ರೈತರ ಆರ್ಥಿಕ ಬದುಕಿನಲ್ಲಿ ಸಹಕಾರ ಸಂಘ ಬಹುಮುಖ್ಯ: ಗಂಗಾಧರ ಹಿರೇಮಾಗಡಿ

| Published : Aug 23 2025, 02:00 AM IST

ರೈತರ ಆರ್ಥಿಕ ಬದುಕಿನಲ್ಲಿ ಸಹಕಾರ ಸಂಘ ಬಹುಮುಖ್ಯ: ಗಂಗಾಧರ ಹಿರೇಮಾಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘಗಳು ರೈತರ, ಷೇರುದಾರರ ಹಿತ ಕಾಪಾಡಲು ಸ್ಥಾಪನೆಯಾಗಿರುತ್ತವೆ. ಅಲ್ಲದೇ ಆರ್ಥಿಕವಾಗಿ ಸಾಲ ಸೌಲಭ್ಯ ಮತ್ತು ವ್ಯವಹಾರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸಹಾಯ ನೀಡುವ ಉದ್ದೇಶ ಹೊಂದಿರುತ್ತವೆ ಎಂದು ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಗಂಗಾಧರ ಹಿರೇಮಾಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಸಹಕಾರ ಭಾರತಿ ಮ್ಯಾಮ್ ಕೋಸ್ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ರೈತರ ಆರ್ಥಿಕ ಬದುಕಿನಲ್ಲಿ ಸಹಕಾರ ಸಂಘ ಬಹು ಮುಖ್ಯ ಪಾತ್ರ ವಹಿಸುತ್ತವೆ. ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಬೇಕಾಗುವ ಸಾಮಗ್ರಿಗಳು ಮತ್ತು ಕೃಷಿ ಕೆಲಸದಲ್ಲಿ ನಿರತರಾಗಿದ್ದಾಗ ಅವಘಡಗಳು ಸಂಭವಿಸಿದರೆ ನೆರವು ನೀಡಲು ಸಹಕಾರ ಸಂಘಗಳು ಅಗತ್ಯವಾಗಿವೆ. ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿತ್ವದಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು

ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಹುಲ್ಕುಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮ್ಯಾಮ್ ಕೋಸ್ ಸಂಘವು ಪ್ರಸಕ್ತವಾಗಿ ೫ ಕೋಟಿ ೫೨ ಲಕ್ಷ ರುಪಾಯಿಗಳ ಲಾಭವನ್ನು ಗಳಿಸಿದೆ. ಷೇರುದಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದಾಗ ಸಹಕಾರ ಸಂಘವು ನೆರವು ನೀಡುತ್ತಾ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಮ್ಯಾಮ್ ಕೋಸ್ ನಿರ್ದೇಶಕ ತಿಮ್ಮಪ್ಪ ಶ್ರೀಧರ ಪುರ, ಕೀರ್ತಿರಾಜ್ ಗೌಡ ಕಾನಹಳ್ಳಿ ವಿರೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆನ್ನವೀರಪ್ಪ, ಸಹಕಾರ ಭಾರತಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ವಿಜೇಂದ್ರ ಗೌಡ ತಲಗುಂದ, ಉಪಾಧ್ಯಕ್ಷರಾದ ಗೌರಮ್ಮ ಭಂಡಾರಿ, ಸತೀಶ್ ಬೊಮ್ಮನಹಳ್ಳಿ, ಗಜಾನನ ರಾವ್, ರಾಜೇಂದ್ರ ನಾಯ್ಕ್, ಡಾ.ಜ್ಞಾನೇಶ್, ಪಾಣಿ ರಾಜಪ್ಪ, ಬಂಗಾರಸ್ವಾಮಿ ಕಂತನಹಳ್ಳಿ, ಯೋಗೀಶ್ ವಕೀಲ ಸೇರಿದಂತೆ ಎಲ್ಲಾ ನಿರ್ದೇಶಕರು ಮತ್ತು ಷೇರುದಾರರು ಭಾಗವಹಿಸಿದ್ದರು. ಕುಮಾರಿ ಧನ್ಯಾ ಪ್ರಾರ್ಥಿಸಿ, ಕೀರ್ತಿ ಗೌಡ ಕಾನಹಳ್ಳಿ ಸ್ವಾಗತಿಸಿ, ವಿಜೇಂದ್ರ ಕುಮಾರ್ ತಲಗುಂದ ವಂದಿಸಿದರು.