ಸಾರಾಂಶ
ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ 2024 -25ರ ಸಾಲಿನ ಪೋಷಕರ ಸಭೆ ನಡೆಯಿತು. ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಸಹಭಾಗಿತ್ವದಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ ಹೇಳಿದರು.ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ 2024 -25ರ ಸಾಲಿನ ಪೋಷಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ವಿದ್ಯಾರ್ಥಿಗಳು ಪಡೆಯುವ ಶಿಕ್ಷಣ ಮೌಲ್ಯಯುತವಾಗಿರಬೇಕು. ಉತ್ತಮ ಗುಣನಡತೆಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲೆ ಬಿ.ಎಂ. ಶಾರದಾ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಪಾಠ ಪ್ರವಚನಗಳ ಜೊತೆಗೆ ಪೋಷಕರು ಸಹ ವಿದ್ಯಾರ್ಥಿಗಳ ಗುಣನಡತೆಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು ಎಂದರು.ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ವಹಿಸಿದ್ದರು.ನಿರ್ದೇಶಕರಾದ ಕೊಂಬಂಡ ಗಣೇಶ್, ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಮುತ್ತಣ್ಣ, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಕಲಿಯಂಡ ಕೌಶಿಕ್ ಕುಶಾಲಪ್ಪ, ಚೌರೀರ ಮಂದಣ್ಣ ಉಪಸ್ಥಿತರಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಶಿಕ್ಷಕಿ ಚಂದ್ರಕಲಾ ಮಹೇಶ್ ಪ್ರಾರ್ಥಿಸಿದರು. ಶಾರದಾ ಬಿ.ಎಂ. ಸ್ವಾಗತಿಸಿದರು. ಶೋಭಿತಾ ಕೆ.ಡಿ. ವಂದಿಸಿದರು.