ಮ್ಯಾಟ್ ಮೇಲೆ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗೆ ಚಾಲನೆ

| Published : Nov 25 2024, 01:03 AM IST

ಮ್ಯಾಟ್ ಮೇಲೆ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮ್ಯಾಟ್ ಮೇಲೆ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗೆ ಮೈಸೂರು, ಬೆಂಗಳೂರು, ಮಂಡ್ಯ, ಕೆಆರ್ ನಗರ, ದಾವಣಗೆರೆ, ಪಾಲಹಳ್ಳಿ, ಗಂಜಾಂ ಸೇರಿದಂತೆ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಮಂದಿ ಕುಸ್ತಿ ಪಟುಗಳು ಆಗಮಿಸಿ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬೆಳಗೊಳ ಗ್ರಾಮದ ಹಿರಿದೇವಿ ಹಬ್ಬದ ಅಂಗವಾಗಿ ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿಯಿಂದ ನಡೆದ ಮ್ಯಾಟ್ ಮೇಲೆ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಗ್ರಾಮದ ಪ್ರೌಢ ಶಾಲಾ ಆವರಣದಲ್ಲಿ ಉತ್ತಮವಾದ ಮ್ಯಾಟ್ ಹಾಕಿ ಕುಸ್ತಿ ಪಟುಗಳಿಗೆ 40, 50, 57, 65, 75 ಹಾಗೂ 80 ಕೆ.ಜಿ ತೂಕದ ವಿಭಾಗದಲ್ಲಿ ಕ್ವಾಟರ್, ಸೆಮ್ಮಿ, ಹಾಗೂ ಪೈನಲ್ ಕುಸ್ತಿ ಪಂದ್ಯಾವಳಿಯನ್ನು ನಡೆಸಲಾಯಿತು.

ಗ್ರಾಮದ ದೊಡ್ಡ ಯಜಮಾನ್ ಶ್ರೀನಿವಾಸೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ ಸುರೇಶ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಪಂದ್ಯಾವಳಿಗೆ ಮೈಸೂರು, ಬೆಂಗಳೂರು, ಮಂಡ್ಯ, ಕೆಆರ್ ನಗರ, ದಾವಣಗೆರೆ, ಪಾಲಹಳ್ಳಿ, ಗಂಜಾಂ ಸೇರಿದಂತೆ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಮಂದಿ ಕುಸ್ತಿ ಪಟುಗಳು ಆಗಮಿಸಿ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದರು.

ವಿಜೇತರಿಗೆ ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು. ಕುಸ್ತಿ ಕೋಚ್‌ಗಳಾದ ವಿಜಿಕುಮಾರ್,ಮಧುಸೂಧನ್, ರಮೇಶ್, ಡಾ.ದೇವರಾಜು, ಮಂಡ್ಯ ಜಿಲ್ಲಾ ಅಮೆಚೂರ್ ಕುಸ್ತಿ ಸಂಘದ ಕಾರ್ಯದರ್ಶಿ ಮಲ್ಲುಸ್ವಾಮಿ, ಸೇರಿದಂತೆ ಇತರ ಅಂಪೈರ್‌ಗಳ ಮೂಲಕ ಕುಸ್ತಿಯನ್ನು ನಡೆಸಲಾಯಿತು.

ಈ ವೇಳೆ ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ್ ಪಾಪು, ಆಯೋಜಕರಾದ ಧನಂಜಯ, ಪೈ.ಆನಂದ್, ಪೈ.ಪ್ರಕಾಶ್,ಪೈ, ವೆಂಕಟೇಶ್ , ಕೃಷ್ಣ, ಪ್ರಮೋಧ್ ಇತರೆ ಸಮಿತಿ ಸದಸ್ಯರು ಹಾಗು ಇತರ ಪೈಲ್ವಾನ್ ಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ

ಮಂಡ್ಯ: ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನ.25 ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸೀಫ್ ಆಗಮಿಸುವರು. ನ.27 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಮೈಸೂರು ದಕ್ಷಿಣ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎಂ.ಬಿ.ಬೋರಲಿಂಗಯ್ಯ ಆಗಮಿಸಲಿದ್ದಾರೆ.