ಆಂಗ್ಲ ಸುಲಲಿತ ಭಾಷೆ ಎಂಬುದನ್ನು ಮನವರಿಕೆ ಮಾಡಿ

| Published : Jan 17 2025, 12:50 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಆಂಗ್ಲಭಾಷೆಗೆ ಹೆಚ್ಚಾಗಿ ಭಯ ಭೀತರಾಗುತ್ತಿದ್ದು ಅದನ್ನು ಅವರ ಮನದಾಳದಿಂದ ದೂರಮಾಡಿ ನಿರ್ಭಿತಿಯಿಂದ ಪರೀಕ್ಷೆ ಎದುರಿಸುವಂತಾದರೆ ಈ ಕಾರ್ಯಾಗಾರಕ್ಕೂ ಸಾರ್ಥಕತೆ ಲಭಿಸುತ್ತದೆ

ನರೇಗಲ್ಲ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಂಗ್ಲಭಾಷೆಯನ್ನು ಕ್ಲಿಷ್ಟಕರ ಭಾಷೆ ಎಂಬ ಮನೋಸ್ಥಿತಿ ಹೊಂದಿರುತ್ತಾರೆ, ಅವರಿಗೆ ಇತರೆ ಭಾಷೆಗಳಂತೆ ಆಂಗ್ಲ ಭಾಷೆಯು ಸರಳ ಮತ್ತು ಸುಲಲಿತ ಭಾಷೆ ಎಂಬುದನ್ನು ಮನವರಿಕೆಯಾಗುವಂತೆ ಮಾಡಿದಲ್ಲಿ ಅವರು ಕಲಿಕೆಯಲ್ಲಿ ಹೆಚ್ಚು ಆಸಕ್ತಿಯಿಂದ ಭಾಗಿಯಾಗುವುದರ ಜತೆಗೆ ಅತ್ಯಂತ ಹೆಚ್ಚು ಅಂಕ ಪಡೆಯುವಲ್ಲಿ ಯಶಸ್ವಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾಷಾ ಶಿಕ್ಷಕರು ಮುಂದಾಗಬೇಕಿದೆ ಎಂದು ಎಸ್ ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು.

ಅವರು ಸ್ಥಳಿಯ ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ರೋಣ ಹಾಗೂ ಎಸ್ಎವಿ ಬಾಲಕರ ಪ್ರೌಢಶಾಲೆ ನರೇಗಲ್ಲ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಆಂಗ್ಲಭಾಷಾ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಆಂಗ್ಲಭಾಷೆಗೆ ಹೆಚ್ಚಾಗಿ ಭಯ ಭೀತರಾಗುತ್ತಿದ್ದು ಅದನ್ನು ಅವರ ಮನದಾಳದಿಂದ ದೂರಮಾಡಿ ನಿರ್ಭಿತಿಯಿಂದ ಪರೀಕ್ಷೆ ಎದುರಿಸುವಂತಾದರೆ ಈ ಕಾರ್ಯಾಗಾರಕ್ಕೂ ಸಾರ್ಥಕತೆ ಲಭಿಸುತ್ತದೆ ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ, ಕೆವಿಬಿಎಂ ವಸತಿ ನಿಲಯದ ಮುಖ್ಯಸ್ಥ ಮಲ್ಲಿಕಾರ್ಜುನಪ್ಪ ಮೆಣಸಗಿ, ಸಂಪನ್ಮೂಲ ತರಬೇತಿದಾರ, ನರೇಗಲ್ಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಿ.ಎಚ್. ಬಡಿಗೇರ, ಗಜೇಂದ್ರಗಡ ಸರ್ಕಾರಿ ಬಾಲಕರ ಪ್ರೌಢಶಾಲೆಯ ಶಿಕ್ಷಕ ಸೋಮಸೇಖರ ಪಿ, ಗಜೇಂದ್ರಗಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಎನ್. ಕಾದಗಾಡ, ಮುಖ್ಯೋಪಾಧ್ಯಯ ಎಂ.ಬಿ. ಸಜ್ಜನರ, ಬಾಲಕಿಯರ ಶಾಲಾ ಮುಖ್ಯೋಪಾಧ್ಯಯ ಎಸ್.ಎನ್. ಹೂಲಗೇರಿ, ಶಿಕ್ಷಕರಾದ ಎಂ.ವಿ. ಬಿಂಗಿ, ಬಿ.ಡಿ. ಯರಗೊಪ್ಪ, ವಿ.ಎಲ್. ಮಾನೆ ಸೇರಿದಂತೆ ಗಜೇಂದ್ರಗಡ ಮತ್ತು ರೋಣ ತಾಲೂಕಿನ ಶಿಕ್ಷಕರು ಭಾಗಿಯಾಗಿದ್ದರು.