ಡಂಬಳ ಗ್ರಾಮದ ಕೆಸಿಸಿ ಬ್ಯಾಂಕ್‌ನಲ್ಲಿ ನಬಾರ್ಡ್‌ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತಾ ಯೋಜನೆಯಡಿ ಬ್ಯಾಂಕಿನ ಆರ್ಥಿಕ ಹಾಗೂ ಡಿಜಿಟಲ್ ಸೇವಾ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ಕಾರ್ಯಾಗಾರ ನಡೆಯಿತು.

ಡಂಬಳ: ರಾಷ್ಟ್ರಾದ್ಯಂತ ಸಹಕಾರಿ ಬ್ಯಾಂಕುಗಳು ಗ್ರಾಮೀಣ ಜನತೆಯನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವಲ್ಲಿ ಅತ್ಯಂತ ಮಹತ್ವದ್ದ ಪಾತ್ರ ವಹಿಸಿವೆ ಎಂದು ಧಾರವಾಡ ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಹೇಳಿದರು.

ಡಂಬಳ ಗ್ರಾಮದ ಕೆಸಿಸಿ ಬ್ಯಾಂಕ್‌ನಲ್ಲಿ ನಬಾರ್ಡ್‌ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತಾ ಯೋಜನೆಯಡಿ ಬ್ಯಾಂಕಿನ ಆರ್ಥಿಕ ಹಾಗೂ ಡಿಜಿಟಲ್ ಸೇವಾ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ಕಾರ್ಯಾಗಾರ ಮತ್ತು ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೆ ಗ್ರಾಮೀಣ ಜನತೆ ಆರ್ಥಿಕ ಮುನ್ನಲೆಗೆ ಬರಬೇಕು ಎನ್ನುವ ಹಿನ್ನೆಲೆಯಲ್ಲಿ ಕೆಸಿಸಿ ಬ್ಯಾಂಕ್‌ ಮೂಲಕ ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ₹800 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ನನ್ನ ಅಧ್ಯಕ್ಷತೆಯಲ್ಲಿ 15 ನೂತನ ಶಾಖೆಗಳನ್ನು ತೆರೆಯಲಾಗಿದೆ. 3 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಖರೀದಿಗೆ ಸಾಲ ನೀಡಲಾಗಿದೆ. ಶೇ. 3ರಷ್ಟು ಬಡ್ಡಿದರದಲ್ಲಿ ತೋಟಗಾರಿಕಾ ಬೆಳೆಗಳಿಗೆ ಸೋಲಾರ್‌ ಪಂಪ್‌ಸೆಟ್‌ ವಿತರಣೆ ಮಾಡಲಾಗುವುದು ಎಂದು ಹೇಳಿದರು. ಕೃಷಿ ಹೊಂಡ, ಬಾಳೆ, ತಾಳೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೆ ಸಾಲ ಸೌಲಭ್ಯ ವಿತರಿಸಲಾಗಿದೆ. ಎನ್‌ಆರ್‌ಐದಡಿ ಸ್ವಸಹಾಯ ಪುರುಷರ ಮತ್ತು ಮಹಿಳೆಯರ ಗುಂಪುಗಳಿಗೆ 1 ಲಕ್ಷದಿಂದ 25 ಲಕ್ಷದ ವರೆಗೆ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಮರಿಯಪ್ಪ ಸಿದ್ಧಣ್ಣವರ, ಜಿಪಂ ಮಾಜಿ ಸದಸ್ಯ ಶಿವಪ್ಪ ಅಂಕದ, ಶ್ರೀದೇವಿ ಹಿರೇಮಠ ಮಾತನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ವಿ.ಟಿ. ಮೇಟಿ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್. ಯರಾಶಿ, ಹೇಮಣ್ಣ ಪೂಜಾರ, ಸಿದ್ದಪ್ಪ ನಂಜಪ್ಪನವರ, ಮಲ್ಲಪ್ಪ ಮಠದ, ಬಸಪ್ಪ ಕೋತಂಬ್ರಿ, ಗದಗ ಜಿಲ್ಲಾ ಕೆಸಿಸಿ ಬ್ಯಾಂಕಿನ ಉಸ್ತುವಾರಿ ಎಸ್.ಎಂ. ಚಿಕ್ಕಮಠ, ಬ್ಯಾಂಕಿನ ವ್ಯವಸ್ಥಾಪಕಿ ಗಂಗಮ್ಮ ಗದ್ಧಿಗೌಡರ, ಕಾರ್ಯದರ್ಶಿ ಎಂ.ಎಸ್. ಸುರಕೋಡ, ರುದ್ರಮ್ಮ ಕುಂಬಾರ, ಆರ್.ಎ. ಕೊಪ್ಪಳ, ಸಂಗಮೇಶ ಬುಗಟಿ ಇದ್ದರು.