ಧೂಳುಮುಕ್ತ ಪಟ್ಟಣ ನಿರ್ಮಾಣಕ್ಕೆ ಪಣ ತೊಡುವೆ ಎಂದ ಮನಗೂಳಿ

| Published : Nov 30 2024, 12:47 AM IST

ಧೂಳುಮುಕ್ತ ಪಟ್ಟಣ ನಿರ್ಮಾಣಕ್ಕೆ ಪಣ ತೊಡುವೆ ಎಂದ ಮನಗೂಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಸಿಂದಗಿ ಪಟ್ಟಣದ ಅಗಸಿ ಬಳಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಪೂಜೆ ಮಾಡಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಪಟ್ಟಣವನ್ನು ಅತ್ಯಂತ ಸೌಂದರ್ಯೀಕರಣಗೊಳಿಸಲು ಮತ್ತು ಧೂಳುಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದ್ದು, ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಸಿಂದಗಿ ಪಟ್ಟಣದ ಅಗಸಿ ಬಳಿ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಿಂದಗಿ ಜನತೆಯ ಬಹುದಿನದ ಬೇಡಿಕೆಯಾಗಿರುವ ಈ ಮಹಾದ್ವಾರ ಬಾಗಿಲು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಾಣಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, 24*7 ನೀರಿನ ಯೋಜನೆ, ರಸ್ತೆಯ ವಿದ್ಯುತ್ ಕಂಬಗಳ ನಿರ್ಮಾಣ ಸೇರಿ ಹಲವು ಮೂಲಭೂತ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ತಿಳಿಸಿದರು.

ಈ ಸಂದರ್ಭದಲ್ಲಿ ಉಜ್ಜಯಿನಿ ಪೀಠದ ಜಗದ್ಗುರು ಡಾ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಣ್ಣೂರು ಹೊರಗಿನ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಸಿಂದಗಿ ಊರಿನ ಹಿರೇಮಠದ ಶಿವಾನಂದ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಆದಿಶೇಷ ಸಂಸ್ಥಾನ ಹಿರೇಮಠದ ರಾಜಯೋಗಿ ನಾಗರತ್ನ ವಿರಾಜೇಂದ್ರ ಮಹಾಸ್ವಾಮಿಗಳು, ಪುರಸಭೆ ಅಧ್ಯಕ್ಷ ಶಾಂತಿರ್ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಅಶೋಕ ವಾರದ, ಸೋಮನಗೌಡ ಬಿರಾದಾರ, ಶ್ರೀಕಾಂತ್ ಬ್ಯಾಕೋಡ, ಬಸವರಾಜ ಯರನಾಳ, ಸಾಯಬಣ್ಣ ಪುರದಾಳ , ಸೈಪನ್ ನಾಟಿಕರ್, ಶರಣು ಶ್ರೀಗಿರಿ, ಕಾಂತಪ್ಪ ಅಂಬಲಗಿ, ರವಿ ನಾಗೂರ, ಸುನಿಲ್ ಹಳ್ಳೂರ್, ಮಲ್ಲಿಕಾರ್ಜುನ್ ಬೊಮ್ಮಣ್ಣಿ, ಚನ್ನು ಪಟ್ಟಣಶೆಟ್ಟಿ, ಬಾಬು ಕಮತಗಿ, ಸಂಗನಬಸು ಬಿರಾದಾರ ಅನೇಕರು ಇದ್ದರು.