ಸಾರಾಂಶ
ಹತ್ತಾರು ದಶಕಗಳಿಂದ ಶ್ರೀಮಠದಲ್ಲಿ 300 ಮಕ್ಕಳನ್ನು ಹೊಂದಿರುವ ಅನಾಥ ಆಶ್ರಮ ಗುರುಕುಲಕ್ಕೆ ಪ್ರತಿವರ್ಷ ದಾನಿ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಸುಮಾರು ₹15 ಲಕ್ಷಕ್ಕೂ ಹೆಚ್ಚು ಖರ್ಚಿನಲ್ಲಿ ವರ್ಷಕ್ಕೆ ಬೇಕಾಗುವ ದವಸ ಧಾನ್ಯ ನೀಡುವ ಮೂಲಕ ಮಹಾಪೋಷಕರಾಗಿದ್ದಾರೆ.
ಸವಣೂರು: ಅನಾಥ ಮಕ್ಕಳ ಪಾಲನೆ, ಪೋಷಣೆಗೆ ಭಕ್ತರ ಸಹಕಾರ ಅತ್ಯಂತ ಸಹಕಾರಿಯಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೂವಿನಶಿಗ್ಲಿ ಗುರುಕುಲ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ದಾನಿ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಹಾಗೂ ಅನಾಥ ಮಕ್ಕಳಿಗೆ ವರ್ಷಕ್ಕೆ ಬೇಕಾಗುವ ದವಸ ಧಾನ್ಯ ಸ್ವೀಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹತ್ತಾರು ದಶಕಗಳಿಂದ ಶ್ರೀಮಠದಲ್ಲಿ 300 ಮಕ್ಕಳನ್ನು ಹೊಂದಿರುವ ಅನಾಥ ಆಶ್ರಮ ಗುರುಕುಲಕ್ಕೆ ಪ್ರತಿವರ್ಷ ದಾನಿ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಸುಮಾರು ₹15 ಲಕ್ಷಕ್ಕೂ ಹೆಚ್ಚು ಖರ್ಚಿನಲ್ಲಿ ವರ್ಷಕ್ಕೆ ಬೇಕಾಗುವ ದವಸ ಧಾನ್ಯ ನೀಡುವ ಮೂಲಕ ಮಹಾಪೋಷಕರಾಗಿದ್ದಾರೆ. ಭಕ್ತರ ಸಹಕಾರ ಮಾತ್ರ ನಮ್ಮಂತಹ ಸ್ವಾಮಿಗಳು ಅನಾಥ ಆಶ್ರಮ ನಿರ್ವಹಣೆಗೆ ಪ್ರೇರಣೆಯಾಗಿದೆ ಎಂದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸಮಾರಂಭವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶ್ರೀಮಠ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯ ಉತ್ತರ ಕರ್ನಾಟಕದಲ್ಲಿ ಮಾದರಿಯಾಗಿದೆ. ಆದ್ದರಿಂದ ಭಕ್ತರೊಂದಿಗೆ ಸರ್ವರೂ ಶ್ರೀಮಠಕ್ಕೆ ಸಹಕಾರ ನೀಡುವ ಮೂಲಕ ಇನ್ನಷ್ಟು ಸಾಮಾಜಿಕ ಕಾರ್ಯಕ್ಕೆ ಮುಂದಾಗಲು ನಿರಂತರ ಪ್ರೇರಣೆ ನೀಡುವುದು ಅವಶ್ಯವಾಗಿದೆ ಎಂದರು.ದಾನಿ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಮುಖರಾದ ಅಶೋಕ ಶಿರಹಟ್ಟಿ, ವಿಜಯ ಮೆಕ್ಕಿ, ವಿಜಯ ಬೂದಿಹಾಳ, ಮಂಜುನಾಥ ಬನ್ನೂರ, ದಾನೇಶ ತಿಮ್ಮಶೆಟ್ಟಿ, ಖಂಡೋಬಾ ಕಾಳೆ, ನಿಂಗಪ್ಪ ರಾಯಣ್ಣವರ, ಶೇಖಣ್ಣ ಮಂಜಲಾಪೂರ, ಮುತ್ತಪ್ಪ ಕುಂದಗೋಳ, ಹೆಗ್ಗಪ್ಪ ಗದ್ದೆಣ್ಣವರ, ಲಕ್ಷಣ ಶೇಗಡಿ, ನಾಗಪ್ಪ ಸೊರಟೂರ, ಅನ್ನದಾನಯ್ಯ ಹಿರೇಮಠ, ದೇವಣ್ಣ ಸಣ್ಣಬಾಳಪ್ಪನವರ, ನಿಂಗಪ್ಪ ಹೆಬಸೂರ, ಡಾ. ಈರಣ್ಣ ಮುದಗಲ್, ಡಾ. ಗುರುಮಾಂತಯ್ಯ ಆರಾಧ್ಯಮಠ ಹಾಗೂ ಇತರರು ಪಾಲ್ಗೊಂಡಿದ್ದರು. ನಾಳೆ ನೇತ್ರ ತಪಾಸಣೆ, ಪ್ರತಿಭಾ ಪುರಸ್ಕಾರರಾಣಿಬೆನ್ನೂರು: ತಾಲೂಕು ನಿವೃತ್ತ ನೌಕರರ ಸಂಘ ಮತ್ತು ಜೆಸಿಐ ಅಲ್ಯೂಮಿನಿ ಕ್ಲಬ್ ಜೋನ್ -24 ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಜು. 2ರಂದು ಬೆಳಗ್ಗೆ 9ಕ್ಕೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಸ್ಥಳೀಯ ಶಂಕರ ವಿಷನ್ ಸೆಂಟರ್ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಮಧ್ಯಾಹ್ನ 12ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಎಂ. ಕರ್ಜಗಿ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.