ಅಪರಾಧ ತಡೆಗೆ ಪೊಲೀಸರ ಜೊತೆ ಸಹಕರಿಸಿ

| Published : Dec 21 2023, 01:15 AM IST / Updated: Dec 21 2023, 01:16 AM IST

ಅಪರಾಧ ತಡೆಗೆ ಪೊಲೀಸರ ಜೊತೆ ಸಹಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅಪರಾಧ ತಡೆಗೆ ಪೊಲೀಸರ ಜೊತೆ ಸಹಕರಿಸಿ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಅಪರಾಧಗಳ ತಡೆಗೆ ಪೊಲೀಸ್‌ರೊಂದಿಗೆ ಜನರು ಸಹಕರಿಸಬೇಕೆಂದು ತಾಳಿಕೋಟೆ ಪೊಲೀಸ್ ಠಾಣಾ ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ಅವರು ಹೇಳಿದರು.

ಪಟ್ಟಣದ ಶ್ರೀ ಖಾಸ್ಗತೇಶ್ವರ ಪದವಿ ಪೂರ್ವ ಕಾಲೇಜ್ ಹಾಗೂ ಶ್ರೀ ಎಚ್.ಎಸ್.ಪಾಟೀಲ ಪಧವಿ ಪೂರ್ವ ಕಾಲೇಜ್‌ನಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿಜಯಪುರ ಜಿಲ್ಲಾ ಪೊಲೀಸ್, ಬಸವನಬಾಗೇವಾಡಿ ಉಪ ವಿಭಾಗ, ತಾಳಿಕೋಟೆ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಲಾದ ಮಾದಕ ದ್ರವ್ಯಗಳ ಮಾರಾಟ ಹಾಗೂ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದ ಅವರು, ಜನರು ಕಳ್ಳತನದ ಬಗ್ಗೆ ಜಾಗೃತರಾಗಬೇಕಿದೆ. ಮನೆಯಲ್ಲಿ ಯಾರು ಇಲ್ಲದೇ ಹೊರಗಡೆ ಬೀಗ ಕಾಣುವ ಹಾಗೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ, ಮನೆಯ ಮುಂದೆ ದಿನಪತ್ರಿಕೆ ಹಾಲಿನ ಪಾಕೇಟ್ ಮುಂತಾದವುಗಳು ಎರಡ್ಮೂರು ದಿನಗಳವರೆಗೆ ಬಿದ್ದಾಗ, ಮನೆಯಲ್ಲಿ ಎರಡ್ಮೂರುದಿನ ಲೈಟ್ ಹಚ್ಚದೇ ಇದ್ದಾಗ, ಸಂಜೆ ವೇಳೆ ಮನೆಯ ಮುಂದೆ ಲೈಟ್ ಹಚ್ಚದೇ ಇದ್ದಾಗ ಕಳ್ಳರು ಹೊಂಚು ಹಾಕುವುದು ಸಹಜವಾಗಿದೆ. ಇಂತಹ ಕಳ್ಳತನಗಳನ್ನು ತಡೆಗಟ್ಟಲು ಮನೆಗಳಿಗೆ ಭದ್ರವಾದ ಡೋರ್‌ ಲಾಕ್ ವ್ಯವಸ್ಥೆ ಹಾಕಿಸುವುದು, ಬೆಲೆ ಬಾಳುವ ಒಡವೆ ನಗದು ನಾಣ್ಯಗಳನ್ನು ನಿಮ್ಮ ಕೆಲಸದಾಳು ಮತ್ತು ಅಪರಿಚಿತರ ಮುಂದೆ ತೋರಿಸುವುದು, ಮನೆಯ ಹೊರಗಡೆ ಹೋಗುವಾಗ ಹೊರಗಡೆಯಿಂದ ಕಾಣುವ ಹಾಗೆ ಕೀಲಿ ಹಾಕುವ ಬದಲು ಯಾರಿಗೂ ಕಾಣದ ಹಾಗೆ ಡೋರ್‌ಲಾಕ್ ಸೆಂಟರ್ ಲಾಕ್ ಉಪಯೋಗಿಸಬೇಕು. ಮನೆಯಿಂದ ಎರಡ್ಮೂರು ದಿನ ಹೊರಗೆ ಹೋಗುವ ಸಂದರ್ಭ ಬಂದಾಗ ಅಕ್ಕಪಕ್ಕದ ಮನೆಯವರಿಗೆ ಹೇಳಿ ಹೋಗಿ, ಪೊಲೀಸ್ ಠಾಣೆಗೂ ಈ ಬಗ್ಗೆ ಮಾಹಿತಿ ನೀಡಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಕೊಟ್ಟು ದಿನ ಪತ್ರಿಕೆ ಮತ್ತು ಹಾಲು ಸರಬರಾಜು ಮಾಡುವವರಿಗೆ ಮಾಹಿತಿ ಕೊಟ್ಟು ದಿನ ಪತ್ರಿಕೆ ಮತ್ತು ಹಾಲು ಸರಬರಾಜು ಮಾಡುವುದನ್ನು ನಿವು ಬರುವವರೆಗೆ ಸ್ಥಗಿತಗೊಳಿಸಲು ತಿಳಿಸಬೇಕು. ಯಾರ ಮೇಲಾದರೂ ಸಂಶಯಾಸ್ಪದ ಕಂಡುಬಂದಲ್ಲಿ ಪೊಲೀಸ್‌ರಿಗೆ ತಿಳಿಸಬೇಕು. ಇದರಿಂದ ಕಳ್ಳತನ ಮಾಡಿದವರ ಹೆಡೆಮುರಿ ಕಟ್ಟಲು ಪೊಲೀಸ್‌ರಿಗೆ ಅನುಕೂಲವಾಗಲಿದೆ ಎಂದ ಅವರು ನಿಮ್ಮ ವಾಹನಗಳಲ್ಲಿ ಎಲ್ಲೆಂದರಲ್ಲಿ ಎರಡ್ಮೂರು ದಿನಗಳವರೆಗೆ ನಿಲ್ಲಿಸಿ ಹೋಗಬಾರದು. ಮನೆಯ ಮುಂದೆ ವಾಹನಗಳು ನಿಲ್ಲಿಸಿದಾಗ ಹ್ಯಾಂಡ್‌ಲಾಕ್ ಮತ್ತು ಇನ್ನಿತರವಾದ ಬೀಗದಿಂದ ಭದ್ರಗೊಳಿಸಬೇಕು. ಕಾರು ಮತ್ತು ಇನ್ನಿತರ ವಾಹನಗಳು ನಿಲ್ಲಿಸುವಾಗ ಗ್ಲಾಸ್ ಮತ್ತು ಬಾಗಿಲುಗಳನ್ನು ಎರಡು ಭಾರಿ ಸರಿಯಾಗಿ ಲಾಕ್ ಮಾಡಲಾಗಿದೆಯೋ ಇಲ್ಲವೋ ಎಂಬುವುದನ್ನು ಪರಿಶೀಲಿಸಿಕೊಳ್ಳಬೇಕು. ಇದರಿಂದ ಕಳ್ಳತನದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಈಚೆಗೆ ಸೈಬರ್ ಅಪರಾಧಗಳು ಸಾಕಷ್ಟು ಬಯಲಿಗೆ ಬರುತ್ತಿವೆ. ಅಪರಿತರು ಬ್ಯಾಂಕಿನ ಹೆಸರಿನ ಮೇಲೆ ನಿಮ್ಮ ಆಧಾರ ಕಾರ್ಡ್‌, ಒಟಿಪಿ ಇನ್ನಿತರ ದಾಖಲೆಗಳನ್ನು ಕೇಳಿದಾಗ ವೈಯಕ್ತಿಕ ಮಾಹಿತಿಗಳನ್ನು ನೀಡಲು ಹೋಗಬಾರದು. ಗೂಗಲ್‌ನಲ್ಲಿ ಕಂಡುಬರುವ ಕಸ್ಟಮರ್ ಕೇರ್ ಸಂಪರ್ಕ ಸಂಖ್ಯೆ ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆಯ ಬಗ್ಗೆ ತಿಳಿದುಕೊಳ್ಳಬೇಕು. ಆನ್‌ಲೈನ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಅನೇಕ ಆಪ್‌ಗಳು ಬಂದಿದ್ದು, ಅವುಗಳನ್ನು ಡೌನ್‌ಲೋಡ್ ಮತ್ತು ಬಳಸಬಾರದು ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಸ್.ಕೆ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಕಿಶೋರಕುಮಾರ ನಾಯಕ, ಎಚ್.ಎಸ್.ಪಾಟೀಲ ಪ.ಪೂ.ಕಾಲೇಜ್‌ನ ಪ್ರಾಚಾರ್ಯ ಎಂ.ಎಸ್.ಬಿರಾದಾರ, ದೈಹಿಕ ಉಪನ್ಯಾಸಕ ಎಸ್.ಬಿ.ಮಂಗ್ಯಾಳ, ವಿಶ್ವನಾಥ ಪಾಟೀಲ, ಮ್ಯಾಗೇರಿ, ಪೊಲೀಸ್ ಸಿಬ್ಬಂದಿಗಳಾದ ಎಂ.ಎಲ್.ಪಟ್ಟೇದ, ಸಂಗಮೇಶ ಚಲವಾದಿ, ಎಂ.ಕೆ.ಡೋಣೂರ, ಮೊದಲಾದವರು ಉಪಸ್ಥಿತರಿದ್ದರು.

--