ಪಾರದರ್ಶಕ ಇದ್ದರೆ ಸಹಕಾರಿ ಸಂಘ ಬೆಳೆಯಲು ಸಾಧ್ಯ: ಎಂ.ಸಿ.ಮುಲ್ಲಾ

| Published : Nov 23 2025, 03:30 AM IST

ಸಾರಾಂಶ

ಸಹಾಕಾರಿ ಸಂಘಗಳು ಬೆಳೆಯಲು ಕಾರ್ಯದಕ್ಷತೆ ಹಾಗೂ ಪಾರದರ್ಶಕತೆ ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಎಂ.ಸಿ.ಮುಲ್ಲಾ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಹಾಕಾರಿ ಸಂಘಗಳು ಬೆಳೆಯಲು ಕಾರ್ಯದಕ್ಷತೆ ಹಾಗೂ ಪಾರದರ್ಶಕತೆ ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಎಂ.ಸಿ.ಮುಲ್ಲಾ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷ-೨೦೨೫ ಹಾಗೂ ೭೨ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಯಶಸ್ವಿ ಸಹಕಾರಿ ನಾವಿನ್ಯತೆಯಿಂದ ಕೂಡಿರಬೇಕು. ತಂತ್ರಜ್ಞಾನ ಯೋಜನೆಯು ಸಹಕಾರ ಸಂಘಗಳಿಗೆ ಅನೇಕ ಸೇವೆಗಳನ್ನು ಒದಗಿಸಿ ನೋಡಲ್ ಕೇಂದ್ರವಾಗಲು ಸಹಕಾರಿಯಾಗಿದೆ. ಈ ಮೂಲಕ ಸಹಕಾರಿ ಸಂಸ್ಥೆಗಳು ಪ್ರಗತಿ ಹೊಂದಲು ಸಾಧ್ಯ ಸಹಕಾರಿ ಸಂಘಗಳು ಅಭಿವೃದ್ಧಿಯಾಗಬೇಕೆಂದರೇ ಪ್ರತಿಯೊಬ್ಬರೂ ಒಮ್ಮನಸ್ಸಿನಿಂದ ಕಾರ್ಯ ನಿರ್ವಹಿಸಬೇಕು. ಸಹಕಾರ ಧ್ವಜದ ತತ್ವಗಳನ್ನು ಮೈಗೂಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.ಭೀಮಾಶಂಕರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಂ.ಆರ್.ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಶ್ರೀಮಂತ ಇಂಡಿ, ಸಹಕಾರಿ ಸಂಘಗಳ ಉಪನಿಬಂಧಕರಾದ ಕೆ.ಎಸ್.ಭಾಗ್ಯಶ್ರೀ ಮಾತನಾಡಿ, ಆತ್ಮ ನಿರ್ಭರ ಭಾರತದ ಗುರಿಯನ್ನು ತಲುಪಲು ಸಹಕಾರ ಸಂಸ್ಥೆಗಳು ವಾಹಕಗಳಾಗಿವೆ. ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಹು ಸೇವಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಹಾಗೆಯೇ ಸ್ವಾವಲಂಬಿ ಆರ್ಥಿಕತೆಯತ್ತ ದಾಪುಗಾಲಿಡುತ್ತಿರುವ ರಾಷ್ಟ್ರದಲ್ಲಿ ಸಹಕಾರಿ ಸಂಸ್ಥೆಗಳು ವೇಗವರ್ಧಕಗಳಾಗಿ ಕೆಲಸ ಮಾಡುತ್ತಿವೆ. ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅವಧಿಯಲ್ಲಿ ವಿಚಾರಗೋಷ್ಠಿಗಳು, ಸ್ಪರ್ಧೆಗಳು ಸಹಕಾರ ಕ್ಷೇತ್ರದ ಬಗ್ಗೆ ಜಾಗೃತಿ ಉಂಟು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಸಮಾರಂಭದಲ್ಲಿ ಪ್ರಮುಖರಾದ ಗುರುಶಾಂತ ನಿಡೋಣಿ, ಅಶೋಕ ಪಾಟೀಲ, ರೇಷ್ಮಾ ಪೂಜಾರಿ, ಕಲ್ಲನಗೌಡ ಪಾಟೀಲ, ಅರವಿಂದ ಪಾಟೀಲ, ಜಗದೀಶ ಕ್ಷತ್ರಿ, ಅಬ್ದುಲಸತ್ತಾರ ಬಾಗವಾನ, ಬಾಬುಗೌಡ ಪಾಟೀಲ, ಸಂತೋಷ ಗೌಳಿ, ಬಸವರಾಜ ರಾವೂರ, ಕೆ.ಎಚ್.ವಡ್ಡರ, ಕೆ.ಎನ್.ಪಾರಗೊಂಡ, ಐ.ಡಿ.ದಂದರಗಿ ಸೇರಿದಂತೆ ಸಹಕಾರಿ ಧುರೀಣರು, ರೈತರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.