ಎಲ್ಲ ಜಾತಿಗೆ ನ್ಯಾಯ ನೀಡುವ ಜಾತಿ ಸಮೀಕ್ಷೆಗೆ ಸಹಕರಿಸಿ: ಅಹಿಂದ ಮುಖಂಡ ಉಮಾಪತಿ

| Published : Sep 17 2025, 01:05 AM IST

ಎಲ್ಲ ಜಾತಿಗೆ ನ್ಯಾಯ ನೀಡುವ ಜಾತಿ ಸಮೀಕ್ಷೆಗೆ ಸಹಕರಿಸಿ: ಅಹಿಂದ ಮುಖಂಡ ಉಮಾಪತಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷವಾಗಿ ಹಿಂದುಳಿದ ವರ್ಗಗಳು, ಎಸ್ಸಿ.ಎಸ್ಟಿ ಸಮುದಾಯಗಳಿಗೆ ಸೇರಿದಂತೆ ಎಲ್ಲಾ ವರ್ಗಗಳ ಜನತೆ ಸಮೀಕ್ಷೆಗಾರರು ತಮ್ಮ ಮನೆಗಳಿಗೆ ಭೇಟಿ ನೀಡದ ಸಂದರ್ಭದಲ್ಲಿ ಅವರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ.ಉಮಾಪತಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲಾ ಜಾತಿ, ಜನಾಂಗದವರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಿಕೊಡುವ ನಿಟ್ಟಿನಲ್ಲಿ ಸೆ.22ರಿಂದ ಜಾತಿ ಸಮೀಕ್ಷೆ ಕಾರ್ಯ ನಡೆಸಲಿದ್ದು, ವಿಶೇಷವಾಗಿ ಹಿಂದುಳಿದ ವರ್ಗಗಳು, ಎಸ್ಸಿ.ಎಸ್ಟಿ ಸಮುದಾಯಗಳಿಗೆ ಸೇರಿದಂತೆ ಎಲ್ಲಾ ವರ್ಗಗಳ ಜನತೆ ಸಮೀಕ್ಷೆಗಾರರು ತಮ್ಮ ಮನೆಗಳಿಗೆ ಭೇಟಿ ನೀಡದ ಸಂದರ್ಭದಲ್ಲಿ ಅವರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ.ಉಮಾಪತಿ ಮನವಿ ಮಾಡಿದರು.

ಅಹಿಂದ ಮತ್ತು ವಿವಿಧ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಜಾತಿ ಸಮೀಕ್ಷೆ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರದ ಜಾತಿ ಸಮೀಕ್ಷೆಯ ಮೂಲ ಉದ್ದೇಶ ಎಲ್ಲಾ ಜನ ಸಮುದಾಯದಾವರಿಗೂ ಕೂಡ ಅಗತ್ಯಗನುಗುಣವಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು ಸರ್ಕಾರದವತಿಯಿಂದ ಒದಗಿಸಿಕೂಡವುದಾಗಿದೆ. ಈ ಸಮೀಕ್ಷೆ ಬಗ್ಗೆ ಅನೇಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಇದಕ್ಕೆ ಯಾರೂ ಕೂಡ ಗಮನಕೊಡದೇ ಈ ಸಮೀಕ್ಷಾ ಕಾರ್ಯದಲ್ಲಿ ಎಲ್ಲರೂ ಕೂಡ ತಮಗೆ ಸಂಬಂಧಿಸಿದ ಹೆಸರು, ಧರ್ಮ, ಜಾತಿ, ಉಪಜಾತಿ, ಉದ್ಯೋಗ ಹಾಗೂ ಇತರ ವಿಷಯಗಳ ಸ್ಥಿತಿಗತಿಗಳ ಬಗ್ಗೆ ಪಾರದರ್ಶಕ ಹಾಗೂ ನಿಖರ ಮಾಹಿತಿಗಳನ್ನು ಒದಗಿಸಿದರೆ ಮುಂದೆ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಎಲ್ಲರೂ ಕೂಡ ಯಾವುದೇ ಗೊಂದಲಗಳಿಗೆ ಒಳಗಾಗದೇ ಸಮೀಕ್ಷೆಗೆ ಮನೆ ಮನೆಗಳಿಗೆ ಬರುವವರಿಂದ ಮಾಹಿತಿ ಪಡೆದು ಅವುಗಳನ್ನು ಸಮೀಕ್ಷಾ ಫಾರಂಗಳನ್ನು ಭರ್ತಿ ಮಾಡಬೇಕು ಇದರಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರಕ್ಕೆ ಸಹಾಯವಾಗುತ್ತದೆ ಎಂದು ಹೇಳಿದ ಅವರು ತಮ್ಮ ಕುಟುಂಬದಎಲ್ಲಾ ಸದಸ್ಯರುಗಳ ಆಧಾರ ಕಾರ್ಡ, ಚುನಾವಣಾ ಆಯೋಗದ ಗುರುತಿನ ಚೀಟಿ,ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಎಲ್ಲರೂ ಕೂಡ ಸಮೀಕ್ಷಾದಾರರಿಗೆ ಒದಗಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಡಿಎಸ್ಎಸ್. ಮುಖಂಡ ದಿಡಗೂರು ತಮ್ಮಣ್ಣ, ಹಾಲುಮತ ಸಭಾದ ತಾಲೂಕು ಅಧ್ಯಕ್ಷ ರಾಜು ಕಣಗಣ್ಣಾರ, ಕ್ಯಾಸಿನಕೆರೆ ಶೇಖರಪ್ಪ, ಚಿಕ್ಕಗೋಣಿಗೆರೆ ಶಿವಮೂರ್ತಪ್ಪ, ಮಾರಿಕೊಪ್ಪದ ಮಂಜುನಾಥ್, ಸಾಸ್ವೇಹಳ್ಳಿ ಕೃಷ್ಣಮೂರ್ತಿ, ಮಹಾಂತೇಶ್, ಎಚ್.ಎಸ್. ರಂಜಿತ್, ಸುರೇಶ್ ಹಿರೇಗೋಣಿಗೆರೆ,ಟೈಲರ್ ನಟರಾಜ್,ಬಸವರಾಜಪ್ಪ ಕಮ್ಮಾರಗಟ್ಟೆ, ಚಿಕ್ಕಣ್ಣ, ಷಣ್ಮುಖಪ್ಪ, ಸೇರಿ ಹಲವಾರು ಜನ ಅಹಿಂದ ಮುಖಂಡರು ಹಾಜರಿದ್ದರು.