ರಂಗಭೂಮಿ ಕಲೆ ಪೋಷಿಸಲು ಸಹಕಾರ ಅಗತ್ಯ

| Published : Mar 13 2025, 12:49 AM IST

ಸಾರಾಂಶ

ನಾಟಕ ಕಲೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಈಗಲೂ ತನ್ನ ವೈಭವ ಮೆರೆಯುತ್ತಿವೆ. ಅಂತೆಯೇ ನಾಡಿನಲ್ಲಿ ೩೦ಕ್ಕೂ ಹೆಚ್ಚು ಕಂಪನಿಗಳು ಇಂದಿಗೂ ಪ್ರದರ್ಶನ ನಡೆಸುತ್ತ ರಂಗಭೂಮಿ ಸೇವೆ ಮಾಡುತ್ತಿವೆ. ಗ್ರಾಮೀಣ ಪ್ರತಿಬಿಂಬವೇ ನಾಟಕಗಳಾಗಿವೆ.

ಯಲಬುರ್ಗಾ:

ಟಿವಿ, ಧಾರವಾಹಿಗಳಿಂದ ನಶಿಸುತ್ತಿರುವ ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸಿ-ಬೆಳೆಸಲು ನಾಗರಿಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಂದಾನಗೌಡ ಪೊಲೀಸ್‌ಪಾಟೀಲ ಹೇಳಿದರು.

ತಾಲೂಕಿನ ಬೂನಕೊಪ್ಪ ಗ್ರಾಮದಲ್ಲಿ ಬಸಾಪೂರ-ಬೂನಕೊಪ್ಪ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಪ್ರಯುಕ್ತ ಮಾರುತೇಶ್ವರ ನಾಟ್ಯ ಸಂಘದಿದ ಹಮ್ಮಿಕೊಂಡಿದ್ದ ಖಳನಾಯಕನ ಖಾರಸ್ತಾನ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಪೀಳಿಗೆ ನಾಟಕಗಳನ್ನು ಹೆಚ್ಚು ವೀಕ್ಷಿಸುವ ಮೂಲಕ ನಾಟಕದ ಒಳ್ಳೆಯ ಸಂದೇಶ ಅನುಕರಣೆ ಮಾಡಬೇಕು ಎಂದರು.

ನಾಟಕ ಕಲೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಈಗಲೂ ತನ್ನ ವೈಭವ ಮೆರೆಯುತ್ತಿವೆ. ಅಂತೆಯೇ ನಾಡಿನಲ್ಲಿ ೩೦ಕ್ಕೂ ಹೆಚ್ಚು ಕಂಪನಿಗಳು ಇಂದಿಗೂ ಪ್ರದರ್ಶನ ನಡೆಸುತ್ತ ರಂಗಭೂಮಿ ಸೇವೆ ಮಾಡುತ್ತಿವೆ. ಗ್ರಾಮೀಣ ಪ್ರತಿಬಿಂಬವೇ ನಾಟಕಗಳಾಗಿವೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಧರ್ಮರ ಮಠದ ನಾಗಲಿಂಗಪ್ಪಜ್ಜನವರ, ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಅವರ ಕಲೆ ಬೆಂಬಲಿಸೋಣ ಎಂದರು.

ಈ ವೇಳೆ ಪಪಂ ಸದಸ್ಯ ರೇವಣೆಪ್ಪ ಹಿರೇಕುರುಬರ, ಮುಖಂಡರಾದ ಹನುಮಪ್ಪ ಉಪ್ಪಲದಿನ್ನಿ, ಅಮರಪ್ಪ ಕಲಬುರಗಿ, ಅಮರೇಶ ಬೇರಗಿ, ಮೈಲಾರಪ್ಪ ಗಡಗಿ, ಅಶೋಕ ಕುರಿ, ಶರಣಪ್ಪ ಹಟ್ಟಿ, ಬಸವರಾಜ ತಳವಾರ, ಅಲ್ಲಾಸಾಬ್‌ ಗುರಿಕಾರ, ಅಟಲಸಾಬ್‌ ಮುಜಾವರ, ಪರಶುರಾಮ ಗಡಗಿ, ಮುತ್ತು ಮುಧೋಳ ಇದ್ದರು.