ಸಾರಾಂಶ
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಬಳಿ ಸರ್ವೆಯರ್‌ಗಳು ಬಂದಾಗ ಸ್ಥಳೀಯರು ಸಂಯಮ, ಸಮಾಧಾನದಿಂದ ವರ್ತಿಸಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮನವಿ ಮಾಡಿದರು.
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಬಳಿ ಸರ್ವೆಯರ್‌ಗಳು ಬಂದಾಗ ಸ್ಥಳೀಯರು ಸಂಯಮ, ಸಮಾಧಾನದಿಂದ ವರ್ತಿಸಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಹೋರಾಟ ಮಾಡಿದ್ದೇವು. ಹಲವು ದಶಕಗಳ ಸಮಸ್ಯೆ ಈಗ ಒಂದು ಹಂತಕ್ಕೆ ಬಂದಿದೆ. ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ. 9 ಸಾವಿರ ಎಕರೆಗೆ ಸರ್ವೆ ಮಾಡಲು ಆದೇಶ ಬಂದಿದೆ. ಆತ್ಯಾಧುನಿಕ ಸರ್ವೆ ಉಪಕರಣಗಳನ್ನು ನೀಡಲಾಗಿದೆ. ಸರ್ವೆಗೆ ಅಧಿಕಾರಿಗಳು ಬಂದಾಗ ಜನರು ಸಮಾಧಾನದಿಂದ ಸಹಕರಿಸಬೇಕು ಎಂದರು.ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಎದುರಿನ ಮೈದಾನದ ಕುರಿತು ಕೇಳಿದ ಪ್ರಶ್ನೆಗೆ ಆ ಕುರಿತು ನಾನು ಏನೂ ಮಾತಾಡುವುದಿಲ್ಲ. ಈ ಕಾನೂನಿನ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರು ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.ಬೆಲೆ ಏರಿಕೆ ವಿರುದ್ಧ ಬಿಜೆಪಿ ಅಹೋರಾತ್ರಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್ ಬಿಜೆಪಿಯವರಿಗೇನು ಪುಕ್ಸಸಟ್ಟೆ ಸಿಗುತ್ತಾ. ಡಾಲರ್ ಬೆಲೆ ಎಷ್ಟಾಯಿತು. ಒಂದು ರು.ಗೆ ಬರುತ್ತದೆ ಎನ್ನುತ್ತಿದ್ದರು. ಈಗ ಗ್ಯಾಸ್, ಪೆಟ್ರೋಲ್ ಫ್ರೀಯಾಗಿ ಸಿಗುತ್ತಿದಿಯಾ. ಅದಕ್ಕೆ ಮೊದಲು ಉತ್ತರ ನೀಡಬೇಕು. ಸರಕಾರ ತನ್ನ ಇತಿಮಿತಿಯಲ್ಲಿ ಬೆಲೆ ಏರಿಕೆ ಮಾಡುತ್ತದೆ ಎಂದರು.ಕೊಡಗು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ದೇಶ ಹಾಗೂ ರಾಜ್ಯದಲ್ಲಿ ಕಾನೂನು ಇದೆ. ಆ ಕಾನೂನು ಗೆಲ್ಲಬೇಕು. ಪೊಲೀಸರು ಕಾನೂನಿನಂತೆ ಅವರ ಕೆಲಸ ಮಾಡುತ್ತಾರೆ. ಬಿಜೆಪಿ, ಕಾಂಗ್ರೆಸ್ ಹೇಳಿದಂತೆ ಕೆಲಸ ಮಾಡಲ್ಲ. ಕಾನೂನು ಪ್ರಕಾರ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.ಬೆಳಗಾವಿ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ತರುವ ಮಹಾರಾಷ್ಟ್ರ ಸಂಸದನ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವನಿಗೆ ತಲೆ ಕೆಟ್ಟಿರಬೇಕು. ತಲೆ ಕೆಟ್ಟವರು ಇಂತಹ ಹೇಳಿಕೆ ನೀಡುತ್ತಾರೆ ಎಂದರು.