ಸಾರಾಂಶ
ರಾಜ್ಯದಲ್ಲಿನ ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಶೇ.೫೮ರಷ್ಟು ಆರ್ಥಿಕ ನೆರವು ಸ್ಥಗಿತಗೊಳಿಸಿದೆ.
ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿನ ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಶೇ.೫೮ರಷ್ಟು ಆರ್ಥಿಕ ನೆರವು ಸ್ಥಗಿತಗೊಳಿಸಿದೆ. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಆರ್ಥಿಕ ನೆರವು ಬಿಡುಗಡೆಗೆ ಒತ್ತಾಯಿಸಲಾಗಿದೆ ಎಂದು ರಾಜ್ಯ ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ತಿಳಿಸಿದರು.
ತಾಲೂಕಿನ ಬಾಚಿಗೊಂಡನಹಳ್ಳಿ ೧ ಗ್ರಾಮದಲ್ಲಿ ೬೫ಲಕ್ಷರೂ ಮೊತ್ತದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಕಟ್ಟಡ, ಗೋದಾಮು ಮತ್ತು ಅತಿಥಿ ಗೃಹ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರದ ವ್ಯಾಪ್ತಿ ವ್ಯಾಪಕವಾಗಿದ್ದು, ರೈತರ ಸೇವೆಯಲ್ಲಿ ನಿರಂತರವಾಗಿ ತೊಡಗಿದೆ. ಅಧಿಕಾರವಿಲ್ಲದಿದ್ದರೂ ಕ್ಷೇತ್ರದ ಜನಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಾಗುವುದು. ಈ ಹಿಂದೆ ಶಾಸಕರಾಗಿದ್ದ ವೇಳೆ ತಾಲೂಕಿನ ಬೆಣ್ಣಿಕಲ್ಲು, ತಂಬ್ರಹಳ್ಳಿ, ವರಲಹಳ್ಳಿ ಗ್ರಾಮದಲ್ಲಿ ತಲಾ ೧೫ಲಕ್ಷರೂ.ಅಂದಾಜು ಮೊತ್ತದಲ್ಲಿ ಸಹಕಾರಿ ಕಟ್ಟಡ ನಿರ್ಮಿಸಲಾಗಿತ್ತು. ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರು ಸಹಕಾರಿ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸ್ಪೂರ್ತಿಯಿಂದಾಗಿ ಸಹಕಾರಿ ಕ್ಷೇತ್ರಕ್ಕೆ ಬಂದಿದ್ದೇನೆ. ಬಾಚಿಗೊಂಡನಹಳ್ಳಿ ಮಾಜಿ ಶಾಸಕ ಚನ್ನಬಸವನಗೌಡ್ರು ಹೆಸರು ಹೇಳಿದರೆ, ಮಾಲವಿ ಜಲಾಶಯ ನಿರ್ಮಾತೃ ಎಂದು ಕ್ಷೇತ್ರದ ಜನತೆ ಹೇಳುತ್ತಾರೆ. ಅದೇ ಜಲಾಶಯಕ್ಕೆ ೧೬೫ಕೋಟಿ ಅನುದಾನ ಒದಗಿಸಿ ನೀರು ತಂದವರು ಯಾರು ಎಂದು ಜನರನ್ನು ಕೇಳಿದರೆ ಭೀಮನಾಯ್ಕ ಎಂದು ಕ್ಷೇತ್ರದ ಜನತೆ ಹೇಳುತ್ತಾರೆ ಎಂದು ಆತ್ಮವಿಶ್ವಾಸದಿಂದ ನುಡಿದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡಿ, ಸಹಕಾರಿ ಸಂಘಗಳಿಗೆ ನಬಾರ್ಡ್ ಯೋಜನೆಯಡಿ ಗೋದಾಮು, ಜನತಾ ಬಜಾರ್ ನಿರ್ಮಾಣಕ್ಕೆ ೨ ಕೋಟಿ ರೂ.ವರೆಗೂ ಸಾಲಸೌಲಭ್ಯ ಕಲ್ಪಿಸಲಾಗುವುದು. ಕ್ಷೇತ್ರದಲ್ಲಿ ಭೀಮನಾಯ್ಕ ಪರಾಭವದಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ಕ್ಷೇತ್ರದಲ್ಲಿ ಅಭಿವೃಧ್ದಿ ಸೋತಿದೆ. ಕೇಂದ್ರ ಸರಕಾರದ ಆರ್ಥಿಕ ನೆರವು ಕಡಿತದ ನಡುವೆಯೂ ರೈತರಿಗೆ ಸಾಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ವಾಭಿಮಾನಿ ಕೆಸಿಸಿ ಯೋಜನೆ ರೂಪಿಸಿ, ಶೇ.೧೦.೫ರ ಬಡ್ಡಿಧರದಲ್ಲಿ ಪ್ರತಿ ಎಕರೆಗೆ ತಲಾ ಲಕ್ಷರೂ.ಸಾಲಸೌಲಭ್ಯ ಕಲ್ಪಿಸಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ.ದಾರುಕೇಶ ಮಾತನಾಡಿದರು. ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಹಕಾರ ಸಂಘದ ಸುರೇಶ್ ರೆಡ್ಡಿ, ಕೆ.ಕೊಟ್ರಪ್ಪ, ಮಲ್ಲಪ್ಪ, ವಿರೇಶ ಪಾಟೀಲ್, ಖಾಸೀಂ ಸಾಹೇಬ್, ಬಾವಿ ರತ್ನಮ್ಮ, ಶಿವಪುತ್ರಪ್ಪ, ನವೀನ್‌ಕುಮಾರ್, ಹನುಮವ್ವ, ಪುರಸಭೆ ಅಧ್ಯಕ್ಷ ಮರಿರಾಮಣ್ಣ, ಜಿ.ಪಂ.ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ರೋಗಾಣಿ ಹುಲುಗಪ್ಪ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ತಾ.ಪಂ.ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ತ್ಯಾವಣಗಿ ಕೊಟ್ರೇಶ, ಯು.ಬಾಳಪ್ಪ, ಸೆರೆಗಾರ ಹುಚ್ಚಪ್ಪ, ಡಿಶ್ ಮಂಜುನಾಥ, ಮಹೇಶ, ಮೇಘರಾಜ, ಭಾಷಾಸಾಹೇಬ್ ಇದ್ದರು. ಸಂಘದ ರವೀಂದ್ರ ಕಲ್ಲಮ್ಮನವರ್, ಇಟಿಗಿ ಶರಣಪ್ಪ ನಿರ್ವಹಿಸಿದರು. ಇದೇವೇಳೆ ತಾಲೂಕಿನ ಅಡವಿ ಆನಂದೇವನಹಳ್ಳಿ ಗ್ರಾಮದಲ್ಲಿ ಸಹಕಾರಿ ಸಂಘದ ನೂತನ ಗೋದಾಮುಗಳನ್ನು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಉದ್ಘಾಟಿಸಿದರು.