ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಯಾವುದೇ ಗ್ರೇಸ್ ಅಂಕ ನೀಡಿಲ್ಲ. ಅಲ್ಲದೆ, ಪಾಸ್ ಅಂಕವನ್ನು ಈ ಬಾರಿ ಶೇ.33ಕ್ಕೆ ಇಳಿಸಿದ್ದರಿಂದ 1531 ವಿದ್ಯಾರ್ಥಿಗಳಿಗೆ ಪಾಸ್ ಆಗಲು ಉಪಯೋಗವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರು : ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಯಾವುದೇ ಗ್ರೇಸ್ ಅಂಕ ನೀಡಿಲ್ಲ. ಅಲ್ಲದೆ, ಪಾಸ್ ಅಂಕವನ್ನು ಈ ಬಾರಿ ಶೇ.33ಕ್ಕೆ ಇಳಿಸಿದ್ದರಿಂದ 1531 ವಿದ್ಯಾರ್ಥಿಗಳಿಗೆ ಪಾಸ್ ಆಗಲು ಉಪಯೋಗವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಆದರೆ, ಈ ಸಾಲಿನಿಂದ ಶೇ.20ರಷ್ಟೂ ಇಂಟರ್‌ನಲ್ ಅಂಕಗಳನ್ನು ಉತ್ತೀರ್ಣಕ್ಕೆ ಪರಿಗಣಿಸಲಾಗಿದೆ. ಇದರಿಂದ ಎಷ್ಟು ಮಕ್ಕಳಿಗೆ ಲಾಭವಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಮಾಹಿತಿ ಪ್ರಕಾರ, ಇದರಿಂದ ಬಹಳಷ್ಟು ಮಕ್ಕಳು ಉತ್ತೀರ್ಣದ ಲಾಭ ಪಡೆದಿದ್ದಾರೆ ಎನ್ನುತ್ತವೆ ಅಧಿಕಾರಿ ಮೂಲಗಳು.
ಹಲವು ಸುಧಾರಣಾ ಕ್ರಮ ಹಿನ್ನೆಲೆಯಲ್ಲಿ ಸಾಧನೆ:
ಈ ಮೊದಲು ಪಾಸ್ ಅಂಕ ಶೇ.35ರಷ್ಟಿತ್ತು. ಈ ಬಾರಿ ಶೇ.33ರಿಂದ ಶೇ.35ರೊಳಗೆ ಅಂಕಗಳನ್ನು ಪಡೆದು ಪಾಸಾದವರ ಸಂಖ್ಯೆ 1531 ಮಾತ್ರ. ಇದರಿಂದ ಫಲಿತಾಂಶದ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಿಲ್ಲ. ಬದಲಿಗೆ ಐಸಿಹಾಸಿಕ ಫಲಿತಾಂಶಕ್ಕೆ ಇಲಾಖೆ ಕೈಗೊಂಡ ಹತ್ತು ಹಲವು ಸುಧಾರಣಾ ಕ್ರಮಗಳೇ ಕಾರಣ. ವಿದ್ಯಾರ್ಥಿಗಳನ್ನು ಬೆಳಗ್ಗೆ ಸಂಜೆ ಎಚ್ಚರಗೊಳಿಸಿ ಓದಿನಲ್ಲಿ ತೊಡಗಿಸು ವೇಕ್ ಅಪ್ ಕಾಲ್‌ನಿಂದ ಹಿಡಿದು ವಿಶೇಷ ತರಗತಿಗಳು, ಮೂರು ಪೂರ್ವ ಸಿದ್ಧತಾ ಪರೀಕ್ಷೆ. ಇದರಲ್ಲಿ ಫೇಲಾದವರನ್ನು ಪತ್ತೆ ಹೆಚ್ಚಿ ವಿಶೇಷ ಕಾಳಜಿ ವಹಿಸಿ ವಾರ್ಷಿಕ ಪರೀಕ್ಷೆ ವೇಳೆಗೆ ಕಲಿಕಾ ಗುಣಮಟ್ಟ ಸುಧಾರಿಸಲು ಶಿಕ್ಷಕರು ಪಟ್ಟ ಶ್ರಮ. ಸಾಮಾನ್ಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದು, ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ಪೋಷಕರ ಸಭೆ ಆಯೋಜನೆ ಅವರ ಮಕ್ಕಳ ಕಲಿಕಾ ಮಟ್ಟದ ಮಾಹಿತಿ ನೀಡಿ ಮನೆಯಲ್ಲೂ ಕಲಿಕೆಗೆ ಒತ್ತು ನೀಡಲು ಕ್ರಮ ವಹಿಸಿದ್ದು ಫಲಿತಾಂಶಕ್ಕೆ ಕಾರಣ ಎಂದು ಸಚಿವರು ವಿವರಿಸಿದರು.
ಯಾವುದೇ ಗ್ರೇಸ್ ಅಂಕ ನೀಡಿಲ್ಲ
ಆದರೆ, ಈ ಬಾರಿ ಮುಖ್ಯಮಂತ್ರಿ ಅವರ ಸ್ಪಷ್ಟ ಸೂಚನೆ ಮೇರೆಗೆ ಯಾವುದೇ ಗ್ರೇಸ್ ಅಂಕ ನೀಡಿಲ್ಲ. ಆದರೆ, ತರಗತಿ ಬೋಧನೆ, ಮಕ್ಕಳ ಕಲಿಕಾ ಮಟ್ಟ ಸುಧಾರಣೆ ಸೇರಿದಂತೆ ಫಲಿತಾಂಶ ಹೆಚ್ಚಿಸಲು ಕೈಗೊಂಡ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು ದಾಖಲೆ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ಸಚಿವ ಮಧು ಹೇಳಿದರು.
