ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ಸಹಕಾರಿ ದಿನಾಚರಣೆ

| Published : Jan 03 2025, 12:33 AM IST

ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ಸಹಕಾರಿ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಹಾಗೂ ನಂ.561ನೇ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಿಂದಿನ ಕಾಲದಲ್ಲಿ ಕೊಡವರು ತಮ್ಮ ಕೃಷಿ ಭೂಮಿ, ಜಮೀನು ನಿರ್ವಹಣೆ ಸಾಧ್ಯವಾಗದೆ ಮಾರಾಟ ಮಾಡುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಸಹಕಾರಿ ಸಂಸ್ಥೆ ನೆರವಿನಿಂದ ತಮ್ಮ ಆಸ್ತಿಗಳನ್ನು ಉಳಿಸಿಕೊಂಡು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ನಂದಿನೆರವಂಡ ರವಿ ಬಸಪ್ಪ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಹಾಗೂ ನಂ.561ನೇ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ನಗರದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, 1997 ಕರ್ನಾಟಕ ಸೌಹಾರ್ದ ಕಾಯಿದೆ 2001 ಜ.1 ರಂದು ಜಾರಿಗೆ ಬಂದಿತು. ಇದರ ಜ್ಞಾಪಕಾರ್ಥವಾಗಿ ಸೌಹಾರ್ದ ಸಹಕಾರಿ ದಿನ ಆಚರಿಸಲಾಗುತ್ತದೆ ಎಂದರು.

2005ರಲ್ಲಿ 200 ಸದಸ್ಯರೊಂದಿಗೆ ಕೊಡಗಿನಲ್ಲಿ ಪ್ರಾರಂಭವಾದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಕೊಡಗಿನಾದ್ಯಂತ ಸದಸ್ಯರನ್ನು ಹೊಂದಿದ್ದು, ಪ್ರಸ್ತುತ 2313 ಸದಸ್ಯರಿದ್ದಾರೆ. ಸದಸ್ಯರಿಗೆ ವಿವಿಧ ರೀತಿಯ ಸಾಲ, ಸದಸ್ಯರಿಂದ ಠೇವಣಿ ಸಂಗ್ರಹ, ವಿಮೆ ಸೇರಿದಂತೆ ಇ ಸ್ಟಾಂಪಿಂಗ್, ಆರ್.ಟಿ.ಸಿ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದ್ದು, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಲಾಭದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಹಾಗೂ ನಿವೃತ್ತ ಪ್ರಾಂಶುಪಾಲೆ ಮುಕ್ಕಾಟೀರ ಎ.ಪೊನ್ನಮ್ಮ ಮಾತನಾಡಿ, ಸಹಕಾರ ಸಂಘ ಗ್ರಾಮೀಣ ಜನರ ಆರ್ಥಿಕತೆ ಬಲಪಡಿಸುವಲ್ಲಿ ಸಹಕಾರಿಯಾಗಿದೆ. ರೈತರಿಗೆ, ಸಾಮಾನ್ಯ ಜನರ ಸೇವೆ ಸಲ್ಲಿಸುವ ಮೂಲಕ ಆರ್ಥಿಕ ಸಂಪತ್ತನ್ನು ದ್ವಿಗುಣಗೊಳಿಸಿದೆ. ಇಂತಹ ಮಹತ್ತರ ಸಹಾಯ ನೀಡುವ ಸಹಕಾರ ಸಂಘವನ್ನು ಮತ್ತಷ್ಟು ಬಲಪಡಿಸುವಂತಾಗಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿ ಮಣವಟ್ಟೀರ ಬಿ.ಮಾಚಯ್ಯ, ಹಲವು ವರ್ಷಗಳಿಂದ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ನಮ್ಮದೇ ಆದ ಕಟ್ಟಡ, ಜಾಗದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಚಿಂತಿಸಿ ಜಾಗ ಗುರುತಿಸಿ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನಾಟೋಳಂಡ ಡಿ.ಚರ್ಮಣ ಸಹಕಾರಿ ಧ್ವಜಾರೋಹಣ ನೆರವೇರಿಸಿದರು.ಸಹಕಾರಿ ಸಂಘದ ನಿರ್ದೇಶಕರಾದ ಚೋವಂಡ ಡಿ.ಕಾಳಪ್ಪ, ಮಣವಟ್ಟೀರ ಬಿ.ಮಾಚಯ್ಯ, ಕೊಂಗಾಂಡ ಎ.ತಿಮ್ಮಯ್ಯ, ಪಟ್ಟಡ ಎ.ಕರುಂಬಯ್ಯ, ಕುಡುವಂಡ ಬಿ.ಉತ್ತಪ್ಪ, ಕೇಕಡ ಯಂ.ಸುಗುಣ, ಶಾಂತೆಯಂಡ ಟಿ.ದೇವರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಳ್ಳೇಂಗಡ ಪಿ.ಸಿ.ನೀಮಾ, ವ್ಯವಸ್ಥಾಪಕ ಚೋವಂಡ ಪಿ.ಗೌತಮ್ ಮೇದಪ್ಪ, ಸಿಬ್ಬಂದಿ ಮಂದೇಟಿರ ಪಿ.ತಶ್ವಿನ್ ತಮ್ಮಯ್ಯ, ಕೊಡಗು ವಿದ್ಯಾನಿಧಿಯ ಕಾರ್ಯದರ್ಶಿ ಮೇದುರ ಪಿ.ಕಾವೇರಿಯಪ್ಪ ಮತ್ತಿತರರಿದ್ದರು.

ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಎಂ.ಜಿ.ಉಷಾ ಉತ್ತಯ್ಯ ವಂದಿಸಿದರು.

ಹಿರಿಯ ಸಹಕಾರಿಗಳಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಮಣವಟ್ಟೀರ ಬಿ.ಮಾಚಯ್ಯ, ಪೇರಿಯಂಡ ಪಿ.ಪೆಮ್ಮಯ್ಯ, ಸುಳ್ಳಿಮಾಡ ಪಿ.ಮಾದಪ್ಪ, ಪುದಿಯೊಕ್ಕಡ ಎಸ್.ಈರಪ್ಪ, ಪೆಮ್ಮಂಡ ಎ.ಸರಸ್ವತಿ, ಬೈರೇಟ್ಟಿರ ಎಸ್.ಬಿದ್ದಯ್ಯ ಅವರನ್ನು ಗೌರವಿಸಲಾಯಿತು.