಯಾಸ ಇದ್ದೇ ಇರುತ್ತವೆ. ಅವುಗಳನ್ನು ಹೊಂದಾಣಿಕೆಯನ್ನು ಮಾಡಿಕೊಂಡು ಹೋಗಬೇಕು. ಜನಧನ್ ಯೋಜನೆಯಲ್ಲಿ ಮಹಿಳೆಯರು ಲಾಭ ಪಡೆದಿದ್ದಾರೆ. ಉಜ್ವಲ ಯೋಜನೆ ಸಾಕಷ್ಟು ಅನುಕೂಲವಾಗಿದೆ. ಸಿಲಿಂಡರ್ ದರ ಹೆಚ್ಚಳದ ಬಗ್ಗೆ ಕಾಂಗ್ರೆಸ್ ಆರೋಪ‌ ಮಾಡುತ್ತದೆ. ಇದನ್ನು ನಾವು ವಿರೋಧಿಸುವಲ್ಲಿ ವಿಫಲವಾಗಿದ್ದೇವೆ ಎಂದರು.ಭೇಟಿ ಬಚಾವೋ ಯೋಜನೆ, ಆಯುಷ್ಮಾನ್‌ಭವ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ‌.‌ ಮುದ್ರಾ ಯೋಜನೆಯಿಂದ ಮಹಿಳೆಯರು ಮತ್ತು ಯುವಕರು ಉದ್ಯೋಗ ಪಡೆಯುವುದು ಅಷ್ಟೇ ಅಲ್ಲ, ನೀಡುವ ಶಕ್ತಿ ಪಡೆದಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾದವು ಎಂದರು.ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಕೊಡುವುದನ್ನು ನಿಲ್ಲಿಸಲಾಯಿತು. ಇದು ರಾಜ್ಯ ಸರ್ಕಾರದಿಂದ ರೈತರಿಗೆ ಆಗಿರುವ ಅನ್ಯಾಯ ಎನ್ನುವುದನ್ನು ಮತದಾರರಿಗೆ ಗ್ರಾಮ ಚಲೋ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಕೊಡಬೇಕು ಎಂದರು.ಪಕ್ಷದ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಸಂಘಟನೆ ವೇಗ ಪಡೆದುಕೊಂಡಿದೆ. ಇಡೀ ರಾಜ್ಯಾದ್ಯಂತ ಬಿಜೆಪಿಯತ್ತ ಮತ್ತೆ ಒಲವು ಪ್ರಾರಂಭವಾಗಿದೆ. ಹೀಗಾಗಿ, ಇದನ್ನು ಸದ್ವಿನಿಯೋಗ ಮಾಡಿಕೊಳ್ಳುವ ಅಗತ್ಯವಿದೆ. ಎನ್ ಡಿ ಎ ಸರ್ಕಾರವನ್ನು ಅಭಿನಂದಿಸುವ ನಿರ್ಧಾರ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ಕುರಿತು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ವೈಫಲ್ಯ ಮತ್ತು ದುರಾಡಳಿತದ ವಿರುದ್ಧ ಜಾಗೃತಿ ಮೂಡಿಸಬೇಕಾಗಿದೆ. ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದರು.ಪ್ರತಿ ಮಂಡಲಕ್ಕೂ ನಾನು ಸುತ್ತಾಡಿ, ಪಕ್ಷ ಸಂಘಟನೆ ಮಾಡುತ್ತೇನೆ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡುವ ಅವಕಾಶ ನಮ್ಮದಾಗಿದೆ. ಇಂಥ ಅವಕಾಶ ಸಿಕ್ಕಿರುವುದೇ ದೊಡ್ಡ ಭಾಗ್ಯವಾಗಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನೂ ಪ್ರತಿ ಮನೆಗೂ ತಲುಪಬೇಕಾಗಿದೆ‌. ಪಕ್ಷದ ಹೈಕಮಾಂಡ ನೀಡುವ ಸೂಚನೆಗಳನ್ನು ಪಾಲಿಸೋಣ ಎಂದು ಹೇಳಿದರು.ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಹಿಂದಿನ ಪದಾಧಿಕಾರಿಗಳನ್ನೇ ಮುಂದುವರೆಸಲಾಗಿದೆ. ನಿಮಗೆಲ್ಲ ಅನುಭವ ಇರುವುದರಿದ ಸಂಘಟನೆ ತೀವ್ರಗೊಳಿಸಬೇಕಾಗಿದೆ. ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವು ದುಡಿಯಬೇಕಾಗಿದೆ ಎಂದರು.ವಿಭಾಗೀಯ ಪ್ರಭಾರಿ ಚಂದ್ರು ಹಲಿಗೇರಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿದರು.ಕೆ.‌ ಬಸವರಾಜ, ಜಿ.ವೀರಪ್ಪ ಕೆಸರಟ್ಟಿ, ಗಿರೇಗೌಡ, ಮಂಜುಳಾ ಕರಡಿ, ಕೆ.‌ಶರಣಪ್ಪ, ನರಸಿಂಗರಾವ್ ಕುಲಕರ್ಣಿ, ಶೋಭಾ ನಗರಿ, ಉಮೇಶ ಸಜ್ಜನ, ಶಿವಲೀಲಾ ದಳವಾಯಿ ಇದ್ದರು.ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಅನೇಕರು ಇರುತ್ತಾರೆ. ಅವರೆಲ್ಲರೂ ಚುನಾವಣೆಗೂ ಮುನ್ನ ಬ್ಯಾನರ್, ಫ್ಲೆಕ್ಸ್ ಹಾಕಿಸಿಕೊಳ್ಳುತ್ತಾರೆ. ನಂತರ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಾಯವಾಗುತ್ತಾರೆ. ಇಂಥರಿಂದ ನಾನು ಸೇರಿದಂತೆ ಎಲ್ಲರೂ ನೋವು ಉಂಡಿದ್ದೇವೆ. ಇದನ್ನು ತಡೆಯುವ ಪ್ರಯತ್ನ ಆಗಬೇಕು ಎನ್ನುತ್ತಾರೆ ಮಾಜಿ ಶಾಸಕ ಬಸವರಾಜ ದಢೇಸ್ಗೂರು.