ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ನಿವೃತ್ತ ಸರಕಾರಿ ನೌಕರರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಎಸ್.ನಾರಾಯಣಗೌಡ ಹೇಳಿದರು.ಪಟ್ಟಣದ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಆವರಣದಲ್ಲಿ ನಡೆದ ನಿರ್ದೇಶಕರ ಸಭೆ ಮಾತನಾಡಿ, ನಿವೃತ್ತ ಸರಕಾರಿ ನೌಕರರ ಸಂಘವು ಪಟ್ಟಣದಲ್ಲಿ ಕಳೆದ 35 ವರ್ಷಗಳ ಹಿಂದೆ ಸ್ಥಾಪನೆಗೊಂಡು 350 ಮಂದಿ ಸದಸ್ಯರನ್ನು ಒಳಗೊಂಡಿದೆ. ಕಡಿಮೆ ಸದಸ್ಯತ್ವ ಹಣ ಪಾವತಿಸಿರುವ ನೌಕರರ ಸದಸ್ಯತ್ವವನ್ನು ಅಮಾನತ್ತಿನಲ್ಲಿಡಲಾಗಿದೆ. ಹಾಗಾಗಿ ಕಡಿಮೆ ಸದಸ್ಯತ್ವ ಹಣ ಪಾವತಿಸಿರುವ ಸದಸ್ಯರು ಕೂಡಲೇ 500 ರೂ.ಪಾವತಿಸಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಗೌರವ ಕಾರ್‍ಯದರ್ಶಿ ನೀ.ಗಿರೀಗೌಡ, ಉಪಾಧ್ಯಕ್ಷರಾದ ಚಂದ್ರಶೇಖರಯ್ಯ, ಕೆ.ಕೆಂಪು, ಕಾರ್‍ಯದರ್ಶಿ ಎಂ.ಬೋರೇಗೌಡ, ಖಜಾಂಚಿ ಕೆ.ಜವರೇಗೌಡ, ಮುಖ್ಯ ಸಲಹೆಗಾರ ನಾರಾಯಣಗೌಡ, ಲೆಕ್ಕಪರಿಶೋಧಕ ಎಸ್.ಅಪ್ಪಾಜಿಗೌಡ, ಮಹಿಳಾ ಕಾರ್‍ಯದರ್ಶಿ ಶಿವಮ್ಮ, ಮುಖ್ಯಸಂಘಟನಾ ಕಾರ್‍ಯದರ್ಶಿ ವಿ.ವೆಂಕಟರಾಮೇಗೌಡ, ಜಿ.ಪ್ರಸನ್ನಕುಮಾರ್ ಸೇರಿದಂತೆ ಎಲ್ಲಾ ನಿರ್ದೇಶಕರು ಹಾಜರಿದ್ದರು.ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ವಶ
ಮಳವಳ್ಳಿ:ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮತ್ತು ಮನೆಗಳ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಶುಕ್ರವಾರ ಸಂಜೆ ಅಬಕಾರಿ ಪೊಲೀಸರು ದಾಳಿ ಮಾಡಿ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಶೆಟ್ಟಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ತಾಲೂಕು ಕಚೇರಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರು ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್ ಕೆ.ರಾಮು ಅವರನ್ನು ಕರೆದುಕೊಂಡು ಹೋಗಿ ಶೆಟ್ಟಹಳ್ಳಿಯ ಮೂರು ಕಡೆ ದಾಳಿ ಮಾಡಿದರು.ಗ್ರಾಮದ ಚಂದು ಅವರ ಅಂಗಡಿ ಮೇಲೆ ದಾಳಿ ಮಾಡಿ ಸುಮಾರು 6 ಲೀಟರ್ ನಷ್ಟು ಮದ್ಯ, ಮಹದೇವಸ್ವಾಮಿ ಮತ್ತು ಜಯಮ್ಮ ಎಂಬುವವರ ಅಂಗಡಿ, ಮನೆಯಲ್ಲಿ ಕೆಲ ಮದ್ಯದ ಪ್ಯಾಕೆಟ್ ಗಳನ್ನು ಅಬಕಾರಿ ಇಲಾಖೆ ಸಬ್ ಇನ್ಸ್ ಪೆಕ್ಟರ್ ಕೆ.ರಾಮು, ಸಿಬ್ಬಂದಿ ಮುತ್ತುರಾಜ್, ನವೀನ್, ಪ್ರೇಮ್ ಕುಮಾರ್ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಹಸೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿ, ಅಕ್ರಮ ಮದ್ಯ ಮಾರಾಟ ಮಾಡುವುದರಿಂದ ಗ್ರಾಮಗಳಲ್ಲಿ ಅಶಾಂತಿ ಉಂಟಾಗುತ್ತದೆ. ಅಲ್ಲದೇ, ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂಥ ಘಟನೆಗಳು ಮತ್ತೆ ನಡೆಯದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.