ಮಠಗಳ ಅಭಿವೃದ್ಧಿಗೆ ಸಹಕಾರ ಅತ್ಯವಶ್ಯಕ

| Published : Apr 01 2025, 12:51 AM IST

ಸಾರಾಂಶ

ಸಾರ್ವಜನಿಕ ಬದುಕಿನಲ್ಲಿ ಮಠ ಮಾನ್ಯಗಳು ಪ್ರತಿಯೊಬ್ಬರಿಗೂ ಉತ್ತಮ ಮಾರ್ಗದರ್ಶನದೊಂದಿಗೆ ಧರ್ಮ ಪರಂಪರೆ ಉಳಿಸಿಕೊಂಡು ಬರುತ್ತಿದ್ದು, ಅಂತಹ ಮಠ ಮಾನ್ಯಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಅತ್ಯವಶ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಸಾರ್ವಜನಿಕ ಬದುಕಿನಲ್ಲಿ ಮಠ ಮಾನ್ಯಗಳು ಪ್ರತಿಯೊಬ್ಬರಿಗೂ ಉತ್ತಮ ಮಾರ್ಗದರ್ಶನದೊಂದಿಗೆ ಧರ್ಮ ಪರಂಪರೆ ಉಳಿಸಿಕೊಂಡು ಬರುತ್ತಿದ್ದು, ಅಂತಹ ಮಠ ಮಾನ್ಯಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಅತ್ಯವಶ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಬಂಡಿ ಓಣಿಯ ಬೆಟಸೂರಮಠಕ್ಕೆ ನಿರ್ಮಿಸಿರುವ ಮುಖ್ಯದ್ವಾರ ಮತ್ತು ನೂತನ ಸಭಾಭವನ ಉದ್ಘಾಟಿಸಿ ಅವರು ಮಾತನಾಡಿದರು. ಮಠಗಳಲ್ಲಿ ಸಿಗುವ ಸಂಸ್ಕಾರ ನಮ್ಮ ಬದುಕಿನಲ್ಲಿ ಸನ್ಮಾರ್ಗದ ಹಾದಿಯನ್ನು ತೋರುತ್ತಿದ್ದು, ಮಠಗಳು ಶೈಕ್ಷಣಿಕ ಮತ್ತು ಸಂಸ್ಕೃತಿಯ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ ಎಂದರು. ಜನರ ಸೇವೆಗಾಗಿ ನನಗೆ ಸಿಕ್ಕಿರುವ ರಾಜ್ಯಸಭಾ ಸದಸ್ಯತ್ವ ಸ್ಥಾನವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜೊತೆಗೆ ಸರ್ಕಾರದ ಅನುದಾನವನ್ನು ಸಮಾಜದಲ್ಲಿರುವ ಪ್ರತಿಯೊಂದು ಧರ್ಮದ ಜನರ ಸೇವೆಗೆ ಸಮರ್ಪಿಸುತ್ತಿದ್ದೇನೆ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷಿ ಮಾಮನಿ ಮಾತನಾಡಿ, ಬೆಟಸೂರಮಠದ ಅಭಿವೃದ್ಧಿಗೆ ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ ಲಿಂ.ಆನಂದ ಮಾಮನಿಯವರು ನೀಡಿದ ಅನುದಾನದ ಜೊತೆಗೆ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿಯವರು ಸಹಿತ ₹೧೦ ಲಕ್ಷ ಅನುದಾನವನ್ನು ನೀಡಿ ಶ್ರೀ ಮಠದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಮಠದ ಜಾಗೆಯಲ್ಲಿ ಉತ್ತಮ ಶಾಲೆಯನ್ನು ತೆರೆದು ಶೈಕ್ಷಣಿಕ ಅಭಿವೃದ್ದಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದರು.ರತ್ನಾ ಆನಂದ ಮಾಮನಿ ಹಾಗೂ ಹಿರಿಯ ನ್ಯಾಯವಾದಿ ಬಿ.ವಿ.ಮಲಗೌಡರ ಮಾತನಾಡಿದರು. ಮೂಲಿಮಠ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಈ ವೇಳೆ ಪಿ.ಎಲ್.ಡಿ ಬ್ಯಾಂಕ್‌ ಅಧ್ಯಕ್ಷ ಜಗದೀಶ ಶಿಂತ್ರಿ, ರತ್ನಾ ಆನಂದ ಮಾಮನಿ, ಜಗದೀಶ ಕೌಜಗೇರಿ, ಡಾ.ಎನ್.ಸಿ.ಬೆಂಡಿಗೇರಿ, ಬಸವರಾಜ ಕಾರದಗಿ, ಡಾ.ನಯನಾ ಬಸ್ಮೆ, ಅಶೋಕ ಉದಪುಡಿ, ಈರಪ್ಪ ಬಟಕುರ್ಕಿ, ಮಹೇಶ ತಿಗಡಿ, ಬಾಬು ಕಡಕೋಳ, ವಿರುಪಾಕ್ಷ ಹೆರಕಲ್, ಗೂಳಪ್ಪ ಕೊಣ್ಣೂರ ಹಾಗೂ ಬಂಡಿ ಓಣಿಯ ಬೆಟಸೂರಮಠ ಅಭಿವೃದ್ದಿ ಸೇವಾ ಟ್ರಸ್ಟ್‌ನ ಹಿರಿಯರು ಉಪಸ್ಥಿತರಿದ್ದರು. ಮಹಾದೇವ ಮುರಗೋಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.