ಪ್ರಥಮ ಪಿಯುಸಿ ಪ್ರವೇಶಕ್ಕೆ ಗ್ರಾಮೀಣ ಮಕ್ಕಳಿಗೆ ಮನವರಿಕೆ

| Published : May 20 2024, 01:32 AM IST / Updated: May 20 2024, 01:33 AM IST

ಪ್ರಥಮ ಪಿಯುಸಿ ಪ್ರವೇಶಕ್ಕೆ ಗ್ರಾಮೀಣ ಮಕ್ಕಳಿಗೆ ಮನವರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಫಜಲ್ಪುರ ತಾಲೂಕಿನ ಹಾವಳಗಾ ಗ್ರಾಮದಲ್ಲಿರುವ ರೇಣುಕಾ ಶುಗರ್ಸ್‌ ಫೌಂಡೇಶನ ವತಿಯಿಂದ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಗೆ ಪ್ರವೇಶಗಳು ಪ್ರಾರಂಭ

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಹಾವಳಗಾ ಗ್ರಾಮದಲ್ಲಿರುವ ರೇಣುಕಾ ಶುಗರ್ಸ್‌ ಫೌಂಡೇಶನ ವತಿಯಿಂದ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಗೆ ಪ್ರವೇಶಗಳು ಪ್ರಾರಂಭವಾಗಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಸಂಸ್ಥೆಯವರು ಗ್ರಾಮೀಣ ಭಾಗಗಳಲ್ಲಿ ಸುತ್ತಾಡಿ ಪ್ರವೇಶದ ಕುರಿತು ಮತ್ತು ತಮ್ಮ ಶಿಕ್ಷಣ ಸಂಸ್ಥೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಅಫಜಲ್ಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿನ ಕೃಷಿ ಕಾರ್ಮಿಕರು, ಗ್ರಾಮಸ್ಥರಿಗೆ ರೇಣುಕಾ ಫೌಂಡೇಶನ್‌ನ ಸಿಬ್ಬಂದಿಗಳು ಭೇಟಿಯಾಗಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಪಿಯು ಕಾಲೇಜಿನ ವೈಶಿಷ್ಟ್ಯದ ಕುರಿತು ಮಾಹಿತಿ ನೀಡಿದರಲ್ಲದೆ ವಿಜ್ಞಾನ ವಿಭಾಗದಲ್ಲಿ ನುರಿತ ಶಿಕ್ಷಕರು ಮತ್ತು ಎಲ್ಲಾ ರೀತಿಯ ಲ್ಯಾಬ್‌ಗಳು ನಮ್ಮ ಸಂಸ್ಥೆಯಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆಗೆ ಸಹಾಯವಾಗಲಿದೆ ಹೀಗಾಗಿ 150 ಸಿಮೀತ ಸೀಟುಗಳಿದ್ದು ಬೇಗ ಪ್ರವೇಶ ಮಾಡಿಸಿ ಎಂದು ವಿಜ್ಞಾನ ಶಿಕ್ಷಕ ರಾಜೇಂದ್ರ ಮುಸ್ತಾಪುರೆ ಪಾಲಕರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪ್ರಕಾಶ ದೊಡ್ಮನಿ, ಸಚಿನ ಹಿರೇಮಠ, ಸುನೀಲ ಚಿನಮಳ್ಳಿ, ಶಿವಕುಮಾಋ ಬಗಲೂರ, ಸಿದ್ರಾಮ ತಳವಾರ ಸೇರಿದಂತೆ ಅನೇಕರು ಇದ್ದರು.