ನೆಲಮಂಗಲ: ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಶಿಸ್ತು ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಹೊಯ್ಸಳ ಪಿಯು ಕಾಲೇಜಿನ ಮುಖ್ಯಸ್ಥ ರಾಮಕೃಷ್ಣಪ್ಪ ತಿಳಿಸಿದರು
ನೆಲಮಂಗಲ: ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಶಿಸ್ತು ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಹೊಯ್ಸಳ ಪಿಯು ಕಾಲೇಜಿನ ಮುಖ್ಯಸ್ಥ ರಾಮಕೃಷ್ಣಪ್ಪ ತಿಳಿಸಿದರು.
ನಗರದ ಹೊಯ್ಸಳ ಪಿಯು ಕಾಲೇಜಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ನಾಗಪುರದಲ್ಲಿ ಪ್ರವೇಶ ಪಡೆದಿರುವ ನೆಲಮಂಗಲದ ವಿದ್ಯಾರ್ಥಿ ದರ್ಶನ್ ಮಂಜುನಾಥ್ ಗೌಡ ಹಾಗೂ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿರುವ ಬಿಂದು ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸಂಸ್ಥೆ ವತಿಯಿಂದ ತಲ್ಲಾ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿ ಮಾತನಾಡಿದರು.ವಿದ್ಯಾರ್ಥಿಗಳ ಸಾಧನೆಯ ಹಿಂದೆ ಉಪನ್ಯಾಸಕರ ನಿರಂತರ ಪರಿಶ್ರಮವಿದೆ. ಪ್ರತಿ ವಿಭಾಗದಲ್ಲಿಯೂ 8 ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಪ್ರತಿವರ್ಷ ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಗೌರಿಶಂಕರ್ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಇಂದು ಪ್ರತಿಫಲ ದೊರೆತಿದೆ. ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಸ್ಥೆಯ ಉದ್ದೇಶ ಇತರರಿಗೂ ಮಾದರಿ. ಮುಂದಿನ ದಿನಗಳಲ್ಲಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಅಗತ್ಯ ಮಾರ್ಗದರ್ಶನ ನೀಡಲು ಸಂಸ್ಥೆ ಮುತುವರ್ಜಿ ವಹಿಸಲಿದೆ ಎಂದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಗೋಪಾಲ್, ಉಪಪ್ರಾಂಶುಪಾಲ ಚಿದಾನಂದಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪೂರ್ಣಿಮಾ, ಮಹದೇವಪ್ಪ ಗೌಡ, ಹರೀಶ್, ಐಶ್ವರ್ಯ ಶೆಟ್ಟಿ, ಹರ್ಷಿತಾ, ಸುಜಾತ, ಕರುಣಾಕರ ನಾಯ್ಡು, ಶಶಿಧರ್, ಶ್ರೀಧರ್ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪೋಟೋ - 7ಕೆಎನ್ಎಲ್ಎಂ1 -ನೆಲಮಂಗಲದ ಹೊಯ್ಸಳ ಪಿಯು ಕಾಲೇಜಿನಲ್ಲಿ ನಾಗಪುರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿ ದರ್ಶನ್ ಮಂಜುನಾಥ್ ಗೌಡ ಹಾಗೂ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿರುವ ಬಿಂದು ಅವರ ಶೈಕ್ಷಣಿಕ ಸಾಧನೆ ಗುರುತಿಸಿ ಸಂಸ್ಥೆಯಿಂದ ತಲ್ಲಾ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು.