ಆಡುಕಟ್ಟೆ ಶಾಲೆ ಅಭಿವೃದ್ಧಿಗೆ ಸಹಕಾರ: ಶಾಸಕ ದಿನಕರ ಶೆಟ್ಟಿ

| Published : Feb 01 2024, 02:01 AM IST

ಸಾರಾಂಶ

ಈ ಹಿಂದೆ ತಾಲೂಕಿನ ಶಾಲೆಗೆ ಸಾಕಷ್ಟು ವಿವೇಕ ಕೊಠಡಿ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಿದ್ದೇನೆ. ಅದರಂತೆ ಈ ಭಾಗಕ್ಕೂ ಆದ್ಯತೆ ನೀಡಿದ್ದು, ಈ ಶಾಲೆಯ ಅಭಿವೃದ್ಧಿಗೆ ಜತೆಯಾಗುತ್ತೇನೆ.

ಗೋಕರ್ಣ:

ಆಡುಕಟ್ಟೆ ಸರ್ಕಾರಿ ಶಾಲೆಯನ್ನು ತಾಲೂಕಿನ ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲು ಸಹಕರಿಸುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಅವರು ಇಲ್ಲಿನ ಆಡುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಹಿಂದೆ ತಾಲೂಕಿನ ಶಾಲೆಗೆ ಸಾಕಷ್ಟು ವಿವೇಕ ಕೊಠಡಿ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಿದ್ದೇನೆ. ಅದರಂತೆ ಈ ಭಾಗಕ್ಕೂ ಆದ್ಯತೆ ನೀಡಿದ್ದು, ಈ ಶಾಲೆಯ ಅಭಿವೃದ್ಧಿಗೆ ಜತೆಯಾಗುತ್ತೇನೆ ಎಂದರು. ಶಾಲೆಗೆ ಹೆಚ್ಚಿನ ಕೊಠಡಿ ನಿರ್ಮಿಸಲು ಸ್ಥಳಾವಕಾಶ ಮತ್ತು ಕಟ್ಟಡ ದುರಸ್ತಿ ಮತ್ತಿರರ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ತುರ್ತಾಗಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.ಶಾಲೆಯ ಪ್ರಗತಿಗೆ ಕಾರಣರಾದ ಅಂದಿನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರ ಮಾರ್ಕಾಂಡೆ ಮಾತನಾಡಿ, ಸುಸಜ್ಜಿತ ಕಟ್ಟಡ ಮತ್ತಿತರ ಸೌಲಭ್ಯ ಒದಗಿಸುವಲ್ಲಿ ಅಂದಿನ ಪ್ರಯತ್ನ ಮತ್ತು ಶಾಸಕರ ಸಹಕಾರ ವಿವರಿಸಿದರು.ಬೆಳಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಉದ್ಘಾಟಿಸಿದ್ದರು. ಶಾಲೆಗೆ ದಾನಿಗಳು ಮತ್ತು ಪಾಲಕರು ದೇಣಿಗೆ ನೀಡಿದ ಸ್ಮಾರ್ಟ್‌ ಟಿವಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಗಾಂವಕರ್‌ ಲೋಕಾರ್ಪಣೆಗೊಳಿಸಿದರು. ಮಕ್ಕಳು ಹೊರ ತಂದ ಹಸ್ತಪ್ರತಿಯನ್ನು ಬಿಆರ್‌ಸಿ ವಿಜಯಲಕ್ಷ್ಮೀ ಹೆಗಡೆ ಬಿಡುಗಡೆಗೊಳಿಸಿದರು.ಈ ವೇಳೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಡಾ. ಸೌಮ್ಯಶ್ರೀ ಶರ್ಮಾ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ರವೀಂದ್ರ ಭಟ್ ಸೂರಿ, ಗ್ರಾಪಂ ಸದಸ್ಯ ಮಂಜುನಾಥ ಜನ್ನು, ಸದಸ್ಯರಾದ ರಮೇಶ ಪ್ರಸಾದ, ಭಾರತಿ ದೇವತೆ, ನಾಗರತ್ನಾ ಹಾವಗೋಡಿ, ಸ್ಮಿತಾ ಅಡಿ, ವನಿತಾ ಗೌಡ, ಮಹೇಶ ಶೆಟ್ಟಿ, ಶಿಕ್ಷಣ ಸಂಯೋಜಕಿ ದೀಪಾ ಕಾಮತ್, ಐಆರ್‌ಟಿ ಕೇಶವ ನಾಯ್ಕ, ಸಿಆರ್‌ಪಿ ಮೋಹಿನಿ ಗೌಡ, ಅನಿಲ್ ಶೇಟ್, ಉದ್ಯಮಿ ಗಣೇಶ ಪಂಡಿತ್‌, ಎಸ್‌ಡಿಎಂಸಿ ಸದಸ್ಯರು ಪಾಲಕರು, ಮುಖ್ಯಾಧ್ಯಾಪಕರಾದ ಪಿ.ಎಂ. ಮುಕ್ರಿ, ಶಿಕ್ಷಕಿಯರಾದ ಪರಿಣೀತಾ ನಾಯಕ, ಕಲ್ಪನಾ ಶೆಟ್ಟಿ ಇದ್ದರು. ಈ ವೇಳೆ ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಪೂರ್ಣಿಮಾ ಆರ್. ಗಂಗೆಮನೆ ವರದಿ ವಾಚಿಸಿದರು. ಶಿಕ್ಷಕಿಯರಾದ ಶೋಭಾ ನಾಯ್ಕ ವಂದಿಸಿದರು. ರೋಹಿಣಿ ಭಟ್, ವಿನಯಾ ಬಿ.ಸಿ. ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ಮೂರು ತಾಸಿಗೂ ಅಧಿಕ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನ ಮನರಂಜಿಸಿತು.