ಸಾರಾಂಶ
ನರೇಗಲ್ಲ: ಇತ್ತೀಚಿನ ದಿನಮಾನಗಳಲ್ಲಿ ಜನತೆ ತಮ್ಮ ಅಗತ್ಯತೆ ಪೂರೈಸಿಕೊಳ್ಳಲು ಬ್ಯಾಂಕೇತರ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಮರುಪಾವತಿಸಲಾಗದೇ ಸಾವಿಗೆ ಶರಣಾದ ಪ್ರಸಂಗ ನೋಡಿದ್ದೇವೆ, ಆದರೆ ಕೋ ಆಪರೇಟಿವ್ ಸೊಸೈಟಿಗಳು ಹಣದ ಸದ್ವಿನಿಯೋಗಪಡಿಸಿಕೊಳ್ಳುವ ವ್ಯಕ್ತಿಗಳಿಗೆ ಅವರ ಅವಶ್ಯಕತೆ ಹಾಗೂ ವ್ಯವಹಾರದ ಪ್ರಮಾಣವನ್ನಾಧರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಜನಸ್ನೇಹಿಯಾಗಿ ಕಾರ್ಯ ಮಾಡುತ್ತಿವೆ ಎಂದು ಮುಖಂಡ ಶಶಿಧರ ಸಂಕನಗೌಡ್ರ ಹೇಳಿದರು.
ಸ್ಥಳೀಯ ಕಾಳಿಕಾಂಬಾ ದೇವಸ್ಥಾನದ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ಲಕ್ಷ್ಮೀ ಮಲ್ಟಿಸ್ಟೇಟ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ದಿನಮಾನಗಳಲ್ಲಿ ವ್ಯವಹಾರ ವಾಣಿಜ್ಯ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಅವುಗಳ ಆರ್ಥಿಕ ಸದೃಢತೆಗೆ ಸಹಕಾರಿ ಬ್ಯಾಂಕಗಳು, ಸೊಸೈಟಿಗಳು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಆರ್ಥಿಕ ಸಲಹೆಗಾರ ಚಂದ್ರಶೇಖರ ಮಣೆಗಾರ ಮಾತನಾಡಿ, ಸಂಸ್ಥೆ ಕಳೆದ 25 ವರ್ಷಗಳಿಂದ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದು, ನರೇಗಲ್ಲಿನಲ್ಲಿ ಪ್ರಾರಂಭವಾದ ಈ ಬ್ಯಾಂಕ್ ಕಳೆದ ಮೂರು ವರ್ಷಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಒಂದು ಕೋಟಿ ಸಾಲ ನೀಡಿದರೆ ₹1.40 ಕೊಟಿ ಠೇವಣಿ ಸಂಗ್ರಹಿಸಿದೆ, ಇಲ್ಲಿನ ಗ್ರಾಹಕರು ಕೂಡಾ ಪ್ರಾಮಾಣಿಕವಾಗಿ ತೆಗೆದುಕೊಂಡ ಸಾಲ ಮರುಪಾವತಿಸುತ್ತಿರುವುದು ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ದಕ್ಷತೆ ಎತ್ತಿ ತೋರಿಸುತ್ತದೆ ಎಂದರು.ಈ ಸಂದರ್ಭದಲ್ಲಿ ವ್ಯಾಪಾರಸ್ಥ ರವಿ ಪೂಜಾರ, ವಿರೇಶ ಶರೆವಾಡ, ಬಸವರಾಜ ಮಾರನಬಸರಿ, ದೊಡ್ಡಹನಮಪ್ಪ ಭಜಂತ್ರಿ, ಕಲ್ಲಪ್ಪ ಮುಳಗುಂದ, ಶಿವಕುಮಾರ ಹುನಗುಂದ, ಈರಣ್ಣ ಕರ್ಜಗಿ, ಹರೀಶ ಕುಷ್ಟಗಿ, ಸಿದ್ದಪ್ಪ ಸೂಡಿ, ಸುರೇಶ ಸಂತೋಜಿ, ಪ್ರದೀಪ ಲಕ್ಕನಗೌಡ್ರ, ಚನ್ನಬಸಪ್ಪ ಸಕ್ರೋಜಿ, ಮಹೇಶ ಕಾಗಿ, ಅಕ್ಷಯ ಅರಹುಣಸಿ, ಸಿದ್ದು ಸೂಡಿ ಸೇರಿದಂತೆ ಗ್ರಾಹಕರು ಇದ್ದರು.