ಸಾರಾಂಶ
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳೂ ನಡೆಯುತ್ತಿದ್ದು, ಕ್ಷೀರ ಭಾಗ್ಯ, ಬಾಳೆಹಣ್ಣು, ಶೇಂಗಾಚಿಕ್ಕಿ, ಸಮವಸ್ತ್ರ, ವಿದ್ಯಾರ್ಥಿ ವೇತನಗಳ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕ್ಷೀಣಿಸುತ್ತಿದೆ.
ಪಿಡಬ್ಲ್ಯುಡಿ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರುಬೆಂಗಳೂರಿನಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸಿದಂತೆ ಹರಿಹರ ತಾಲೂಕಿನ ವರ್ತಕರು, ಉದ್ಯಮಿಗಳು ಸರ್ಕಾರಿ ಶಾಲೆಗಳ ದತ್ತು ಪಡೆದು ಅಭಿವೃದ್ಧಿಪಡಿಸಲು ಸಹಕರಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಸಲಹೆ ನೀಡಿದರು.
ಪಟ್ಟಣದ ಪಿಡಬ್ಲ್ಯುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃತಗ್ಯತಾ ಟ್ರಸ್ಟ್ ಹಾಗೂ ಮಾರುತಿ ಮೆಡಿಕಲ್ಸ್ ವತಿಯಿಂದ ಧ್ವನಿವರ್ಧಕ ಮತ್ತು ನೋಟ್ ಪುಸ್ತಕಗಳ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳೂ ನಡೆಯುತ್ತಿದ್ದು, ಕ್ಷೀರ ಭಾಗ್ಯ, ಬಾಳೆಹಣ್ಣು, ಶೇಂಗಾಚಿಕ್ಕಿ, ಸಮವಸ್ತ್ರ, ವಿದ್ಯಾರ್ಥಿ ವೇತನಗಳ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕ್ಷೀಣಿಸುತ್ತಿರುವುದು ಪೋಷಕರ ಇಂಗ್ಲೀಷ್ ವ್ಯಾಮೋಹದಿಂದ ಎಂದು ವಿಷಾದ ವ್ಯಕ್ತಪಡಿಸಿದರು.ಕಳೆದ ಕೆಲವು ವರ್ಷದಿಂದ ಬೆಂಗಳೂರಿನ ಹಲವು ಸಂಸ್ಥೆಗಳು ತಾಲೂಕಿನ ಸರ್ಕಾರಿ ಶಾಲೆಗಳಿಗೆ ಬ್ಯಾಗ್, ನಲಿಕಲಿ ಪೀಠೋಪಕರಣ, ಆಟಿಕೆ ಸಾಮಗ್ರಿಗಳ ವಿತರಿಸುತ್ತಿದ್ದಾರೆ ಎಂದರು.
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ ಮಾತನಾಡಿ ಬೆಂಗಳೂರಿನ ಕಂಪನಿಗಳು ಕಳೆದ ಐದು ವರ್ಷಗಳಿಂದ ಹರಿಹರ ತಾಲೂಕಿನ ೫೦ಸಾವಿರ ಮಕ್ಕಳಿಗೆ ವಿವಿಧ ಕಲಿಕಾ ಸಾಮಗ್ರಿಗಳು, ಗಣಕ ಯಂತ್ರ, ಗ್ರಂಥಾಲಯ ಪುಸ್ತಕಗಳು ಹಾಗೂ ಎರಡು ತಿಂಗಳಿನಲ್ಲಿ ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ನವರು ೬೦ ಸಾವಿರ ಪುಸ್ತಕಗಳ ವಿತರಿಸಿರುವುದು ವಿಶಾಲಭಾವನೆಯ ಸೂಚಕ ಎಂದರು.ವಿವಿಧ ಶಾಲೆಯ ಶಿಕ್ಷಕರಾದ ರಾಘವೇಂದ್ರ, ಪೀರುನಾಯ್ಕ್, ಆನಂದ್, ಪ್ರವೀಣ್, ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್, ಉಪಾಧ್ಯಕ್ಷೆ ರೋಜಾ, ಸದಸ್ಯರಾದ ಎ.ಕೆ.ಪ್ರಕಾಶ್, ಪವನ್, ವಿಜಯ್, ಜ್ಯೋತಿ, ನಗೀನಾ ಮತ್ತಿತರರಿದ್ದರು. ನೇತ್ರಾವತಿ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))