ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ಅಗತ್ಯ

| Published : Nov 23 2024, 12:33 AM IST

ಸಾರಾಂಶ

ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದರೆ ಶೋಷಿತ ಸಮುದಾಯ ಹಾಗೂ ಬಡವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯ ಎಂದು ಹರಿಹರ ತಾಲೂಕು ಸರ್ಕಾರಿ ಉರ್ದು ಭಾಷಾ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಮುಶ್ತಾಖ್ ಅಹ್ಮದ್ ಹರಿಹರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದರೆ ಶೋಷಿತ ಸಮುದಾಯ ಹಾಗೂ ಬಡವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯ ಎಂದು ಹರಿಹರ ತಾಲೂಕು ಸರ್ಕಾರಿ ಉರ್ದು ಭಾಷಾ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಮುಶ್ತಾಖ್ ಅಹ್ಮದ್ ಹೇಳಿದರು.

ನಗರದ ಗಾಂಧಿ ಮೈದಾನದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್‌ನಿಂದ ನೀಡಲಾದ ಕಂಪ್ಯೂಟರ್‌ಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದರು.

ಶಿಕ್ಷಕರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗೋಣೇರ ರಾಮಪ್ಪ ಮಾತನಾಡಿ, ಕೃತಗ್ಯತಾ ಟ್ರಸ್ಟ್‌ನವರು ೫ ವರ್ಷಗಳಿಂದ ತಾಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿ, ಬ್ಯಾಗ್, ವಿಜ್ಞಾನ ಉಪಕರಣಗಳು, ಬಾಲಕಿಯರ ಶೌಚಾಲಯ ನಿರ್ಮಾಣ, ತಂತ್ರಜ್ಞಾನ ಕಲಿಕೆಗೆ ಕಂಪ್ಯೂಟರ್‌ಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ ಕುಮಾರ ಹೆಗಡೆ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಹರಿಹರ ಘಟಕದ ಖಜಾಂಚಿ ಎಂ.ಗಿರೀಶ್, ನಿರ್ದೇಶಕರಾದ ಅಷ್ಫಾಖ್ ಅಹ್ಮದ್, ಪೀರು ನಾಯಕ್, ಜ್ಯೋತಿ ಲಕ್ಷ್ಮಿ, ಫಾತಿಮಾ ಶೇಕ್, ಹರಿಹರ ತಾಲೂಕು ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸೈಯಿದಾ ಅಪ್ಸರ್ ಉನ್ನಿಸಾ, ಶಾಲೆಯ ಮುಖ್ಯ ಶಿಕ್ಷಕಿ ಶಾಹೀನ, ಶಿಕ್ಷಕರಾದ ಮಂಜಪ್ಪ ಬಿದರಿ, ಚನ್ನಬಸಪ್ಪ, ಬಿ.ಎಂ.ಈರಪ್ಪ, ಮಾಲತೇಶ್ ಗೌಳಿ ಇದ್ದರು.

ದೇವರಬೆಳೆಕೆರೆ, ಮಲೆಬೆನ್ನೂರಿನ ಅಜಾದ್ ನಗರ, ಹನಗವಾಡಿ, ಸಾರಥಿ, ಧೂಳೆಹೊಳೆ ಗ್ರಾಮದ ಸರ್ಕಾರಿ ಶಾಲೆಗಳಿಗೂ ಕಂಪ್ಯೂಟರ್ ವಿತರಿಸಲಾಯಿತು.- - - -೨೨ಎಚ್‌ಆರಆರ್೦೧: