ಕಾಂಗ್ರೆಸ್ ಗೆಲುವು ಸಂಭ್ರಮಿಸಿದ ಕಾರ್ಯಕರ್ತರು

| Published : Nov 25 2024, 01:03 AM IST

ಸಾರಾಂಶ

ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜೆಡಿಎಸ್ ಪಕ್ಷಕ್ಕೆ ಚನ್ನಪಟ್ಟಣದಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಯಾರೂ ಸಹ ರಾಜ್ಯದಿಂದ ಕಾಂಗ್ರೆಸ್ ಪಕ್ಷದಿಂದ ಕಿತ್ತೊಗೆಯಲು ಸಾಧ್ಯವಿಲ್ಲವೆಂಬುದನ್ನು ಅರಿಯಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶ್ರಮದ ಫಲ ಇಂದು ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವ ಮೂಲಕ ಪಕ್ಷದ ಶಕ್ತಿ ಏನೆಂದು ವಿರೋಧ ಪಕ್ಷಗಳಿಗೆ ತಿಳಿಸಿದ್ದಾರೆ. ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಸೋಲೆಂದು ಹೇಳಲಾಗಿತ್ತು. ಆದರೆ ಮುಖಂಡರು, ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವ ಮೂಲಕ ನಮ್ಮ ಅಭ್ಯರ್ಥಿಗಳಿಗೆ ಜಯದ ಮಾಲೆಯನ್ನು ಹಾಕಿಸಿದ್ದಾರೆ ಎಂದರು.ಜನ ಮೆಚ್ಚಿದ ಕಾಂಗ್ರೆಸ್ ಸರಕಾರವನ್ನು ವಿರೋಧ ಪಕ್ಷದವರಾದ ಬಿಜೆಪಿ ಹಾಗೂ ಜೆಡಿಎಸ್ ಹುಡಾ ಹಗರಣ, ವಾಲ್ಮೀಕಿ ಹಗರಣ ಹೆಸರಿನಲ್ಲಿ ಅಲುಗಾಡಿಸುವ ನಿಟ್ಟಿನಲ್ಲಿ ಹಗರಣಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯುವ ಕೆಲಸ ಮಾಡುವ ಪ್ರಯತ್ನದಲ್ಲಿ ಇದ್ದರೇ ಮತದಾರ ಇವರಿಗೆ ತಕ್ಕ ಪಾಠ ಕಲಿಸಿ ತಲೆತಗ್ಗಿಸಿ ನಡೆಯುವಂತೆ ಮಾಡಿದ್ದಾರೆಂದರು.

ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್ ಮಾತನಾಡಿ, ವರಿಷ್ಠರ ನಾಯಕತ್ವಕ್ಕೆ ಜಯಸಿಕ್ಕಿದೆ. ಕಾಂಗ್ರೆಸ್ ವರಿಷ್ಠರಿಗೆ ತಂತ್ರ, ಮಂತ್ರ ಎಲ್ಲವೂ ತಿಳಿದಿದೆ. ಮುಂದಿನ ೨೦೨೮ರ ಚುನಾವಣೆಯ ದಿಕ್ಸೂಚಿಯಾಗಿದೆ ಅಂದೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜಾರ್ಖಂಡ್‌ನಲ್ಲಿ ಬಹುಮತದ ಪಕ್ಷವಾಗಿ ಕಾಂಗ್ರೆಸ್ ಅಧಿಕಾರವನ್ನು ಹಿಡಿಯುತ್ತಿದೆ. ಮಹಾರಾಷ್ಟ್ರದ ಸೋಲಿಗೆ ನಾವು ತಲೆಬಾಗುತ್ತೇವೆ. ಜೆಡಿಎಸ್ ಪಕ್ಷಕ್ಕೆ ಚನ್ನಪಟ್ಟಣದಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಯಾರೂ ಸಹ ರಾಜ್ಯದಿಂದ ಕಾಂಗ್ರೆಸ್ ಪಕ್ಷದಿಂದ ಕಿತ್ತೊಗೆಯಲು ಸಾಧ್ಯವಿಲ್ಲವೆಂಬುದನ್ನು ಅರಿಯಬೇಕಿದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವೆಂಕಟಮುನಿ, ಕಾಟೀಕೆರೆ ಉಮೇಶ್, ಸಾಮಾಜಿಕ ನ್ಯಾಯ ಸಮಿತಿ ಜಿಲ್ಲಾಧ್ಯಕ್ಷ ವೆಂಕಟೇಶ್, ಕೆಜೆಪಿ ಮಂಜು, ಬಾಲಮುರುಗನ್, ರೋಷನ್, ಇಮ್ರಾನ್, ಸಿರಾಜ್, ಬಾಲಮುರುಗನ್, ಮಂಜುನಾಥ್, ಪ್ರದೀಪ್, ಸಂಕೋಡನಹಳ್ಳಿ ಮಂಜು, ಜಗದೀಶ್, ವಿಜಯ್‌ಕುಮಾರ್, ರಾಜು ಉಪಸ್ಥಿತರಿದ್ದರು.: